ಮೂಡಲಗಿ: ಭಾರತ ಸರ್ಕಾರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಬೆಳಗಾವಿಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ ಸಮಿತಿ)ಗೆ ನಾಮನಿರ್ದೇಶಕರಾಗಿ ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ಮಂಗಳಾ ಸುರೇಶ ಕೌಜಲಗಿ ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಆದೇಶ ಮೇರಗೆ ಕೇಂದ್ರ ದಿಶಾ ಸಮಿತಿಯ ಜಂಟಿ ನಿರ್ದೇಶಕ ಉಮೇಶ ಕುಮಾರ ರಾಮ ನೇಮಕ ಮಾಡಿ ಆದೇಶಿಸಿದ್ದಾರೆ.
ಮಂಗಲಾ ಸುರೇಶ ಕೌಜಲಗಿ ಅವರು ಭಾರತೀಯ ಜನತಾ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ. ಅರಭಾವಿ ಬ್ಲಾಕ ಅಧ್ಯಕ್ಷರಾಗಿ, ನಾಗನೂರ ಪಟ್ಟಣ ಪಂಚಾಯತ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸದ್ಯ ಬೆಳಗಾವಿ ಜಿಲ್ಲಾ ಬಿಜೆಪಿ ಪಕ್ಷ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನೇಮಕಕ್ಕೆ ಕೌಜಲಗಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದಾರೆ.

