- Advertisement -
ಕೃಷಿ ವಿಜ್ಞಾನ ಕೇಂದ್ರ, ಹನಮನಮಟ್ಟಿ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ಕೃಷಿ ಪರಿಕರ ಮಾರಾಟಗಾರರಿಗೆ, ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮೊ ದೇಸಿ 1 ನೇ ಬ್ಯಾಚಿನ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟನೆಯನ್ನು ಶಾಸಕರಾದ ವಿರೂಪಾಕ್ಷಪ್ಪ ರು ಬಳ್ಳಾರಿ ನೆರವೇರಿಸಿದರು.
ಈ ತರಬೇತಿ ಕಾರ್ಯಕ್ರಮ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು.
- ಪರಿಕರ ಮಾರಾಟಗಾರರ ಕೃಷಿ ಮಾಹಿತಿ ವಿಸ್ತಣೆ ಸಾಮರ್ಥ್ಯವನ್ನು ಮತ್ತು ನಿರ್ವಹಣೆಯನ್ನು ಉನ್ನತೀಕರಿಸುವುದು.
- ಕೃಷಿಗೆ ಸಂಬಂದಿಸಿದಂತೆ ಕಾನೂನುಗಳ ಬಗ್ಗೆ ಜ್ಞಾನವನ್ನು ಒದಗಿಸುವುದು.
- ಗ್ರಾಮಿಣ ಮಟ್ಟದಲ್ಲಿ ಕೃಷಿಕರಿಗೆ ಒಂದೇ ಸೂರಿನಡಿ ಮಾಹಿತಿ ದೊರೆಯುವಂತೆ ಮಾಡುವುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ.ಎ ಎಸ್ ವಸ್ತ್ರದ, ಎಲ್ ಎಸ್ ಅಜಗಣ್ಣನವರ, ಜೆ ಎಸ್ ಹಳ್ಳಿ, ಡಾ. ಎಂ ಗೋಪಾಲ ರವರು, ಡಾ. ಅಶೋಕ್ ಪಿ ಹಾಗೂ ಪ್ರಮುಖರಾದ ಶ್ರೀ ತಿರಕಣ್ಣ ಬುಡಪನಹಳ್ಳಿ, ಗ್ರಾಮ ಪಂಚಾಯತಿ ಸದಸ್ಯರುಗಳಾದ ರಾಮಣ್ಣ ರಿತ್ತಿ, ಮಂಜಣ್ಣ ಗೊಂದಿ, ನೀಲಪ್ಪ ಹಿರೇಹಳ್ಳಿ, ಪರಮೇಶ ಲಮಾಣಿ ರವರು ಜೊತೆಗಿದ್ದರು.