ಬೀದರ – ರಾಜ್ಯದ ಮಹಾರಾಷ್ಟ್ರ ಗಡಿಯಲ್ಲಿ 400 ಕೋಟಿ ಹಣ ತುಂಬಿರುವ ಕಂಟೇನರ್ ಕಳುವಾಗಿರುವ ಹಣದ ಮೂಲವೇನು ? ಅದು ಎಲ್ಲಿಂದ ಬಂದಿತು, ಎಲ್ಲಿಗೆ ಹೋಗುತ್ತಿತ್ತು ಎಂಬ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ಉತ್ತರ ಕೊಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ನುಡಿದರು.
ಬೀದರ್ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮಹಾರಾಷ್ಟ್ರ ಸಿಎಂ ಫಡ್ನವಿಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು
ಇದು ಆರ್ ಬಿಐ ಹಣನಾ… ಖಾಸಗಿ ಹಣನಾ.. ಎಲ್ಲಿಂದ ಬರುತ್ತಿತ್ತು, ಎಲ್ಲಿಗೆ ಹೋಗುತ್ತಿತ್ತು..ಮತ್ತೆ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಇಷ್ಟುದಿನ ಯಾಕೆ ಗೌಪ್ಯವಾಗಿಟ್ಟಿದ್ರು.. ಖಾಸಗಿ ವ್ಯಕ್ತಿ ದೂರು ಕೊಟ್ಟಿದ್ದಾರೆ ಎಂದು ಇಂದು ಸಿಎಂ ಫಡ್ನವಿಸ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಈ ಹಣದ ಮೂಲ ಏನು..! ಯಾವತ್ತು ಗೋವಾದಿಂದ ಹಣ ಸಾಗಾಟವಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಹಣ ಸಾಗಾಟ ಮಾಡಿದರೂ ಸೆಕ್ಯುರಿಟಿ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದರು
ಕರ್ನಾಟಕ ರಾಜ್ಯದಿಂದ ಹಣದ ಕಂಟೇನರ್ ಹೋಗುತ್ತಿದೆಯಂದ್ರೆ ರಾಜ್ಯಕ್ಕೆ ಯಾಕೆ ಮಾಹಿತಿ ನೀಡಿಲ್ಲ. ಕಂಟೇನರ್ ಹೈಜಾಕ್, ರಾಬರಿಯಾದ ತಕ್ಷಣ ಯಾಕೆ ಎಫ್ಐಆರ್ ಮಾಡಿಲ್ಲ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ದರೋಡೆಯಾದ್ರು ಎಫ್ಐಆರ್ ಯಾಕಿಲ್ಲ. ಇವರು ಯಾಕೆ ಇಲ್ಲಿಯವರೆಗೆ ಕರ್ನಾಟಕ ರಾಜ್ಯಕ್ಕೆ ಮಾಹಿತಿ ನೀಡಿಲ್ಲ. ಇದಕ್ಕೆ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಉತ್ತರ ಕೊಡಬೇಕು ಎಂದರು.
ರಾಜ್ಯದ ಕಡೆಗೆ ಬೊಟ್ಟು ತೋರಿಸೋದು ಬಿಟ್ಟು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸುಪ್ರೀಂಕೋರ್ಟ್ ನ್ಯಾಯಾಧೀಶರ ಅಡಿಯಲ್ಲಿ ಎಸ್ಐಟಿ ಟೀಂ ರಚನೆ ಮಾಡಲಿ. ಒಂದು ತನಿಖಾ ತಂಡ ರಚನೆ ಮಾಡಿ ನ್ಯಾಯಾಧೀಶರ ಅಡಿಯಲ್ಲಿ ತನಿಖೆಯಾಗಲಿ. ತನಿಖೆಯಲ್ಲಿ ಯಾರ್ಯಾರು ದೊಡ್ಡ ವ್ಯಕ್ತಿಗಳು ಇದ್ದಾರೆ ಎಂಬುದು ಹೊರ ಬರುತ್ತದೆ. ಆ ಹಣ ಈಗ ಎಲ್ಲಿದೆ… ಕಾಂಗ್ರೆಸ್ ಗೂ ಇದಕ್ಕೂ ಏನು ಸಂಬಂಧವಿದೆ…ನಿಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಮ್ಮ ಸರ್ಕಾರದ ಮೇಲೆ ದೂರುವಂಥದ್ದು ಅತ್ಯಂತ ಕೆಳಮಟ್ಟದ ರಾಜಕೀಯವಾಗಿದೆ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ

