ಪಾಪ ಪುಣ್ಯಗಳ ಕರ್ಮಗಳನ್ನು ಅರಿತವನು ನಿಜವಾದ ಮನುಜ – ಡಾ.ಶಿವಕುಮಾರ ಸ್ವಾಮೀಜಿ

Must Read

ಮೂಡಲಗಿ : ಪಾಪಪುಣ್ಯಗಳ ಕರ್ಮಗಳನ್ನು ಅರಿತವನು ನಿಜವಾದ ಮನುಜನಾಗಲು ಸಾಧ್ಯ, ಮನುಷ್ಯನಲ್ಲಿ ಪುಣ್ಯದ ಕರ್ಮಗಳಿಗಿಂತ ಪಾಪಕರ್ಮಗಳೇ ಇಂದಿನ ಕೆಲಸವಾಗಿದೆ ನಾನು ಈ ಜಗತ್ತಿಗೆ ಏನು ಕೋಡುತ್ತೇನೆ ಅದುವೇ ನನಗೆ ಮರಳುವುದು ಮಾಡಿದುಣ್ಣೋ ಮಾರಾಯ ಎಂಬ ಮಾತು ಪ್ರತಿಯೊಬ್ಬ ಮನುಷ್ಯನ ಕರ್ಮದಲ್ಲಿ ಕಾಣಬಹುದು ಪುಣ್ಯವನ್ನು ಮಾಡಿದರೆ ಪುಣ್ಯವೇ ಮರಳುವುದು ಪಾಪವನ್ನು ಮಾಡಿದರೆ ಪಾಪವೇ ಮರಳುವುದು ಮಾಡುವ ಕಾಯಕದಲ್ಲಿ ಪಾಪಪುಣ್ಯದ ಕರ್ಮ ತಿಳಿಯುವುದು ಅಗತ್ಯವಿದೆ ಎಂದು ಬೀದರನ ಚಿದಂಬರಾಶ್ರಮದ ಸದ್ಗುರು ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಕಾಲೇಜು ಆವರಣದಲ್ಲಿ ಕ್ಷೇತ್ರಾಧಿಪತಿ ಶ್ರೀ ಗುರು ರೇವಣಸಿದ್ದೇಶ್ವರ ಕೃಪಾರ್ಶೀವಾದದಿಂದ ಮೂಡಲಗಿ ನಗರದಲ್ಲಿ ವಿಶ್ವಶಾಂತಿಗಾಗಿ “೧೬ನೇ ಸತ್ಸಂಗ ಸಮ್ಮೇಳನ” ದಲ್ಲಿ ಉದ್ಘಾಟನೆ ಮಾಡಿ ಪ್ರವಚನ ನೀಡುತ್ತಾ, ಮನುಷ್ಯ ಪರಮಾತ್ಮನಾಗಬೇಕಾದರೆ ಪುಣ್ಯವನ್ನು ಮಾಡಬೇಕು. ಪುಣ್ಯದ ಕರ್ಮ ಸನ್ಮಾರ್ಗಕ್ಕೆ ಒಯುತ್ತದೆ. ಮಾತನಾಡುವ ರೀತಿ, ಕಾಯಕದ ಸ್ವಭಾವ, ಕಾಯಕ ನಿಷ್ಠೇ ಅಷ್ಟೇ ಅಲ್ಲದೇ ಮನುಷ್ಯನ ಜೀವನಕ್ಕೆ ಅದರದೇ ಆದ ನಿಯಮಗಳಿದ್ದು ನಿಯಮ ಪಾಲನೆ ಮನುಷ್ಯನಿಗೆ ಹೊರತು ಪ್ರಾಣಿಗಳಿಗೆ ಅಲ್ಲ ಪ್ರಾಣಿ ಆಗದೇ ಮನುಷ್ಯನಾಗಬೇಕು ಅಂದರೆ ಪುಣ್ಯವನ್ನೆ ಮಾಡಬೇಕು. ಹಣ, ಆಸ್ತಿ, ವಸ್ತುಗಳ ಪ್ರಾಪ್ತಿ ಮಾಡಿಕೊಂಡರೆ ಪುಣ್ಯವಲ್ಲ. ಮನುಷ್ಯನಾಗಿ ಪುಣ್ಯವನ್ನು ಮಾಡಿದರೆ ಪರಮಾತ್ಮನಾಗಲು ಸಾಧ್ಯವಿದೆ ಎಂದು ಪ್ರವಚನ ನೀಡಿದರು.

ಇಟನಾಳದ ಮೈಲಾರಲಿಂಗೇಶ್ವರ ದೇವಸ್ಥಾನ ಶ್ರೀ ಸಿದ್ದೇಶ್ವರ ಆಶ್ರಮದ ಪ.ಪೂ.ಸಿದ್ದೇಶ್ವರ ಮಹಾಸ್ವಾಮಿಗಳು, ಶಿವಾಪೂರ (ಹ)ದ ಅಡವಿಸಿದ್ದೇಶ್ವರಮಠದ ಶ್ರೀಮ.ನಿ.ಪ್ರ ಅಡವಿಸಿದ್ದರಾಮ ಮಹಾಸ್ವಾಮೀಜಿ, ಬೀದರ ಚಿದಂಬರಾಶ್ರಮ ಪ.ಪೂ.ಸ್ವಾಮಿ ಶ್ರೀ ಶಿವಪ್ರಕಾಶಾನಂದ ಗಿರಿ ಸ್ವಾಮಿಗಳು, ಕಲಬುರ್ಗಿ ಎಂ.ಎ. ಪೂರ್ಣಪ್ರಜ್ಞಾ ಯೋಗಾಶ್ರಮ ಪ. ಪೂ. ಮಾತೊಶ್ರೀ ಲಕ್ಷ್ಮಿ ತಾಯಿಯವರು, ಮಹಾಲಿಂಗಪೂರ ಸಿದ್ಧಾರೂಢ ಮಠದ ಪ.ಪೂ.ಶ್ರೋ.ಬ್ರ ಸದ್ಗುರು ಶ್ರೀ ಸಹಜಾನಂದ ಮಹಾಸ್ವಾಮಿಗಳು “ವರಪುಣ್ಯ ಲತೆಯನಾವರಿಪಂತೆ” ವಿಷಯ ಕುರಿತು ಪ್ರವಚನ ನೀಡಿದರು.

ಈರಪ್ಪಾ ಭೀಮಪ್ಪಾ ಬಾಗಿ ಹಾಗೂ ಸಹೋದರರು ಪ್ರವಚನದಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಅನ್ನದಾಸೋಹ ಹಮ್ಮಿಕೊಂಡಿದ್ದರು ಕಾರ್ಯಕ್ರಮದಲ್ಲಿ ಸತ್ಸಂಗ ಸಮ್ಮೇಳನ ಆಯೋಜಕರು ಮತ್ತು ಮೂಡಲಗಿ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ  ನಾಗರಿಕರು ಆಗಮಿಸಿ ಶ್ರೀಗಳ ಪ್ರವಚನ ಆಲಿಸಿದರು.

LEAVE A REPLY

Please enter your comment!
Please enter your name here

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group