ಹಳ್ಳೂರ- ಗ್ರಾಮದಲ್ಲಿರುವ ಮೂರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮಿ ದೇವರ ಕಾರ್ತಿಕೋತ್ಸವ ಅತೀ ವಿಜೃಂಭಣೆಯಿಂದ ನಡೆಯಿತು.
ಪಲ್ಲಕ್ಕಿ ಉತ್ಸವ ಆಚರಣೆಯಲ್ಲಿ ಸಹಸ್ರಾರು ಭಕ್ತರು ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಪಲ್ಲಕ್ಕಿ ಮೇಲೆ ಬೆಂಡು ಬತ್ತಾಸು ಖಾರೀಕು ಹಾರಿಸಿ ಹರಕೆ ತೀರಿಸಿದರು.
ಒಬ್ಬರಿಗೊಬ್ಬರು ಬೆಸೆದುಕೊಂಡು ಭಂಡಾರ ಎರಚಿ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾದರು ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಪಲ್ಲಕ್ಕಿ ಉತ್ಸವ ದೊಂದಿಗೆ ಕಾರ್ತಿಕೋತ್ಸವ ಕಾರ್ಯಕ್ರಮವು ಮಂಗಲವಾಯಿತು.ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು. ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಹಾಗೂ ಸುತ್ತಮುತ್ತಲಿನ ಭಕ್ತರು ಸೇರಿದ್ದರು.
ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಸಹಸ್ರಾರು ಭಕ್ತರು ಸೇರಿದ ಕಾರ್ತಿಕೋತ್ಸವ ದಲ್ಲಿ ಮಹಾದೇವ ದೊಡಮನಿ ಅವರ ಮೋಬೈಲ್ ಫೋನು ಕಳೆದಿತ್ತು ಆ ಮೊಬೈಲ್ ಗ್ರಾಮದ ಜಗದೀಶ ಹುಲಗಬಾಳ ಅವರ ಕೈಗೆ ಸಿಕ್ಕ ಮೊಬೈಲ ಕಮಿಟಿ ಹಿರಿಯರ ಕೈಯಲ್ಲಿ ಕೊಟ್ಟು ಮಾನವೀಯತೆ ಮೆರೆದಿದ್ದಕ್ಕೆ ಗುರು ಹಿರಿಯರು ಮೆಚ್ಚುಗೆ ವ್ಯಕ್ತ ಪಡಿಸಿದರು.

