೬೬ ನೇ ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿ ನೆಹರೂ ನಗರದ ಕನ್ನಡ ಭವನದಲ್ಲಿ ಸರಳವಾಗಿ ಆಚರಿಸಲಾಯಿತು. ನ್ಯಾಯವಾದಿ ರಾಜು ಬಾಗೇವಾಡಿ ಅವರು ಕನ್ನಡ ನುಡಿ ಕನ್ನಡ ನಾಡಿನ ವೈಭವ ಇತಿಹಾಸ ಕುರಿತು ಮಾತನಾಡಿದರು.
ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಸಿ.ಎಂ ಬೂದಿಹಾಳ ಅವರು ಕನ್ನಡವನ್ನು ಬಳಸುವುದರ ಮೂಲಕ ಉಳಿಸಿ ಬೆಳೆಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು, ಇಂಜನಿಯರ ಹಾಗೂ ವೈದ್ಯ ಶಿಕ್ಷಣದ ಪುಸ್ತಕಗಳು ಕನ್ನಡದಲ್ಲಿ ಬರೆದು ಕನ್ನಡ ನಾಡಿನ ಮಕ್ಕಳಿಗೆ ಕನ್ನಡದಲ್ಲಿಯೆ ಕಲಿಯಲು ಅವಕಾಶ ಮಾಡಿಕೊಡಬೇಕೆಂದು ಅನುವಾದಕರಿಗೆ, ಸಾಹಿತಿಗಳಿಗೆ ವಿನ೦ತಿ ಮಾಡಿಕೊಂಡರು.
ಶ್ರೀಮತಿ ಭಾರತಿ ಮಠದ ನಾಡು ನುಡಿಯ ಬಗ್ಗೆ ಅಭಿಮಾನ ಬೆಳಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಕಸಾಪ ಅಧ್ಯಕ್ಷ ಶ ಮೋಹನಗೌಡ ಪಾಟೀಲ, ಸಾಹಿತಿ ಸ ರಾ ಸುಳಕೂಡೆ, ಶೈಲಜಾ ಬಿಂಗೆ, ಜಯಶೀಲಾ ಬ್ಯಾಕೂಡ, ಶಾಂತಾ ಮಸೂತಿ, ಚೇತನ ಏಣಗಿಮಠ ಮುಂತಾದವರು ಭಾಗವಹಿಸಿದ್ದರು.
ಕಸಾಪ ಮಾಜಿ ಪ್ರಧಾನ ಕಾರ್ಯದಶಿ೯ ಎಂ. ವೈ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.