ಬೀದರ : ಎಷ್ಟೇ ವಿರೋಧ ಮಾಡಿದರೂ ಜಾತಿ ಸಮೀಕ್ಷೆ ಮಾಡಿಯೇ ಸಿದ್ಧ ಎಂಬ ಹಟದಿಂದ ತರಾತುರಿಯಲ್ಲಿ ಜಾತಿ ಸಮೀಕ್ಷೆಗೆ ತೊಡಗಿರುವ ಸಿದ್ಧರಾಮಯ್ಯ ಸರ್ಕಾರ ಹಲವು ಸಮಸ್ಯೆಗಳಿಂದಾಗಿ ಸರಿಯಾಗಿ ಜಾತಿ ಸಮೀಕ್ಷೆಯಾಗದೆ ಅಪಹಾಸ್ಯಕ್ಕೆ ಈಡಾಗುತ್ತಿದೆ.
ಗಡಿ ಜಿಲ್ಲೆ ಬೀದರ ನಲ್ಲಿ ಮೊಬೈಲ್ ನೆಟ್ವರ್ಕ್ ಗೋಸ್ಕರ ಮರ ಹತ್ತಿದ ಶಿಕ್ಷಕ..ಇನ್ನೊಂದು ಕಡೆ ನೀರಿನ ಟ್ಯಾಂಕ್ ಹತ್ತಿದ ಶಿಕ್ಷಕ ! ರಾಜ್ಯದ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಮಹತ್ವದ ಆಕಾಂಕ್ಷೆ ಯೋಜನೆ ಜಾತಿ ಗಣತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬೆಂಗಳೂರು ಅವರಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಸರಿಯಾದ ನೆಟ್ವರ್ಕ್ ಬಾರದ ಕಾರಣ ಅಡಚಣೆಗೆ ಬಲಿಯಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಚನೆಯಾದ ರಾಜ್ಯದ ಜನರ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಕುರಿತು ಜನಗಣತಿ ನಡೆಸಿ ಈ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಉದ್ದೇಶಕ್ಕಾಗಿ ನಡೆಸುತ್ತಿರುವುದೆನ್ನಲಾದ ಗಣತಿಗೆ ಆರಂಭದಿಂದಲೇ ವಿಘ್ನ ಎದುರಾಗಿದೆ,
ಸೆಪ್ಟೆಂಬರ್ 22, ರಂದು ಆರಂಭಗೊಂಡ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ. (ಜನಗಣತಿಯು) ಹಲವು ರೀತಿಯ ತಾಂತ್ರಿಕ ದೋಷದಿಂದ ಕೂಡಿದ್ದು, ಯ್ಯಾಪ್, ನೆಟ್ವರ್ಕ್, ತರಬೇತಿ ಸೇರಿದಂತೆ ಹಲವು ರೀತಿಯ ಗೊಂದಲ ಸೃಷ್ಟಿಯಾಗಿದೆ. ಜನಗಣತಿ ಆರಂಭಗೊಂಡು ಮೂರು ದಿನಗಳು ಕಳೆದರೂ ತಾಲೂಕಿನಲ್ಲಿ ಒಂದು ಮನೆಯ ಗಣತಿ ಕಾರ್ಯ ನಡೆದಿಲ್ಲ, ನೆಟ್ವರ್ಕ್ ಬಾರದ ಕಾರಣ ತಾಲ್ಲೂಕಿನ ಮಿರಖಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಉಪಾಧ್ಯಾಯರು ತಾವು ಗಣತಿಗೆ ಹೋದ ಮನೆಯ ಪಕ್ಕದಲ್ಲಿನ ಮರ ಹತ್ತಿ ಬೆಳಿಗ್ಗೆ 11 ಗಂಟೆ ಯಿಂದ ಕುಳಿತ ಘಟನೆ ನಡೆದಿದೆ . ಅದೇ ರೀತಿ ಬೇಲೂರು ಸೇರಿದಂತೆ ಇತರೆ ಗ್ರಾಮದಲ್ಲಿ ಜನಗಣತಿ ಮಾಡಲು ಹೊದ ಶಿಕ್ಷಕರು ನೀರಿನ ಟ್ಯಾಂಕ್ ಹತ್ತಿದ ಘಟನೆ ನಡೆದಿದೆ.
ಆರಂಭದಿಂದಲೂ ಧರ್ಮ, ಜಾತಿ, ಆರ್ಥಿಕ ಮಾಹಿತಿ ಯಾವ ರೀತಿ ನೀಡಬೇಕು ಎಂಬ ಗೊಂದಲಕ್ಕೆ ಒಳಗಾದ ಕುಟುಂಬದವರಿಗೆ ಈಗ ನೆಟ್ವರ್ಕ್ ಬಾರದೆ ಇರುವುದು ಇನ್ನೊಂದು ವಿಘ್ನ ಎದುರಾಗಿದೆ.
ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿ ಗಣತಿ ದಿನ ಹತ್ತು ಕುಟುಂಬ ಮಾಡಬೇಕು ಎಂಬ ಗುರಿ ನೀಡಲಾಗಿದೆ ಆದರೆ ಇಲ್ಲಿಯವರೆಗೆ ಗಣತಿ ಕಾರ್ಯ ನಡೆಯದೇ ಇರುವುದು , ಸರ್ಕಾರ ಬೇಗ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜನಗಣತಿಯಲ್ಲಿ ತೋಡಗಿದ ಶಿಕ್ಷಕರ ಮನವಿಯಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ

