ಸಿಂದಗಿ: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜ್ಯಾಳ ಅವರು ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದಾರೆ.
ಶಿವಾನಂದ ಪಾಟೀಲ್ ಅವರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಶಿವಾನಂದ ಪಾಟೀಲ್ ಅವ ರು ಇತ್ತೀಚೆಗೆ ರಾಜಕೀಯದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದರು.
ವಿಧಾನಸಭೆ ಚುನಾವಣೆಗೆ ಜೆಡಿಎಸ್ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಶಿವಾನಂದ ಪಾಟೀಲ್ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಅವರ ನೇತೃತ್ವದಲ್ಲಿ ಕಳೇದ 18 ರಂದು ಸಿಂದಗಿಯಲ್ಲಿ ನಡೆದ ಪಂಚರತ್ನ ರಥಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ಸಂತಾಪ: ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮುದ್ದೆಬಿಹಾಳದಲ್ಲಿ ನಡೆಯುವ ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನು ರದ್ದುಗೊಳಿಸಿ ಸೋಮಜ್ಯಾಳ ಗ್ರಾಮಕ್ಕೆ ಆಗಮಿಸಿ ಮಾತನಾಡಿ, ಬಡ ಕುಟುಂಬದಲ್ಲಿ ಜನಿಸಿದ ಶಿವಾನಂದ ಪಾಟೀಲರು ಗಡಿಯಲ್ಲಿ ದೇಶದ ರಕ್ಷಣೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ಕಷ್ಟವನ್ನು ಅರಿತು ಜನರ ಸೇವೆಗೆ ಮುಂದಾಗಿದ್ದರು ಅದನ್ನು ಗುರುತಿಸಿ ಸಿಂದಗಿಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುತ್ತಾರೆ ಎಂದು ಯಾರ ಮಾತನ್ನು ಲೆಕ್ಕಿಸದೇ ಅವರಿಗೆ ಪಕ್ಷದ ಟಿಕೇಟ್ ಘೋಷಣೆ ಮಾಡಿದ್ದೆ ಆ ರೀತಿಯಲ್ಲಿ ಸಮರ್ಥವಾಗಿ ಸೇವಕನಾಗಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವಲ್ಲಿ ದೊಡ್ಡ ಪ್ರಮಾಣದ ಪಡೆ ನಿರ್ಮಿಸಿದ್ದರು ಅಂತವರು ಮತ್ತೆ ಸಿಗಲಾರರು ಪಾಟೀಲರ ಅಗಲಿಕೆಯಿಂದ ಈ ಭಾಗದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಭಾವುಕರಾದರು.
ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ನಾನು ದಾರವಾಡದಲ್ಲಿ ಶಿಕ್ಷಣ ಪಡೆಯುತ್ತಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಿದ್ದ ಶಿವಾನಂದ ಪಾಟೀಲರು ಜಿ.ಆರ್.ಗ್ರುಪ್ ತೆರೆದು ಹಲವಾರು ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ.
ಸರಳ ಸಜ್ಜನಿಕೆ ವ್ಯಕ್ತಿ ಬಡವ ಬಲ್ಲಿದ ಎನ್ನದೇ ಕಷ್ಟ ಎಂದುಕೊಂಡು ಬಂದವರಿಗೆಲ್ಲ ಆಶಾಕಿರಣವಾಗಿದ್ದರು ಎಂದು ತಾಲೂಕಿನಾದ್ಯಂತ ಕೇಳಿಬರುತ್ತಿತ್ತು ಇವರು ಸದ್ಯ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಘೋಷಿತರಾಗಿದ್ದರು ಅನುಭವಿ ರಾಜಕಾರಣಿಯ ಹಾಗೆ ಸಂಘಟನೆ ಮಾಡಿದ್ದರು ಅವರಿಂದ ಸಂಘಟನೆ ಚಾತುರ್ಯ ಕಲಿಯಬೇಕು ಬೆಳಿಗ್ಗೆಯಿಂದ ಕಾರ್ಯಕ್ರಮದಲ್ಲಿ ತೊಡಗಿದ್ದು ರಾತ್ರಿ ಹೆಣವಾಗುತ್ತಾರೆ ಎಂದರೆ ನಿಜವಾದ ಸಮಾಜ ಸೇವಕನನ್ನು ಕಳೆದುಕೊಂಡಾಗಿದೆ ಎಂದರು.
ನೀರು ಬಳಕೆದಾರರ ಸಂಘದ ಅದ್ಯಕ್ಷ ಯಸವಂತ್ರಾಯಗೌಡ ರೂಗಿ ಮಾತನಾಡಿ, ಪಾಟೀಲರು ಸುಮಾರು 20 ವರ್ಷಗಳಿಂದ ಬಡಕುಟುಂಬಗಳಿಗೆ ಆಶ್ರಯದಾತರಾಗಿದ್ದರು. ನಮ್ಮ ಕುಟುಂಬದ ಒಬ್ಬ ಸದಸ್ಯರಾಗಿ ನಮ್ಮ ಕುಟುಂಬಕ್ಕೂ ಸಹಾಯಹಸ್ತ ನೀಡಿದ್ದು ನಾನು ಮರೆತಿಲ್ಲ. ಇಂತವರು ಈ ಕ್ಷೇತ್ರಕ್ಕೆ ಅವಶ್ಯಕತೆಯಿತ್ತು ಅದನ್ನು ನಿಭಾಯಿಸುತ್ತಾರೆ ಆದರೆ ದೇವರಿಗೆ ಇವರ ಸೇವೆ ಬೇಡವಾಯಿತು ಅನಿಸುತ್ತೆ ಅದಕ್ಕೆ ಅವರನ್ನು ಬೇಗ ಕರೆದುಕೊಂಡಿದ್ದಾರೆ ಎಂದು ಕಣ್ಣಿರಿಟ್ಟರು.
ಶಾಸಕ ರಮೇಶ ಬೂಸನೂರ ಮಾತನಾಡಿ, ಯೋಧ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲರು ಹೃದಯಘಾತದಿಂದ ಮೃತಪಟ್ಟಿದ್ದು ಒಬ್ಬ ಸಮಾಜ ಸೇವಕನನ್ನು ಕಳೆದುಕೊಂಡಂತಾಗಿದೆ ಎಂದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಬಿ.ಜಿ.ಪಾಟೀಲ ಹಲಸಂಗಿ, ಇಂಡಿ ಜೆಡಿಎಸ್ ಅಭ್ಯರ್ಥೀ ಬಿ.ಡಿ.ಪಾಟೀಲ, ತಾಲೂಕಾಧ್ಯಕ್ಷ ದಾನಪ್ಪಗೌಡ ಚನಗೊಂಡ, ಪ್ರಕಾಶ ಹಿರೆಕುರಬರ, ವಿಜುಗೌಡ ಪಾಟೀಲ ಕರ್ನಾಳ, ಮಹಾಂತೇಶ ಪರಗೊಂಡ, ಮಹಿಳಾ ಅದ್ಯಕ್ಷ ಜ್ಯೋತಿ ಗುಡಿಮನಿ ಸೇರಿದಂತೆ ಹಲವರು ಸಂತಾಪ ಸೂಚಿಸಿದರು.