ಬೆಂಗಳೂರು – ಕರ್ನಾಟಕ ರಾಜ್ಯದ ವತಿಯಿಂದ ಆಚರಿಸಲಾದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಎನ್.ಸಿ.ಸಿ ಬ್ಯಾಂಡ್ ಮೊದಲ ಬಹುಮಾನಕ್ಕೆ ಭಾಜನವಾಗಿದೆ.
ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರು ಬಹುಮಾನ ನೀಡಿ ಅಭಿನಂದಿಸಿದರು.
ಕ್ರಿಸ್ತು ಜಯಂತಿ ವಿವಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಪ್ರಥಮ ಬಹುಮಾನದ ಗೌರವವನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರವಾಗಿದೆ.
ಕಳೆದ 25 ವಷರ್ಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಮೈಲುಗಲ್ಲು ಸಾಧಿಸಿಕೊಂಡು ಬಂದಿದ್ದ ಕ್ರಿಸ್ತು ಜಯಂತಿ ಕಾಲೇಜು(ಸ್ವಾಯತ್ತ) ಕಳೆದ ವರ್ಷವಷ್ಟೇ ಭಾರತ ಸರ್ಕಾರದಿಂದ ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಗಳಿಸಿತ್ತು.
ವಿವಿಯ ಎನ್.ಸಿ.ಸಿ ಕೆಡೆಟ್ ಗಳಿಗೆ, ತರಬೇತುದಾರರಾದ ರಾಯಪ್ಪನ್ ಅವರಿಗೆ ಹಾಗೂ ಎನ್.ಸಿ.ಸಿ ಅಧಿಕಾರಿಗಳಾದ ಕ್ಯಾಪ್ಟನ್ ಡಾ.ಸರ್ವೇಶ್ ಬಂಟಹಳ್ಳಿ ಹಾಗೂ ಲೆಫ್ಟಿನೆಂಟ್ ಮಣಿವಣ್ಣನ್ ಅವರಿಗೆ ವಿವಿಯ ಉಪಕುಲಪತಿಗಳಾದ ಫಾ. ಡಾ. ಅಗಸ್ಟೀನ್ ಜಾರ್ಜ್ ಅವರು ಶುಭಕೋರಿದ್ದಾರೆ.

