‘ ಓದು ಕರ್ನಾಟಕ’ ಯೋಜನೆ ಮಕ್ಕಳ ಕಲಿಕೆಗೆ ಪೂರಕ – ಆಯ್ ಎಸ್ ಟಕ್ಕೆ “

Must Read

ಸಿಂದಗಿ : “ಓದು ಕರ್ನಾಟಕ” ಎಂಬುದು ಕರ್ನಾಟಕ ಸರ್ಕಾರದ ಒಂದು ಯೋಜನೆಯಾಗಿದ್ದು, 2025-26ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳ 3 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸುವ ಗುರಿಯನ್ನು ಹೊಂದಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ಹೇಳಿದರು.

ನಗರದ ಎಚ್ ಜಿ ಹೈಸ್ಕೂಲ ಆವರಣದ ಟಿ ಎಸ್ ಪಿ ಎಸ್ ಮಂಡಳಿಯ ಕಾನೂನು ಮಹಾ ವಿದ್ಯಾಲಯದ ಸಭಾ ಭವನದಲ್ಲಿ ಶುಕ್ರವಾರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಓದು ಕರ್ನಾಟಕ ಸರಳ ಕನ್ನಡ – ಸರಳ ಗಣಿತ ತರಬೇತಿ ಕಾರ್ಯಗಾರದಲ್ಲಿ ಅವರು ಭಾಗವಹಿಸಿ ಮಾತನಾಡಿ ಓದು ಕರ್ನಾಟಕ ಸರ್ಕಾರದ ಬಜೆಟ್ ಕಾರ್ಯಕ್ರಮವಾಗಿದೆ. ಸರಕಾರಿ ಶಾಲಾ ಮಕ್ಕಳಿಗೆ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಮಕ್ಕಳಿಗೆ ಉತ್ತಮ ಚಟುವಟಿಕೆ ಮೂಲಕ ಶಿಕ್ಷಕರು ಕ್ರಿಯಾತ್ಮಕವಾಗಿ ಭಾಗವಹಿಸುವುದರಿಂದ ಮಕ್ಕಳಿಗೆ ಕಲಿಕೆ ಉತ್ತಮವಾಗುತ್ತದೆ ಗಣಿತ ಗಣಕವು ಮಕ್ಕಳು ಪಾಲಕರೊಂದಿಗೆ ಸಹಕಾರ ಪಡೆದು ಮಕ್ಕಳಿಗೆ ರಾತ್ರಿ 8 ನಂತರ ಕರೆ ಮಾಡಿ ಮಗುವಿಗೆ ಯಾವ ತೊಂದರೆ ಇದೆ ಎಂಬುದು ತಿಳಿದು ಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಎಂದರು.

ಆಲಮೇಲ ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ರವಿ ಜಿ ಬಿರಾದಾರ ಮಾತನಾಡಿ ಪ್ರತಿ ಮಗುವೂ ಮೌಖಿಕ ಮತ್ತು ಲಿಖಿತ ರೂಪದಲ್ಲಿ ತನ್ನ ಸ್ವಂತ ಭಾವನೆಯನ್ನು ವ್ಯಕ್ತ ಪಡಿಸುವ ಕಾರ್ಯಕ್ರಮ ಓದು ಕರ್ನಾಟಕ ಮಕ್ಕಳಿಗೆ ಪೂರಕವಾಗಿದೆ ಎಂದರು .

ತರಬೇತಿದಾರ ಸಂತೋಷ ರಜಪೂತ. ಲಕ್ಷ್ಮಣ ಪಾಟೀಲ .ಬಿ ಆರ್ ಪಿ ಸಾಹೇಬಗೌಡ ಬಿರಾದಾರ. ಜೆ ಎಸ್ ಅಲ್ದಿಮಠ, ವಾಯ್ ಎಮ್ ಬಿರಾದಾರ, ಎಫ್. ಆರ್. ಕಾಚೂರ, ಎಸ್. ಎ. ರೆಬಿನಾಳ, ಎ ಎಸ್ ಯತ್ನಾಳ ಸಿ. ಆರ್. ಪಿ. ಗಳಾದ ಎಮ್ ಎನ್. ವಡೆಯರ, ವಿ ಎಮ್ ಚೌಧರಿ, ಸಂಜು ರಾಠೋಡ, ಎಸ್ ಆರ್ ಮುಲ್ಲಾ,ಎಮ್ ಎಮ್ ದಬಾಡೆ, ಎಮ್ ಯು.ಮೇಲಿನಮನಿ, ಕಾಸಿಮ್ ವಾಲಿಕಾರ, ರಾಯಪ್ಪ ಇವಣಗಿ, ಜಿ ಪಿ ಬಿರಾದಾರ ಸೇರಿದಂತೆ ಶಿಕ್ಷಕರು ಇದ್ದರು ಸಿ.ಆರ್.ಪಿ.ಪರಮಾನಂದ ಓಲೇಕಾರ ಸ್ವಾಗತಿಸಿ, ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ವಂದಿಸಿದರು.

Latest News

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ

ಸಿಂದಗಿ; ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜಯಂತಿಗಳನ್ನು ಆಚರಿಸುವ ಸತ್ಕಾರ್ಯಗಳನ್ನು ನಡೆಸಿದೆ. ಮಹಾನ್ ವ್ಯಕ್ತಿಗಳ...

More Articles Like This

error: Content is protected !!
Join WhatsApp Group