ಮೂಡಲಗಿ– ರಾಜ್ಯವು ಇಂದು ರಾಜ್ಯೋತ್ಸವದ ಸಂಭ್ರಮದಲ್ಲಿ ಇರಬೇಕಾಗಿತ್ತು ಕರೋನಾದ ಹಾವಳಿಯ ನಂತರದ ನಾಡಹಬ್ಬವನ್ನು ನಾವು ಅತಿ ಸಡಗರದಿಂದ ಆಚರಿಸಬೇಕಾಗಿತ್ತು ಆದರೆ ವರನಟ ರಾಜಕುಮಾರ ಪುತ್ರ ಪವರ್ ಸ್ಟಾರ್ ಪುನಿತರಾಜಕುಮಾರರ ಅಕಾಲಿಕ ನಿಧನದಿಂದ ನಾವು ಶೋಕಸಾಗದಲ್ಲಿದೇವೆ ಮುಂದಿನ ನಾಡಹಬ್ಬವನ್ನು ನಾವು ಅತ್ಯಂತ ಉತ್ಸಾಹದಿಂದ ಆಚರಿಸೋಣ ಎಂದು ಕನ್ನಡ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮುರಕುಂಬಿ ಹೇಳಿದರು.
ಅರಭಾಂವಿಯ ಡಾ. ಬಿ ಆರ್ ಅಂಬೇಡ್ಕರ ವೃತ್ತದಲ್ಲಿ ನಾಡದೇವಿಯ ಭಾವ ಚಿತ್ರಕ್ಕೆ ಸರಳವಾಗಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ರಾಜ್ಯದ ಜನತೆ ಶಾಂತಿ ಪ್ರಿಯರು ಎಂದು ರಾಜ್ಯದ ವಿಷಯಕ್ಕೆ ಬಂದರೆ ನಾವು ಸುಮ್ಮನೆ ಇರುವದಿಲ್ಲ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂದು ಗಡಿ ತಂಟೆ ಮಾಡುವ ಜನರಿಗೆ ಎಚ್ಚರಿಸಿದರು,
ಈ ಸಮಯದಲ್ಲಿ ಕನ್ನಡ ರಕ್ಷಣಾ ಸಮಿತಿಯ ಉಸ್ತುವಾರಿ ಅಧ್ಯಕ್ಷ ಈರಯ್ಯಾ ಪೂಜೇರಿ,ಜಿಲ್ಲಾಧ್ಯಕ್ಷ ಸುರೇಶ ನೇಗಿನಹಾಳ, ಹಣಮಂತ ಇಳಗೇರ, ಬಸವರಾಜ ಇಳಗೇರ, ಬಸವರಾಜ ಕಡೆಮನಿ, ಲಾಲಸಾಬ ಶೇಗಡಿ, ಶಿಕ್ಷಕರಾದ ವಾಯ್ ಡಿ ಜಲಿ, ಎಸ್ ಎಮ್ ದಬಾಡಿ, ಮತ್ತು ಮಹಾತೇಶ ತೇಲಿ ಉಪಸ್ಥಿತರಿದ್ದರು,
ಪೋಟೋ – ಕನ್ನಡ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮುರಕುಂಬಿ ನಾಡದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು