ಸಿಂದಗಿ: ಕನ್ನಡವೆಂಬುದು ಬರೀ ಭಾಷೆಯಲ್ಲ ಅದು ನಮ್ಮ ಸಂಸ್ಕೃತಿ, ಕನ್ನಡ ಭಾಷೆಗೆ ವಿಶ್ವದಲ್ಲಿಯೆ ಅಗ್ರ ಸ್ಥಾನವಿದೆ ಕನ್ನಡ ಸಂಸ್ಕೃತಿ ನಮ್ಮೆಲ್ಲರ ಬದುಕಿನ ಸಂಸ್ಕೃತಿಯಾಗಬೇಕು ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ ಹೇಳಿದರು.
ತಹಸೀಲ್ದಾರ ಕಛೇರಿಯಲ್ಲಿ ಭುವನೇಶ್ವರಿಯ ಭಾವಚಿತ್ರಕ್ಕೆ ಹಾಗೂ ವಿಜಯಪುರ ರಸ್ತೆಯಲ್ಲಿರುವ ಭುವನೇಶ್ವರಿ ವೃತ್ತಕ್ಕೆ ಪೂಜೆ ಸಲ್ಲಿಸಿ ನಂತರ ಕನ್ನಡದ ಕಟ್ಟಾಳು ಚಿತ್ರನಟ ದಿ. ಪುನೀತಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್.ಬಿ.ಚೌಧರಿ ಮಾತನಾಡಿ, ದೇಶದ ಹೆಚ್ಚಿನ ದಾಖಲೆಗಳು ಕನ್ನಡ ಭಾಷೆಯಲ್ಲಿವೆ. ದೇಶದ ಭಾಷೆ ಎನಿಸಿರುವ ಹಿಂದಿ 9 ಜ್ಞಾನಪೀಠ ಪ್ರಶಸ್ತಿ ಗಳಿಸಿದ್ದರೆ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿವೆ. ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. ಅಷ್ಟೇ ಅಲ್ಲದೆ ಸಸ್ಯ ಮತ್ತು ಪ್ರಾಣಿ ಸಂಕುಲ ಅತೀ ಹೆಚ್ಚು ಕರುನಾಡಿನಲ್ಲಿವೆ.
ಹಲ್ಮಿಡಿ ಶಾಸನಲ್ಲಿ ಕವಿರಾಜ ಮಾರ್ಗದಲ್ಲಿ ಕನ್ನಡ ಕಂಪು ಮೊಳಗಿದೆ. ಹೊಸಯುಗದಲ್ಲಿ ಕನ್ನಡ ಅಳಿವು-ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ವರ್ಷವಿಡಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮ್ಮೇಳನಗಳನ್ನು ಹಮ್ಮಿಕೊಂಡು ಕನ್ನಡ ನುಡಿಯನ್ನು ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಆ ಹಿನ್ನಲೆಯಲ್ಲಿ ನಮ್ಮ ನೆಲದ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ನೆಲ-ಜಲ ರಕ್ಷಣೆಗಾಗಿ ನಾವೆಲ್ಲರೂ ಒಂದಾಗಬೇಕಾಗಿದೆ ಎಂದರು.
ತಾಪಂ ಇ ಓ ಕೆ.ಹೊಂಗಯ್ಯ, ಬಿಇಓ ಎಸ್..ಎಂ. ನೀರಲಗಿ, ಲೋಕೋಪಯೋಗಿ ಇಲಾಖೆ ಎಇಇ ಆರ್.ಆರ್.ಕತ್ತಿ, ಪ್ರಾಧ್ಯಾಪಕ ಪಿ.ಎಂ.ಮಡಿವಾಳರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಆನಂದ ಮಾಡಗಿ, ಎಸ್.ಎಸ್.ಲಂಗೋಟಿ, ಆರ್.ಆರ್.ನಿಂಬಾಳಕರ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಸತೀಶಕುಮಾರ ಜಿ, ಶಂಕರ ಬತಾಸೆ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಶ್ರೀಮಂತ ಪಾಟೀಲ, ಮಹಾಂತೇಶ ನೂಲಾನವರ, ಸೇರಿದಂತೆ ಇತರರು ಇದ್ದರು.
ಸರಳ ಸಮಾರಂಭ: ರಾಜ್ಯದಲ್ಲಿ ಕೋವಿಡ್ ಅವರಿಸಿರುವ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸರಳವಾಗಿ ಆಚರಿಸಲಾಯಿತು.
ವರದಿ: ಪಂಡಿತ್ ಯಂಪೂರೆ, ಸಿಂದಗಿ