Mudalagi: ಯುಥ್ ಫಾರ್ ಪರಿವರ್ತನ ತಂಡದಿಂದ ನೋಟ್ ಬುಕ್ ವಿತರಣೆ

Must Read

ಮೂಡಲಗಿ: ಕಸ ದಿಂದ ರಸ ಎನ್ನುವಂತೆ ಬೆಂಗಳೂರಿನ ಯೂತ್ ಫಾರ್ ಪರಿವರ್ತನ ತಂಡವು ಬೇಸಿಗೆ ಸಮಯದಲ್ಲಿ ತಮ್ಮ ಅತ್ಯಮೂಲ್ಯ ಸಮಯವನ್ನು ನಿಗದಿಗೊಳಿಸಿ ಮರು ಬಳಕೆಯ ನೋಟ್ ಬುಕ್‍ಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಬಳಕೆಯ ವಿನೂತನ ಯೋಜನೆ ಶ್ಲಾಘನೀಯವಾಗಿದೆ ಎಂದು ಪ್ರಧಾನ ಗುರು ರಾಜು ಕೊಳದೂರ ಹೇಳಿದರು.

ಅವರು ಸಮೀಪದ ಪಟಗುಂದಿಯ ಸರಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಯೂತ್ ಫಾರ್ ಪರಿವರ್ತನ ತಂಡದಿಂದ ಉಚಿತವಾಗಿ ನೀಡಲ್ಪಟ್ಟ ನೋಟ್ ಬುಕ್ ವಿತರಿಸಿ ಮಾತನಾಡಿದರು. 

ಮರು ಬಳಕೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ನಗರದ ಹಾಗೂ ವಿವಿಧೆಡೆ ಉಪಯುಕ್ತ ಹಾಳೆಗಳನ್ನು ಒಂದುಗೂಡಿಸಿ ಬುಕ್ ಬೈಂಡ್ ಮಾಡಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವದು ಮೆಚ್ಚುವಂತಹದು. ಅವರು ಕೈಗೊಂಡಿರುವ ಮರು ಬಳಕೆಯ ಸಾಮರ್ಥ್ಯಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಹಣದ ಉಳಿತಾಯದ ಜೊತೆಗೆ ನಾವಿಣ್ಯತೆಯ ಕಲೆಗಳನ್ನು ಕಲಿಯಬಹುದೆಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದಲ್ಲಿ ಎಸ್.ಡಿಎಮ್.ಸಿ ಅಧ್ಯಕ್ಷ ಯಲ್ಲಪ್ಪ ಪೂಜೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್. ಮೀಶಿ, ಪ್ರಧಾನ ಗುರು ಎಮ್.ಎನ್ ಪೆಂಡಾರಿ, ಎ.ಎ ಪಟವೇಗಾರ, ಎಸ್.ಐ ನದಾಫ್, ರವಿರಾಜ ಕಾಂಬಳೆ, ಮಹಾಂತೇಶ ಭಜಂತ್ರಿ, ಲಕ್ಷ್ಮೀ ಕೆಳಗೇರಿ, ಜಯಶ್ರೀ ಸರ್ವಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group