ಉತ್ತಮ ಸತ್ಯ
ಮಾತು ಆವಶ್ಯವಿದ್ದರೆ ಮಾತನಾಡು ಇಲ್ಲದಿದ್ದರೆ ಸುಮ್ಮನಿದ್ದುಬಿಡು , ಮಾತು ಕಡಿಮೆ ಇರಲಿ ಸತ್ಯವಿರಲಿ. ಅತಿ ಮಾತು ಮನಸ್ಸಿನ ಶಾಂತತೆ ಕೆಡಿಸುತ್ತದೆ. ಸುಳ್ಳು ನುಡಿಯುವವ ಸದಾ ಅಂಜಿಕೆಯಲ್ಲಿಯೇ ಬದುಕಬೇಕು. ಒಂದು ಸುಳ್ಳು ಸಾಧಿಸಲು ನೂರು ಸುಳ್ಳು ಹೇಳಬೇಕು. ಅದರಿಂದ ಪಾಪಕರ್ಮದ ಪ್ರಭಾವವಾಗಿ ಮನುಷ್ಯ ಅವನತಿಗಿಡಾಗುತ್ತಾನೆ.
ಸತ್ಯವು ಸತ್ ಎನ್ನುವ ಪದದಿಂದ ಬಂದಿದೆ. ಸತ್ ಎಂದರೆ ಮುರಿಯಲಾರದ, ಅಂತ್ಯವಿಲ್ಲದ್ದು ಎಂದು. ಆದ್ದರಿಂದ ಸತ್ಯವನ್ನು ಪಾಲಿಸಿ ಅಖಂಡ ಸುಖವನ್ನು ಪಡೆಯಿರಿ ಎಂದು ಅರ್ಥನೀಡುತ್ತದೆ.
ಉತ್ತಮ ಸತ್ಯವು ವಿಶ್ವಾಸ ವೃದ್ದಿಸುವದು. ಜನರ ಪ್ರೀತಿ ಗಳಿಸುವಂತದು. ಸ್ವಾದ್ಯಾದ ತತ್ವದಿಂದ ಮೋಕ್ಷ ಮಾರ್ಗದ ದರ್ಶನವಾಗುತ್ತದೆ. ಸತ್ಯವೇ ಜಿನವಾಣಿಯ ಸೂತ್ರವಾಗಿದೆ. ಸತ್ಯವಂತರನ್ನು ಎಲ್ಲರೂ ಗೌರವಿಸುವರು. ಶರೀರ ಮನಸ್ಸಿನ ಸ್ವಾಸ್ಥ್ಯದ ಮೂಲವೆ ಸತ್ಯ.
ಸತ್ಯವಚನದಿಂದ ಪರಮಮೋಕ್ಷ, ತ್ರಿಬುವನ ಕೀರ್ತಿ ಲಭಿಸುತ್ತದೆ. ಸತ್ಯವು ಸುಂದರವಾಗಿದೆ. ಕಂಠಹಾರವಾಗಿದೆ. ಜಯಕಾರದ ಮೂಲವಾಗಿದೆ. ಪರೋಪಕಾರಿ ಸಜ್ಜನ ಹಿತಕಾರಿ, ಸತ್ಯ ಜಿನಾಮೃತ ಪಾವನ ಹಿತಕಾರಿ ತುಡುಗು ಭಯ ನಿವಾರಿ ನಿಂದಾಹಾರಿ, ಜೀವದಯ ಚಿತ್ತಗುಣಕಾರಿ ,ಕ್ರೋಧ ಕಷಾಯದಿಂದ ವಿಮುಕ್ತಿ,, ಸ್ವರ್ಗದ ದಾರಿ, ಪ್ರಸಿದ್ದಿ, ಕರ್ಮಕಲಂಕ ದೂರಮಾಡುವಂಥದ್ದು ಸತ್ಯ ಸುರನರಾದಿ ಪೂಜಿಸುವ ದಿವ್ಯಮಂತ್ರವಾಗಿದೆ.
ಅಮೃತ ಸಮಾನರಸ ಸತ್ಯ
ಧರ್ಮರಾಜನ ಕೀರ್ತಿ ಸತ್ಯ
ಹರಿಶ್ಚಂದ್ರನ ಸತ್ಯಕೆ ರಾಜಧಾನ
ಸತ್ಯ ಧರ್ಮದಿ ಸಿಗುವುದು
ಅಘಣಿತ ಫಲನುದಾನ
ಓಂ ಹೃಂ ಸತ್ಯಧರ್ಮಾಂಗಾಯ ನಮ: ಜಲಗಂಧಾದಿ ಅರ್ಘ್ಯ ನಿರೂಪಾಮಿತಿ ಸ್ವಾಹಾ.
ಲಲಿತಾ ಮ ಕ್ಯಾಸನ್ನವರ
ರಾಜ್ಯ ಪುರಸ್ಕೃತ ಶಿಕ್ಷಕಿ.