ಬೆಳಗಾವಿ – ಪತ್ರಕರ್ತರ ಹಾಗೂ ಬರಹಗಾರರ ಸಹಕಾರ ಸಂಘದ ಪದಾಧಿಕಾರಿಗಳನ್ನು ಇಂದು ಮುಂಜಾನೆ ಬೆಳಗಾವಿ ನಗರದ ಶೆಟ್ಟಿಗಲ್ಲಿರುವ ಹಸಿರು ಕ್ರಾಂತಿ ದಿನಪತ್ರಿಕೆಯ ಕಾಯಾ೯ಲಯದ ಸಭಾಂಗಣದಲ್ಲಿ ಜರುಗಿದ ಸಂಘದ ಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು
ಸಂಘದ ಅಧ್ಯಕ್ಷರಾಗಿ ಕಣಬಗಿ೯ ಯ ಹಿರಿಯರಾದ ಎ ಎಸ್ ವೀರಗೌಡರ ,ಉಪಾಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶರಣಗೌಡ ಪಾಟೀಲ ಹಾಗೂ ಎಮ್ ಡಿ ಯಾಗಿ ಹಸಿರು ಕ್ರಾಂತಿ ದಿನಪತ್ರಿಕೆಯ ಸಂಪಾದಕರಾದ ಸಂಪತ್ ಕುಮಾರ್ ಮುಚಳಂಬಿ ಯವರು ಆಯ್ಕೆ ಯಾದರು,
ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಹಿರಿಯ ಸಾಹಿತಿ ಗಳಾದ ಜಲತ್ಕುಮಾರ ಪುಣಜಗೌಡ, ಸ ರಾ ಸುಳಕೂಡೆ, ರಾಷ್ಟ್ರ ಕೂಟ ಸಾಹಿತ್ಯ ಪ್ರತಿಷ್ಠಾನ ಹಾಗೂ ಅರಸು ಆಕಾಡೆಮಿಯ ಅಧ್ಯಕ್ಷ ರಾದ ಬಸವರಾಜ ಗಾಗಿ೯, ನಿವೃತ್ತ ಮುಖ್ಯೋಪಾಧ್ಯಾಯರಾದ ಮಹಾಂತೇಶ ಮೆಣಸಿನಕಾಯಿ, ಚಿಲಿಪಿಲಿ ಪ್ರಕಾಶನದ ಸಂಚಾಲಕರಾದ ಎಸ್ ಎಸ್ ರತ್ತು, ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸಿ ಎಮ್ ಬೂದಿಹಾಳ,ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಸುಣಗಾರ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು
ಮುಂದಿನ ತಿಂಗಳಿನಿಂದ ಸಂಘದ ವತಿಯಿಂದ ವಿವಿಧ ಕಾಯ೯ಚಟುವಟಿಕೆಗಳನ್ನು ನಿರಂತರ ಹಮ್ಮಿಕೊಳ್ಳಲು ತೀಮಾ೯ನಿಸಲಾಯಿತು.
ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ರೈತ ಜನಪರ ಹೋರಾಟಗಾರ, ಹಸಿರು ಕ್ರಾಂತಿ ದಿನಪತ್ರಿಕೆಯ ಸಂಸ್ಥಾಪಕರಾದ ಕಲ್ಯಾಣರಾವ ಮುಚಳಂಬಿ ಯವರ ಆತ್ಮಕ್ಕೆ ಚಿರಶಾಂತಿ ಬಯಸಿ ಎರಡು ನಿಮಿಷ ಮೌನ ಆಚರಿಸಲಾಯಿತು, ಅವರ ವ್ಯಕ್ತಿತ್ವ ಜೀವನ ಸಾಧನೆ ಸ್ಮರಿಸಲಾಯಿತು.