spot_img
spot_img

Mudalagi: ‘ಸಂಗೀತಕ್ಕೆ ಬಾಷೆ, ಜಾತಿಯ, ಗಡಿಗಳ ಸೀಮೆ ಇಲ್ಲ’ – ಡಾ. ಶಿವಲಿಂಗ ಶ್ರೀಗಳು

Must Read

- Advertisement -

ಮೂಡಲಗಿ: ‘ಸಂಗೀತಕ್ಕೆ ಯಾವುದೇ ಭಾಷೆ, ಜಾತಿ, ಧರ್ಮ ಮತ್ತು ಗಡಿಗಳ ಸೀಮೆ ಇಲ್ಲ, ಸಂಗೀತವು ಜನರ ಮನಸ್ಸುಗಳನ್ನು ಕೂಡಿಸುತ್ತದೆ, ಬಾಂಧವ್ಯವನ್ನು ಬೆಳೆಸುತ್ತದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಮಠದ ಪೀಠಾಧಿಪತಿ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ಇಲ್ಲಿಯ ಬಸವ ರಂಗ ಮಂಟಪದಲ್ಲಿ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸಂಗೀತೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಸಂಗೀತ, ಗಾಯನದಲ್ಲಿ ಮನುಷ್ಯನ ಖಿನ್ನತೆಯನ್ನು ದೂರಮಾಡಿ ಉಲ್ಲಾಸ, ಸಂತೋಷವನ್ನು ತರುವಂತ ಶಕ್ತಿ ಇದೆ ಎಂದರು.

ಮುಖ್ಯ ಅತಿಥಿ ಪಿಎಸ್‍ಐ ಎಚ್.ವೈ. ಬಾಲದಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಗೀತ ಕಾರ್ಯಕ್ರಮಗಳಿಗೆ ಸಂಘ, ಸಂಸ್ಥೆಗಳು ಪ್ರೋತ್ಸಾಹ ನೀಡುವ ಮೂಲಕ ಸಂಗೀತ ಪರಂಪರೆಯನ್ನು ಬೆಳೆಸಬೇಕು ಎಂದರು.

- Advertisement -

ಮೂಡಲಗಿಯಲ್ಲಿ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ಸಂಗೀತೋತ್ಸವ ಮಾಡುವ ಮೂಲಕ ಅನೇಕ ಕಲಾವಿದರ ಸೇರಿಸಿದ್ದು ಶ್ಲಾಘನೀಯವಾಗಿದೆ. ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚು, ಹೆಚ್ಚು ಸಂಘಟಿಸುವ ಮೂಲಕ ನಮ್ಮ ನಾಡಿನ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.

ಮಂಜುನಾಥ ಸೈನಿಕ ಸತರಬೇತಿ ಕೇಂದ್ರ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿ, 1982ರಿಂದ ಜೂನ್ 21ರಂದು  ವಿಶ್ವ ಸಂಗೀತ ದಿನಾಚರಣೆಯನ್ನು ಫ್ರಾನ್ಸ್ ದೇಶದಲ್ಲಿ ಮೊದಲು ಪ್ರಾರಂಭಗೊಂಡು, ಪ್ರತಿ ವರ್ಷವೂ ವಿಶ್ವದಾದ್ಯಂತ ಸಂಗೀತ ಪ್ರಿಯರೆಲ್ಲರೂ ಸಂಗೀತ ದಿನಾಚರಣೆ ಆಚರಿಸುವ ಮೂಲಕ ಸಂಗೀತವನ್ನು ಆರಾಧಿಸುತ್ತಿದ್ದಾರೆ ಎಂದರು.

- Advertisement -

ಹಿರಿಯ ಜಾನಪದ ಕಲಾವಿದ ಶಬ್ಬೀರ ಡಾಂಗೆ, ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿದರು. 

ಅಧ್ಯಕ್ಷತೆವಹಿಸಿದ್ದ ಹಿರಿಯ ಕಲಾವಿದ ಕೃಷ್ಣಪ್ಪ ಚಿನ್ನಾಕಟ್ಟಿ ಮಾತನಾಡಿ, ವಿಶ್ವ ಸಂಗೀತ ದಿನಾಚರಣೆಯನ್ನು ಪ್ರತಿ ವರ್ಷವೂ ಮಾಡುವ ಮೂಲಕ ಸಂಗೀತವನ್ನು ಉಳಿಸಿ, ಬೆಳೆಸೋಣ ಎಂದರು.

ಸಂಘಟಕ ಭರತ ಚಿನ್ನಾಕಟ್ಟಿ ಪ್ರಾಸ್ತಾವಿಕ ಮಾತನಾಡಿ, ಮೂಡಲಗಿಯಲ್ಲಿ ಮೊದಲ ಬಾರಿ ಸಂಗೀತ ದಿನಾಚರಣೆ ಆಚರಣೆ ಮಾಡುವ ಮೂಲಕ ಸಂಗೀತ ಕಲಾವಿದರ ಸಮಾವೇಶ ಮಾಡಲಾಗಿದೆ. ಪ್ರತಿ ವರ್ಷವೂ ಸಂಗೀತ ಉತ್ಸವ ಮಾಡುವ ಉದ್ಧೇಶ ಹೊಂದಿದ್ದು, ಸಂಘ, ಸಂಸ್ಥೆಯವರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿಕೊಂಡರು. 

ಅತಿಥಿಗಳಾಗಿ ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದ ಮುತ್ತಪ್ಪ ಸವದಿ, ಪ್ರಕಾಶ ಶೀಲವಂತ, ಚೇತನ ನಿಶಾನಿಮಠ, ಹನಮಂತ ಸೊರಗಾಂವಿ, ರವಿಗೌಡ ಪಾಟೀಲ, ಅಪ್ಪಣ್ಣ ಬನ್ನಿಶೆಟ್ಟಿ, ಸುಭಾಷ ಕುರಣಿ, ಉದ್ದಪ್ಪ ಗುಡದಾರ, ಬಸವರಾಜ ಕರಕಂಬಿ, ಲಕ್ಕಪ್ಪ ಹೊಸಮನಿ, ರಂಗಪ್ಪ ಹೊನಕುಪ್ಪಿ ಭಾಗವಹಿಸಿದ್ದರು. 

ಭರತ ಚಿನ್ನಾಕಟ್ಟಿ ಸ್ವಾಗತಿಸಿದರು, ಶಿಕ್ಷಕ ಬಸವರಾಜ ಸಸಾಲಟ್ಟಿ ನಿರೂಪಿಸಿದರು, ಮಾರುತಿ ಗೌಡರ ವಂದಿಸಿದರು.

- Advertisement -
- Advertisement -

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -

More Articles Like This

- Advertisement -
close
error: Content is protected !!
Join WhatsApp Group