ಕದಂಬ ಸೈನ್ಯ ಕನ್ನಡ ಸಂಘಟನೆ ಮತ್ತು ಕದಂಬವಾಣಿ ದಿನಪತ್ರಿಕೆ, ಮಂಡ್ಯ ವತಿಯಿಂದ ದಿ.೧೦-೧೨-೨೦೨೫ರ ಬುಧವಾರ ಬೆ. ೧೦.೩೦ಕ್ಕೆ ಶ್ರೀ ಕ್ಷೇತ್ರ ಚಂದ್ರವನ, ಶ್ರೀರಂಗಪಟ್ಟಣ ಪೂರ್ವ ವಾಹಿನಿ ಇಲ್ಲಿ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.
ಪರಮಪೂಜ್ಯ ಶ್ರೀ ಡಾ. ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳು, ವೇದ ಬ್ರಹ್ಮ ಗುರು ಡಾ. ಭಾನುಪ್ರಕಾಶ್ ಶರ್ಮಾ ಸ್ವಾಮಿಗಳು, ಶ್ರೀರಂಗಪಟ್ಟಣ ಪರಮಪೂಜ್ಯ ಶ್ರೀ ಚನ್ನವೀರಸ್ವಾಮಿಗಳು, ಧರ್ಮದರ್ಶಿಗಳು, ನೀಲಾದುರ್ಗ ಪರಮೇಶ್ವರ ದೇವಸ್ಥಾನ, ಗೇರಹಳ್ಳಿ, ಸಾತನೂರು ಹೋಬಳಿ ಇವರ ದಿವ್ಯ ಸಾನ್ನಿಧ್ಯ ಮತ್ತು ಆಶಿರ್ವಾದದೊಂದಿಗೆ ಡಾ. ಎನ್.ನರಸಿಂಹಮೂರ್ತಿ, ಬೆಂಗಳೂರು ಇವರು ಕಾರ್ಯಕ್ರಮ ಉದ್ಘಾಟಿಸುವರು.
ಕದಂಬ ಸೈನ್ಯ ರಾಜ್ಯ ಅಧ್ಯಕ್ಷರು ಬೇಕ್ರಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಡಾ. ಈ.ಸಿ.ನಿಂಗರಾಜೇಗೌಡರು ಮಾಜಿ ಸಿಂಡಿಕೇಟ್ ಸೆನೆಟ್ ಸದಸ್ಯರು. ಸಿ.ಡಿ.ಗಂಗಾಧರ್, ಅಧ್ಯಕ್ಷರು ಮೈಷುಗುರ್ ಕಾರ್ಖಾನೆ, ಮಂಡ್ಯ, ಸಚ್ಚಿದಾನಂದ ಇಂಡವಾಲು, ಬಿಜೆಪಿ ನಾಯಕರು, ಶ್ರೀರಂಗಪಟ್ಟಣ, ಹೆಚ್.ಆರ್.ಹರ್ಷ, ಕಾರ್ಯಪಾಲಕ ಇಂಜಿನಿಯರ್, ಎಂ.ಎಲ್.ದಿನೇಶ್, ಅಧ್ಯಕ್ಷರು ಶ್ರೀರಂಗಪಟ್ಟಣ ಪುರಸಭೆ. ವಕೀಲರು ಮಲ್ಲಿಕಾರ್ಜುನಸ್ವಾಮಿ ಪ್ರಶಸ್ತಿ ಪುರಸ್ಕೃತರು ಮತ್ತು ಕವಿಗೋಷ್ಠಿ ಕವಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವರು.
ಕದಂಬ ಕವಿಗೋಷ್ಠಿಯಲ್ಲಿ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ೩೫ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದು ಕವಿಗೋಷ್ಠಿ ಸಂಚಾಲಕರು ಗೊರೂರು ಅನಂತರಾಜು ಮತ್ತು ಬಸವರಾಜು ಜಯಪುರ ಮುಖ್ಯ ಅತಿಥಿಗಳಾಗಿ ಆಶಾಲತಾ ಪುಟ್ಟೇಗೌಡರು, ವಕೀಲರು, ಸರಸ್ವತಮ್ಮ, ಶ್ರೀರಂಗಪಟ್ಟಣ ನಗರ ಅಧ್ಯಕ್ಷರು ಕ.ಸಾ.ಪ. ಡಾ. ಕೆ.ಚಂದ್ರಶೇಖರ್, ಮಂಡ್ಯ, ಎಸ್. ರಮೇಶ್, ಮೂಡಾ ಮಾಜಿ ನಿರ್ದೇಶಕರು, ಚಿಕ್ಕಪುಟ್ಟೇಗೌಡರು, ಸ್ವರ್ಣಸಂದ್ರ, ಪ್ರೋ. ಎ.ಹೆಚ್.ಗಣೇಶ ನಿವೃತ್ತ ಪ್ರಾಂಶುಪಾಲರು, ಹಾಸನ, ಬಾಗವಹಿಸುವರು.

