ಡಾ.ಗಂಜಿಹಾಳ,ಡಾ.ಹಂಡಿಗಿ ಗೆ ‘ಸಾರ್ವಭೌಮ ಪ್ರಶಸ್ತಿ’

Must Read

ಹುಬ್ಬಳ್ಳಿ: ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಚೇತನ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ   ಧಾರವಾಡದ ರಂಗಾಯಣದಲ್ಲಿ ಮೂರುದಿನಗಳ ಕಾಲ ನಡೆದ ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪತ್ರಿಕೋದ್ಯಮ ಹಾಗೂ ಪ್ರಚಾರ ಸೇವೆಗಾಗಿ ಪುನಿತರಾಜ್‌ಕುಮಾರ ನೆನಪಿಗಾಗಿ ನೀಡುವ ‘ಸಾರ್ವಭೌಮ ಪ್ರಶಸ್ತಿ’ಯನ್ನು ಗದಗ ನಗರದ ಡಾ.ಪ್ರಭು ಗಂಜಿಹಾಳ, ಹುಬ್ಬಳ್ಳಿಯ ಡಾ.ವೀರೇಶ ಹಂಡಗಿ ಅವರಿಗೆ   ನೀಡಿ ಗೌರವಿಸಲಾಯಿತು.

ಚಂದ್ರಶೇಖರ ಮಾಡಲಗೇರಿಯವರು ಮಾತನಾಡಿ  ಉತ್ತರ ಕರ್ನಾಟಕದವರೇ ಅದ ಇವರು ಕೇವಲ ಎರಡು-ಮೂರು ವರ್ಷಗಳ ಅವಧಿಯಲ್ಲಿ ಕನ್ನಡ, ತಮಿಳು, ತೆಲಗು ಸೇರಿದಂತೆ ಇಪ್ಪತೈದಕ್ಕೂ ಹೆಚ್ಚು ಚಲನಚಿತ್ರಗಳು, ಕಿರುಚಿತ್ರಗಳು, ಸಾಕ್ಷಚಿತ್ರಗಳಿಗೆ ಪ್ರಚಾರ ನೀಡಿದ್ದು,  ಉತ್ತರ ಕರ್ನಾಟಕದ ಪತ್ರಿಕಾ ಸಂಪರ್ಕ, ಚಲನಚಿತ್ರ ಪ್ರಚಾರಕಲೆ, ಪಿ.ಆರ್.ಓ ಆಗಿ ಜೊತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಚಾರಕಾರ್ಯದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಚಿತ್ರತಂಡಗಳಿಂದ ಯಾವ ಫಲಾಫೇಕ್ಷೆ ಇಲ್ಲದೆ  ರಾಜ್ಯ, ಹೊರರಾಜ್ಯಗಳಲ್ಲೂ ಚಲನಚಿತ್ರಗಳ ಸುದ್ದಿಯನ್ನು ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದು ಕಲಾವಿದರು ,ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಇದಕ್ಕಾಗಿ ನಾವು ‘ಸಾರ್ವಭೌಮ ಪ್ರಶಸ್ತಿ’ಗೆ ಆಯ್ಕೆ ಮಾಡಿದ್ದೇವೆ ಎಂದರು. ಡಾ,ಗಂಜಿಹಾಳ ಮಾತನಾಡಿ ರಾಜ್ಯದ ಎಲ್ಲ ಮಾಧ್ಯಮದ ಬಂಧುಗಳು ನಮ್ಮ ಸುದ್ದಿಯನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಇದು ನಮಗೆ ಸಲ್ಲಬೇಕಾದ ಪ್ರಶಸ್ತಿ ಅಲ್ಲ. ಆ ಎಲ್ಲ ಸಂಪಾದಕರು, ಮಾಧ್ಯಮದ ಬಂಧು, ಮಿತ್ರರಿಗೆ ಸಲ್ಲಬೇಕಾದದ್ದು ಎಂದರು.

ಡಾ.ವೀರೇಶ ಅವರು ಸಿನಿಮಾಕ್ಕೆ ಪ್ರಚಾರ ಹೆಚ್ಚು ಅಗತ್ಯ. ಇನ್ನೂ ಕೆಲವರಿಗೆ ಅದರ ಬಗ್ಗೆ ನಿರ್ಲಕ್ಷವಿದೆ. ಚಲನಚಿತ್ರದ ಕುರಿತು ಅಬಿಮಾನಿಗಳು, ಪ್ರೇಕ್ಷಕರಿಗೆ ಸುದ್ದಿ ತಲುಪಿಸಿ ಅವರನ್ನು ಚಿತ್ರಮಂದಿರಗಳತ್ತ ಸೆಳೆಯುವಂತ ಕಾರ್ಯ ಅಗಬೇಕಿದೆ ಎಂದರು.

ಕಲಾಪೋಷಕರಮಠ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಉತ್ತರ ಕರ್ನಾಟಕದ ಈ ಇಬ್ಬರೂ ಪ್ರಚಾರಕರಿಂದ ಇನ್ನೂ ಹೆಚ್ಚಿನ ಚಲನಚಿತ್ರಗಳು ಪ್ರಚಾರ ಪಡೆದುಕೊಳ್ಳಲಿ. ಅವರ ಕಾರ್ಯವನ್ನೂ ಚಿತ್ರನಿರ್ಮಾಪಕರು, ನಿರ್ದೇಶಕರು ಬಳಸಿಕೊಳ್ಳಲಿ ಎಂದರು.  

ಜನಪ್ರಿಯ ಯುವ ನಾಯಕರು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ) ಕಾರ್ಯದರ್ಶಿ ಮಂಜುನಾಥ ಹಗೇದಾರ, ಚಲನಚಿತ್ರ ನಿರ್ದೇಶಕ   ಸುರೇಶ ಹೆಬ್ಳೀಕರ್, ಚಿತ್ರಸಾಹಿತಿ ಮನ್ವರ್ಷಿ ನವಲಗುಂದ, ಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಮೇರು ಐಎಎಸ್, ಕೆಎಎಸ್ ಸ್ಟಡಿ ಸೆಂಟರ್ ನಿರ್ದೇಶಕ ರುದ್ರೇಶ ಮೇಟಿ,ಕಲಾಪೋಷಕರಾದ ಪೀರಸಾಬ ನದಾಫ,ಸುರೇಶ ಕೋರಕೊಪ್ಪ, ನಟಿರೂಪದರ್ಶಿ ವರ್ಷಿಣಿ ಲಕ್ಷಿತಾ,     ಚಿತ್ರನಿರ್ದೇಶಕ ಮಂಜು ಪಾಂಡವಪುರ, ಕಾದಂಬರಿಕಾರ ನಟ ರಾಜು ಗಡ್ಡಿ, ನಿಂಗರಾಜ ಸಿಂಗಾಡಿ, ಮಲ್ಯ ಬಾಗಲಕೋಟ, ಸೇರಿದಂತೆ ಅನೇಕ ಕಿರುಚಿತ್ರ, ಚಲನಚಿತ್ರಗಳಿಗೆ ಸಂಬಂಧಿಸಿದ ಕಿರುಚಿತ್ರಗಳ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಉಪಸ್ಥಿತರಿದ್ದರು.


ವರದಿ: ಡಾ.ಪ್ರಭು ಗಂಜಿಹಾಳ. ಮೊ-9448775346

Latest News

ಸಿಂದಗಿ : ಉಲ್ಟಾ ಹಾರಿದ ರಾಷ್ಟ್ರಧ್ವಜ

ಸಿಂದಗಿ : ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ನಡೆಯಿತು.ಶಾಸಕ ಅಶೋಕ...

More Articles Like This

error: Content is protected !!
Join WhatsApp Group