spot_img
spot_img

ಗಿಡ ನೆಟ್ಟು ಕಾರ್ಮಿಕರ ದಿನ ಆಚರಣೆ

Must Read

- Advertisement -

ಮೂಡಲಗಿ: ಇಲ್ಲಿನ ಈರಣ್ಣ ನಗರದ ಶ್ರೀ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರು 20 ಗಿಡ ನೆಟ್ಟು ವಿಭಿನ್ನವಾಗಿ ಕಾರ್ಮಿಕ ದಿನ ಆಚರಿಸಿದರು.

ಶಿಕ್ಷಣ ಸಂಯೋಜಕ ಕರಿಬಸವರಾಜು ಅವರು ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತನಂತೆ ನಿತ್ಯ ಶ್ರಮಪಡುವ ಕಾರ್ಮಿಕರ ಸೇವೆ ಅನನ್ಯವಾಗಿದೆ.ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು 5 ಬಡ ನಿರ್ಗತಿಕ ಕಾರ್ಮಿಕರ ಮಕ್ಕಳಿಗೆ 10ನೇ ತರಗತಿಯವರಿಗೆ ಉಚಿತ ಶಿಕ್ಷಣ ಒದಗಿಸುವುದಾಗಿ ಹೇಳಿದ್ದಾರೆ ಅದರಂತೆ ನಾನು ಕೂಡಾ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷ ಉಚಿತ ಶಿಕ್ಷಣ ಪಡೆಯಲಿಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿ, ನಿರೂಪಿಸಿ,ವಂದಿಸಿದರು.

- Advertisement -

ಈ ಸಂದರ್ಭದಲ್ಲಿ ಯಲ್ಲಪ್ಪ ಮಾನಕಪ್ಪಗೋಳ,ಯಲ್ಲಪ್ಪ ಸಣ್ಣಕ್ಕಿ, ಸುರೇಶ ಸಣ್ಣಕ್ಕಿ, ಶಕೀಲ ಪೀರಜಾದೆ, ಪ್ರಭು ತೇರದಾಳ, ರಮೇಶ ಎಸ್ ಸಣ್ಣಕ್ಕಿ, ಅರುಣ ಮಾನಕಪ್ಪಗೋಳ,ಶಾಲವ್ವ ಮಾನಕಪ್ಪಗೋಳ, ಸಾಂವಕ್ಕ ಖವಟಕೊಪ್ಪ ಸಾಂವಕ್ಕ ಹರಿಜನ, ಲಕ್ಕವ್ವ ಗಸ್ತಿ, ರೇಣವ್ವ ವರ್ಗಿ ಮತ್ತಿತರರು ಇದ್ದರು.

- Advertisement -
- Advertisement -

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -

More Articles Like This

- Advertisement -
close
error: Content is protected !!
Join WhatsApp Group