spot_img
spot_img

ಕಾಲೇಜು ಅಭಿವೃದ್ಧಿ ಸಮಿತಿ ಸಭೆ ನಡೆಸಿದ ಶಾಸಕರು

Must Read

- Advertisement -

ಸಿಂದಗಿ; ನೂತನವಾಗಿ ರಚಿಸಲ್ಪಟ್ಟ ಕಾಲೇಜು ಅಭಿವೃದ್ಧಿ ಸಮಿತಿಯು ಕಾಲೇಜಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವಂತೆ ಶಾಸಕ ಅಶೋಕ.ಎಂ.ಮನಗೂಳಿಯವರು ಸಲಹೆ ನೀಡಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನವಾಗಿ ರಚಿಸಲ್ಪಟ್ಟ ಕಾಲೇಜು ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದರು.

ಕಾಲೇಜಿನ ಕಂಪೌಂಡ ನಿರ್ಮಿಸಲು ಹಣ ಮಂಜೂರಾಗಿದ್ದು ಶೀಘ್ರದಲ್ಲಿಯೆ ಕಾಮಗಾರಿ ಆರಂಭಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದರು ಹಾಗೂ ನಿರ್ಮಾಣಗೊಂಡ ಕಾಲೇಜು ಕಟ್ಟಡವನ್ನು ಹಸ್ತಾಂತರಿಸಲು ಕ್ರಮಕೈಗೊಳ್ಳವುದಾಗಿ ಸಭೆಯಲ್ಲಿ ತಿಳಿಸಿದರು. ಮುಂದುವರೆದು ನೂತನವಾಗಿ ನೇಮಕಗೊಂಡ ಎಲ್ಲಾ ಸದಸ್ಯರಿಗೆ ತಾವು ಕಾಲೇಜಿನ ಬೇಕು-ಬೇಡಿಕೆಗಳನ್ನು ತಿಳಿದುಕೊಂಡು ನನ್ನಗಮನಕ್ಕೆ ತಂದರೆ, ಕೂಡಲೇ ಅದನ್ನುಸಹ ಪೂರೈಸಲು ಕ್ರಮಕೈಗೊಳ್ಳವುದಾಗಿ ತಿಳಿಸಿದರು

- Advertisement -

ಅಲ್ಲದೇ ಎಲ್ಲಾ ಸದಸ್ಯರು ಕಾಲೇಜಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ತಮ್ಮ ಪಾತ್ರವು ಸಹ ಪ್ರಮುಖವಾಗಿರುತ್ತದೆಂದು ಮಾರ್ಮಿಕವಾಗಿ ನುಡಿದರು.

ಸಭೆಯಲ್ಲಿ ನಾಮಕರಣಗೊಂಡ ಸದಸ್ಯರಾದ ಎಸ್.ಎಸ್.ಪಾಟೀಲ ನಿವೃತ್ತ ಪ್ರಾಚಾರ್ಯರು ಸಭೆಯನ್ನು ಉದ್ದೇಶಿಸಿ ಕಾಲೇಜಿನ ಪ್ರಗತಿಗೆ ನಾವೆಲ್ಲರೂ ಸಹಕಾರ ನೀಡುತ್ತೇವೆ ಹಾಗೂ ಒಂದು ಮಾದರಿ ಕಾಲೇಜನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಶಿವಲಿಂಗ.ಎಸ್.ಹಳೇಮನಿ ಅವರು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಕಾಲೇಜಿನಲ್ಲಿ ಆದ ಪ್ರಗತಿಯ ಪಕ್ಷಿನೋಟವನ್ನು ಸಭೆಯಲ್ಲಿ ಓದಿ ಹೇಳಿದರು. ಮುಂದುವರೆದು ಕಾಲೇಜಿನ ಅಭಿವೃದ್ಧಿ ಸಮಿತಿಯ ಸಹಭಾಗಿತ್ವದೊಂದಿಗೆ ಕಾಲೇಜಿನ ಶೈಕ್ಷಣಿಕ ಏಳಿಗೆಗೆ ತಾವೆಲರೂ ಸಹಕರಿಸಬೇಕೆಂದು ಕೋರಿದರು.

- Advertisement -

ಕಾಲೇಜು ಅಭಿವೃದ್ಧಿಯ ನೂತನ ಸಮಿತಿಯ ಎಲ್ಲಾ ಸದಸ್ಯರನ್ನು ಶಾಸಕರು ಸನ್ಮಾನಿಸಿದರು ಪ್ರಾಧ್ಯಾಪಕರಾದ ಡಾ.ಮಿರಾಜ ಪಾಶ ನಿರೂಪಿಸಿದರು ಪ್ರಾಧ್ಯಾಪಕರಾದ ಎಸ್.ಎಸ್.ಖಾದ್ರಿ ವಂದಿಸಿದರು

ಈ ಕಾರ್ಯಕ್ರಮದಲ್ಲಿ ತಾಲ್ಲೂಕಾ ಕೆಡಿಪಿ ಸಮಿತಿಯ ಸದಸ್ಯರಾದ ಶ್ರೀಮತಿ ಸುಮಂಗಲಾ.ಬಮ್ಮಣ್ಣಿ ಪ್ರತಿಭಾ ಚಳ್ಳಗಿ, ಮಹಿಬೂಬ ಹಸರಗುಂಡಗಿ, ಪ್ರಕಾಶ ನಿಗಡಿ, ಅಶೋಕ ಕುಲಕರ್ಣಿ, ಬಸವರಾಜ ಈಳಗೇರ, ಮಲ್ಲಪ್ಪ ಸುಲ್ಪಿ, ಶಿವಾನಂದ ಗಣಿಹಾರ, ಪ್ರಾಧ್ಯಾಪಕರಾದ ರಿಯಾಜ  ಅಹ್ಮದ ಜಹಾಗೀರದಾರ, ಪ್ರೊ.ಕೃಷ್ಣಾರೆಡ್ಡಿ, ಡಾ.ಮುಜೀಬಅಹ್ಮದ, ಶ್ರೀಮತಿ.ತೇಜಸ್ವೀನಿ.ಜಿ.ಎಂ, ಶ್ರೀಮತಿ.ಆಯಿಶಾ.ಸಿದ್ದಕಿ, ಡಾ.ಅಮಿತ ಮಿರ್ಜಿ,ಸಿದ್ದಪ್ಪ.ಬೊಮ್ಮನಳ್ಳಿ, ಎಸ್.ಪಿ.ತಳವಾರ, ಶಿವರಾಜ ಜೋಶಿ, ಆರ್.ಎಸ್.ಗಾಯಕವಾಡ, ಡಾ.ಲಕ್ಷ್ಮೀಕಾಂತ ಹೂಗಾರ, ಶ್ರೀಮತಿ.ಅನಿತಾ ಗುಂದಗಿ, ಡಾ.ಗೀತಾ.ರಜಪೂತ, ನಾಗೇಶ.ಬಿ, ಶ್ರೀಮತಿ.ಕಾಳಮ್ಮ ಅರಕೇರಿ,ಶ್ರೀಮತಿ ಶರಣಮ್ಮ ಬೀರಗೊಂಡ, ಅಮ್ಮೋಗಿ ಹರವಾಳ, ಬಸವರಾಜ ಅಗಸರ ಕಾರ್ಯಕ್ರಮದಲ್ಲಿ ಹಾಜರಿದ್ದರು.

- Advertisement -
- Advertisement -

Latest News

ತತ್ವಬೋಧನೆಗೆ ಮಠಗಳು ಸಿದ್ಧವಾಗಬೇಕು – ಬಿಇಓ ಯಡ್ರಾಮಿ

ಸಿಂದಗಿ: ಆರ್ಥಿಕ ಸಬಲತೆಯ ಮಠಗಳಾಗದೇ ತತ್ವಭೋಧನೆಗೆ ಮಠಗಳು ಸಿದ್ಧವಾಗಬೇಕು. ಶಾಲೆಗಳಲ್ಲಿ ಶಿಸ್ತು ಮತ್ತು ಶಿಕ್ಷಣ ಕಲಿಯಬಹುದು ಮಠಗಳಿಂದ ಆಧ್ಯಾತ್ಮಿಕತೆ ಮತ್ತು ಸಂಸ್ಕಾರ ಸಿಗುವುದು ಅಲ್ಲದೆ ವಿದೇಶಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group