ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಈ ಸಲ ಒಟ್ಟು 7161 ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ 2022-23ನೆಯ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಭಾವಿ ಸಭೆ ನಡೆಸಿ ಮಾಹಿತಿ ನೀಡಿದರು.
(1) ವಲಯದಲ್ಲಿ ಪರೀಕ್ಷೆ ನಡೆಯುವ ಕೇಂದ್ರಗಳು 26.(2)ಮುಖ್ಯ 26 ಅಧೀಕ್ಷಕರನ್ನು ನೇಮಕ ಮಾಡಲಾಗಿದೆ.(3)ಪ್ರಶ್ನೆ ಪತ್ರಿಕೆ ಪಾಲಕರು 26.(4)ಉಪಮುಖ್ಯ ಅಧೀಕ್ಷಕರು 06 (5)ಪರೀಕ್ಷಾ ಕೇಂದ್ರಗಳಿಗೆ 08 ಪ್ರಶ್ನೆ ಪತ್ರಿಕೆ ವಿತರಣಾ ಮಾರ್ಗಗಳ ನೇಮಕ ಮಾಡಲಾಗಿದೆ.(6) 08 ಮಾರ್ಗಾಧಿಕಾರಿಗಳ ನೇಮಕ ಮಾಡಲಾಗಿದೆ, (7)ಕೊಠಡಿ ಮೇಲ್ವಿಚಾರಕರು 26, ಸ್ಥಾನಿಕ ಜಾಗೃತದಳ ಅಧಿಕಾರಿಗಳು ಹಾಗೂ ಮೊಬೈಲ್ ಸ್ವಾಧೀನಾಧಿಕಾರಿಗಳ ನೇಮಕ ಮಾಡಲಾಗಿದೆ.(8)ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಸಂಖ್ಯೆ ಗಂಡು 3847 + ಹೆಣ್ಣು 3314 ಒಟ್ಟು 7161ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಈಗಾಗಲೇ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮತ್ತು ನಾಲ್ಕು ಸಿ ಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಲು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಪರೀಕ್ಷೆ ಸಮಯದಲ್ಲಿ ಎಲ್ಲ ರೀತಿ ಯಿಂದ ಬಂದೋಬಸ್ತಗಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆಗಾಗಿ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಬಿಇಓ ಹೇಳಿದರು.
ಇದಲ್ಲದೆ ಪ್ರತಿದಿನ ಮುಂಜಾನೆ ಶಾಲಾ ಅವಧಿ ಪೂರ್ವ ವಿಶೇಷ ತರಗತಿ ನಡೆಸಲಾಗಿದೆ, ಶಾಲಾ ಕೊನೆಯ ಅವಧಿಯಲ್ಲಿ ಗುಂಪು ಅಧ್ಯಯನ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಹಾಗೂ ಪಾಲಕರ ಭೇಟಿ, ವಿದ್ಯಾರ್ಥಿಗಳ ವಾಟ್ಸಪ್ ಗುಂಪು ರಚನೆ, ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ವೈಯಕ್ತಿಕ ಕಾಳಜಿ, ತಾಯಂದಿರ ಸಭೆ ಆಯೋಜನೆ, ಪ್ರತಿ ಶನಿವಾರ ಶಿಕ್ಷಕರ ನಡೆ ಮಕ್ಕಳ ಮನೆ ಕಡೆ ಕಾರ್ಯಕ್ರಮ, ವಿವಿಧ ಇಲಾಖೆಯ ಅಧಿಕಾರಿಗಳ ನಡೆ ಸರ್ಕಾರಿ ಪ್ರೌಢ ಶಾಲೆ ಕಡೆ ಮೂಲಕ ಮಕ್ಕಳಿಗೆ ಪ್ರೇರಣಾ ಕಾರ್ಯಕ್ರಮ, ರಂಗೋಲಿಯಲ್ಲಿ ವಿಜ್ಞಾನ ಚಿತ್ರ ರಚನೆ, ರಂಗೋಲಿಯಲ್ಲಿ ಸಮಾಜ ನಕಾಶೆಗಳನ್ನು ಬಿಡಿಸುವುದು,ಚವಿಷಯವಾರು ಒಂದು ವಾಕ್ಯದಲ್ಲಿ ಉತ್ತರ ಬರೆಯುವ ಸ್ಪರ್ಧೆ ಆಯೋಜನೆ, ವಿಷಯವಾರು ಧೀರ್ಘ ಉತ್ತರ ಬರೆಯುವ ಸ್ಪರ್ಧೆ ಆಯೋಜನೆ, ವಿಷಯವಾರು ರಸಪ್ರಶ್ನೆ ಸ್ಪರ್ಧೆ ನಡೆಸುವುದು, ಶಾಲಾ ಹಂತದ ಎಸ್.ಎಸ್.ಎಲ್.ಸಿ ಫಲಿತಾಂಶ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿ ಪರಿಶೀಲನೆಗಾಗಿ ಮುಖ್ಯೋಧ್ಯಾಯರ ತಂಡ ಭೇಟಿ, ಜಾಣ ವಿದ್ಯಾರ್ಥಿಗಳ ಸಹಾಯದೊಂದಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಪ್ರಶ್ನೋತ್ತರ ಆಲಿಸುವ ಕಾರ್ಯಕ್ರಮ, ಸರಣಿ ಪರೀಕ್ಷೆಗಳ ಫಲಿತಾಂಶ ಆಯೋಜನೆ, ಸರಣಿ ಪರೀಕ್ಷೆಗಳ ಫಲಿತಾಂಶ ವಿಶ್ಲೇಷಣೆ, ರಾಜ್ಯ ಮಟ್ಟದ ಹಾಗೂ ತಾಲೂಕು ಮಟ್ಟದ ಪೂರ್ವ ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ಪರಿಶೀಲನೆಗಾಗಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಪ್ರಶ್ನೆ ಪತ್ರಿಕೆ ಪಾಲಕರು ಟ್ಯಾಗ್ ಶಾಲೆಗಳಿಗೆ ಭೇಟಿ ಕಾರ್ಯಕ್ರಮ, ದಿ. 13-03-2023 ರಿಂದ 18-03-2023ರ ವರೆಗೆ ಮುಂಜಾನೆ 9ಗಂಟೆಯಿಂದ ಸಾಯಂಕಾಲ 4ಗಂಟೆಯ ವರೆಗೆ ದಿನದ 7 ಅವಧಿಗಳಲ್ಲಿ 7 ಮಾದರಿ ಪ್ರಶ್ನೆ ಪತ್ರಿಕೆಗಳ ಉಜ್ವಲನಾ ಸಪ್ತಾಹ ಕಾರ್ಯಕ್ರಮ ನಡೆಸಲಾಗಿದೆ, ದಿ. 20-03-2023 ರಿಂದ 21-03-2023 ರವರೆಗೆ ವಿಷಯವಾರು ಸಂಪನ್ಮೂಲ ಶಿಕ್ಷಕರು ಆಯ್ದ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಇರುವ ವಿಷಯದ ಜಟಿಲತೆಯನ್ನು ಪರಿಹರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಪರೀಕ್ಷಾ ಸಮಯದ ವಿರಾಮದ ದಿನಗಳಲ್ಲಿ ವಿಷಯ ಶಿಕ್ಷಕರು ಮಕ್ಕಳೊಂದಿಗೆ ಶಾಲೆಯಲ್ಲಿ ಹಾಜರಿದ್ದು, ಮಕ್ಕಳಲ್ಲಿ ಇರುವ ಸಂದೇಶಗಳಿಗೆ ಪರಿಹಾರ ನೀಡುವುದು ಅಥವಾ ಕಠಿಣ ಅಂಶಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿ ಅಂತಿಮ ತಯಾರಿ ನಡೆಸಲಾಗಿದೆ ಎಂದು ಅಜಿತ ಮನ್ನಿಕೇರಿ ಪರೀಕ್ಷಾ ತಯಾರಿಯ ಮಾಹಿತಿ ನೀಡಿದರು.