Bidar: ಭಾಗ್ಯ ಕೊಡುವುದಾಗಿ ಹೇಳಿ ವಂಚಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್- ನಳಿನ್ ಕಟೀಲು

Must Read

ಬೀದರ: ಜನತೆಗೆ ಐದು ಭಾಗ್ಯಗಳನ್ನು ಕೊಡುವುದಾಗಿ ಹೇಳಿ ಕಾಂಗ್ರೆಸ್ ವಂಚನೆ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಬೀದರ್ ನಲ್ಲಿ ಪತ್ರಕರ್ತರೊಡನೆ ಮಾತನಾಡಿ, ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಬರೆ ಎಳೆಯುವ ಕೆಲಸ ಕಾಂಗ್ರೆಸ್ ಮಾಡಿದೆ. ವಾಣಿಜ್ಯೋದ್ಯಮ ಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಿದೆ ಆದರೆ ಈ ಸರ್ಕಾರದಿಂದ ಹೊಡೆತ ಬೀಳಲಿದೆ ಎಂದರು.

ಸಿದ್ದರಾಮಯ್ಯ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಬಡವರಿಗೆ ಹತ್ತು ಕೆಜಿ ಅಕ್ಕಿ ನಿಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಈಗಲು ನಮ್ಮ ಸರ್ಕಾರ ದೇಶದ ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಅಕ್ಕಿ ಹಂಚುವ ಕೆಲಸ ಮಾಡಿದೆ. ಆದರೆ ಸಿದ್ದರಾಮಣ್ಣಾ ಹತ್ತು ಕೆಜಿ ಕೊಡುತ್ತೇನಿ ಅಂತ ಪ್ರಣಾಳಿಕೆಯಲ್ಲಿ ಹೇಳಿದರು. ಈಗ ನೀವು ಕೊಡಬೇಕಾಗಿದ್ದು 15 ಕೆಜಿ ಕೊಡಬೇಕು. ಆದರೆ ಕೊಡಲು ಆಗದೆ ಕಾಂಗ್ರೆಸ್ ನವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಟೀಲ್ ಅವರು ಆರೋಪಿಸಿದರು.

ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸರಿಸಮಾನವಾಗಿ ಅಕ್ಕಿ ಹಂಚುವ ಕೆಲಸ ಮಾಡುತ್ತದೆ. ಮುಖ್ಯಮಂತ್ರಿ ಸಿದ್ರಾಮಣ್ಣಾ ಪ್ರಧಾನಿ ಅವರಿಗೆ ಭೇಟಿಯಾಗಿಲ್ಲ,  ಕೇಂದ್ರ ಆಹಾರ ಸಚಿವರಿಗೆ ಬೇಟಿಯಾಗಿಲ್ಲ. ಎರಡು ಲಕ್ಷ ಟನ್ ಬೇಕು ಅಂತ ಯಾವುದೆ ಬೇಡಿಕೆ ಕೊಟ್ಟಿಲ್ಲ. ಕೆಳದೆ ಏಕಾ ಏಕಿ ಆರೋಪ ಮಾಡುವುದು ಸರಿ ಅಲ್ಲ. ಇವರಿಗೆ ಆಡಳಿತ ಮಾಡಲಿಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಎಲ್ಲ ಘಟನೆ ನಡೆಯುತ್ತಿದೆ ಎಂದರು.

ಕಾಂಗ್ರೇಸ್ ದ್ವೇಷದ ರಾಜಕಾರಣ ಮಾಡುತ್ತಿದೆ:

ಗೋ ಹತ್ಯೆ ನಿಷೇಧ ರದ್ದು, ಮತಾಂತರ ಕಾಯ್ದೆ ತಿದ್ದುಪಡಿ ಮತ್ತು ಪಠ್ಯ ಪುಸ್ತಕ ಬದಲಾವಣೆ ಮಾಡುತ್ತಿರುವ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಕಟೀಲು, ಹಿಂದೂ ಕಾರ್ಯಕರ್ತರ ಮೇಲೆ, ರಾಷ್ಟ ಚಿಂತಕರ ಮೇಲೆ ಕೇಸ್ ಹಾಕುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪಾಕಿಸ್ತಾನ್  ಜಿಂದಾಬಾದ ಘೋಷಣೆ ಕೂಗುತ್ತಾರೆ. ಅಂಥವರ ಮೇಲೆ ಏಕೆ ಕೇಸ್ ಹಾಕಿಲ್ಲ ? ಎಂದು ಅವರು ಪ್ರಶ್ನೆ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

 

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group