ನಮಗೆ ಪ್ರಾಂಶುಪಾಲರು, ವಾರ್ಡನ್ ಇವರ್ಯಾರೂ ಬೇಡ ಎಂದು ಅಂಗಲಾಚುತ್ತಿರುವ ವಿದ್ಯಾರ್ಥಿಗಳು !
ಬೀದರ – ಕೋಲಾರದ ಮಹಿಳಾ ದೌರ್ಜನ್ಯ ಪ್ರಕರಣ ಬೆನ್ನಲ್ಲೆ, ಬೀದರ್‌ನ ಮೊರಾರ್ಜಿ ವಸತಿ ಶಾಲೆ ಲೈಂಗಿಕ ದೌರ್ಜನ್ಯ ಬಯಲಾಗಿದ್ದು ಸಚಿವ ಈಶ್ವರ ಖಂಡ್ರೆ ತವರು ಕ್ಷೇತ್ರ, ಮಕ್ಕಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಹುಟ್ಟೂರಲ್ಲೇ ಇದೆಂಥಾ ಕರ್ಮಕಾಂಡ ಎಂದು ಜನತೆ ಹಣೆ ಚಚ್ಚಿಕೊಳ್ಳುವಂತಾಗಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಕರ್ಮಕಾಂಡ ನಡೆದಿದೆಯೆನ್ನಲಾಗಿದ್ದು ನಿತ್ಯ ಕಿರುಕುಳ ಸಹಿಸಿಕೊಂಡೇ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ
ಅದರಲ್ಲೂ ‘ ಅವರ ಟಾರ್ಚರ್ ನೋಡಿದ್ರೆ ಇರಬೇಕೋ, ಸಾಯ್ಬೇಕೋ ಗೊತ್ತಾಗ್ತಾ ಇಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು ಅಳಲು ತೋಡಿಕೊಂಡಿದ್ದು, ಆದರೆ ಸಾಯೋಕೆ ಆಗ್ತಿಲ್ಲ ರೀ ಮನೆ ಕಡೆ ನೆನಪಾಗುತ್ತೆ ಎಂದು ಹೇಳಿದ್ದು ಹೃದಯ ವಿದ್ರಾವಕವಾಗಿದೆ.
ಇಲ್ಲಿ ಕಲಿಸುವಿಕೆ ಸರಿಯಾಗಿಲ್ಕ,ಊಟದ ವ್ಯವಸ್ಥೆ ಸರಿಯಾಗಿಲ್ಲ, ಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದಾಗಿ ಮಕ್ಕಳು ಹೇಳಿಕೊಂಡಿದ್ದು ಮೊರಾರ್ಜಿ ಶಾಲೆಯ ಪರಿಸ್ಥಿತಿಯನ್ನು ಅನಾವರಣ ಮಾಡುವಂತಿದೆ. ಒಟ್ಟಿನಲ್ಲಿ ಶಿಕ್ಷಣ ಅಧಿಕಾರಿಗಳು, ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯೆನಿಸುವ ವಾತಾವರಣವಿದೆ.
ಇಲ್ಲಿ ಯಾರಿಗೂ ಸೇಫ್ ಇಲ್ಲ ರೀ….ಎಂದೂ ಕೂಡ ಹೇಳಿದ್ದು ಪ್ರಕರಣದ ಗಂಭೀರತೆಯನ್ನು ವಿವರಿಸುತ್ತದೆ.
ಇಲ್ಲಿನ ಪ್ರಾಂಶುಪಾಲರು, ಶಿಕ್ಷಕರು ಹುಡುಗಿಯರನ್ನು ನೋಡುವುದು, ಬ್ಯಾಡ್ ಟಚ್ ಮಾಡುವುದು ಮಾಡುತ್ತಾರೆಂದು ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ
ಸಚಿವ ಈಶ್ವರ್ ಖಂಡ್ರೆ ತವರೂರಲ್ಲಿ ಹೆಣ್ಮಕ್ಕಳಿಗಿಲ್ವಾ ರಕ್ಷಣೆ..? ಶಶಿಧರ್ ಕೋಸಂಬೆಯವ್ರ ಊರಲ್ಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯವೇ ? ಶಶಿಧರ್ ಕೋಸಂಬೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು.
ಪ್ರಕರಣದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ, ಸ್ವಾಭಿಮಾನಿ ಬಳಗದ ಬೀದರ ಜಿಲ್ಲಾ ಅಧ್ಯಕ್ಷ ಚರಣಜಿತ ಅಣದುರೆ ಮಾತನಾಡಿ, ಈ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಬ್ಬರೂ ಅಪಾಯದಲ್ಲಿದ್ದಾರೆ ಅವರು ಹೇಳುವುದನ್ನು ಕೇಳಿದರೆ ನಮಗೇ ಕಣ್ಣಲ್ಲಿ ನೀರುಬಂತು. ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರು ಒಮ್ಮೆ ಇಲ್ಲಿಗೆ ಭೇಟಿಕೊಟ್ಟು ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಇಲ್ಲಿನ ಪ್ರಾಂಶಯಪಾಲರು ಡಬಲ್ ಮಿನಿಂಗ್‌ನಲ್ಲಿ ಹೆಂಗೆಂಗೋ ಮಾತಾಡ್ತಾರೆ ಎಂದೆಲ್ಲ ವಿದ್ಯಾರ್ಥಿಗಳು ಆರೋಪಿಸಿದ್ದು ರಾಜ್ಯದಲ್ಲಿ ಮಹಿಳೆಯರಿಗೆ, ಶಾಲಾ ವಿದ್ಯಾರ್ಥಿನಿಯರಿಗೆ ರಕ್ಷಣೆ ಕೊಡುವಲ್ಲಿ ರಾಜ್ಯ ಸರ್ಕಾರ ಸೋತಿರುವ ಲಕ್ಷಣ ಕಾಣಿಸುತ್ತದೆ. ಜಿಲ್ಲಾಡಳಿತ, ಮಕ್ಕಳ ಆಯೋಗ, ಪೊಲೀಸ್ ಆಯುಕ್ತರು, ಸಚಿವರು ಈ ಬಗ್ಗೆ ತಕ್ಷಣವೇ ಗಮನಹರಿಸಿ ಯಾವುದೇ ಅನಾಹುತವಾಗುವ ಮುಂಚೆಯೇ ಕಾಮುಕ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕಾಗಿದೆ.
ಪ್ರಕರಣದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ, ಸ್ವಾಭಿಮಾನಿ ಬಳಗದ ಬೀದರ ಜಿಲ್ಲಾ ಅಧ್ಯಕ್ಷ ಚರಣಜಿತ ಅಣದುರೆ ಮಾತನಾಡಿ,
ವರದಿ : ನಂದಕುಮಾರ ಕರಂಜೆ, ಬೀದರ