ಶಿಕ್ಷಕರು ಪ್ರತಿಕ್ಷಣ ಹೊಸತನ್ನು ಕಲಿಯಬೇಕು – ತಹಶೀಲ್ದಾರ ಮಹಾತ್

Must Read

ಮೂಡಲಗಿ: ಜೀವನದಲ್ಲಿ ಸೋಲು ಗೆಲುವು ಪ್ರತಿಯೊಬ್ಬರ ಜೀವನದಲ್ಲಿ ಹಾವು ಏಣಿಯ ಆಟವಾಗಿದೆ. ಶಿಕ್ಷಕರು ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಸಹಪಠ್ಯ ಚಟುವಟಿಕೆಗಳಿಗೆ ಆದ್ಯತೆ ನಿಡಬೇಕು ಎಂದು ತಹಶೀಲ್ದಾರ ಡಿ.ಜೆ ಮಹಾತ ಹೇಳಿದರು.

ಅವರು ಶನಿವಾರ ಸ್ಥಳೀಯ ಉಮಾಬಾಯಿ ಪ್ರೌಢ ಶಾಲೆಯಲ್ಲಿ ಜರುಗಿದ ತಾಲೂಕು ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಹಾಗೂ ಯುವ ಸಂಸತ್ತು ಸ್ಪರ್ಧೆಗಳ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿರು.

ಶಿಕ್ಷಕರು ಬೋಧನೆಗೆ ಮಾತ್ರ ಸೀಮಿತಗೊಳ್ಳದೆ ಕ್ರಿಯಾತ್ಮಕವಾಗಿ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಮಕ್ಕಳಿಗೆ ಶೈಕ್ಷಣಿಕವಾಗಿ ಮುಂದುವರೆಯಲು ಇಂದಿನ ಸ್ಪಧಾತ್ಮಕ ಯುಗದಲ್ಲಿ ಸಹಪಠ್ಯ ಚಟುವಟಿಕೆಗಳ ಪಾತ್ರ ಬಹು ಮುಖ್ಯವಾಗಿವೆ. ಶಿಕ್ಷಕರು ಪ್ರತಿ ಕ್ಷಣವು ಹೊಸತನ್ನು ಕಲಿಯುತ್ತಿರಬೇಕು ಆವಾಗ ಮಾತ್ರ ಯಶಸ್ವಿ ಶಿಕ್ಷಕರಾಗಲು ಸಾಧ್ಯವೆಂದು ಹೇಳಿದರು.

ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಬೋಧನೆ ಮತ್ತು ಕಲಿಕೆಯಲ್ಲಿ ನಾವಿಣ್ಯತೆ ಇದ್ದಾಗ ಮಾತ್ರ ಫಲಪ್ರವಾದ ಶಿಕ್ಷಣ ಹೊಂದಲು ಸಾಧ್ಯವಾಗುವದು. ಸಹ ಪಠ್ಯ ಚಟುವಟಿಕೆಗಳು ಎಲ್ಲರಿಗೂ ಅತ್ಯವಶ್ಯಕವಾಗಿವೆ. ಮಕ್ಕಳ ಶಿಕ್ಷಣ ಪರಿಣಾಮಕಾರಿಯಾಗಲು ವಿಶಿಷ್ಟ ರೀತಿಯ ಕಲಿಕಾ ಚಟುವಟಿಕೆಗಳು ಅವಶ್ಯಕವಾಗಿವೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಸದಾ ಕಲಿಕೆಯಲ್ಲಿ ತೊಡಗಿಕೊಂಡು ಕಲಿಸುತ್ತಿರಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಲ್ಲಿ ವಿನೂತನ ಕಲಿಕಾ ಚಟುವಟಿಕೆಗಳು ಸಹಾಯಕವಾಗುತ್ತವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ತಾಪಂ ಸಹಾಯಕ ನಿರ್ದೇಶಕ ಎಸ್.ಎಸ್ ರೊಡ್ಡನವರ, ಇಸಿಒ ಕರಿಬಸವರಾಜು ಟಿ, ಸತೀಶ ಬಿ.ಎಸ್, ಆರ್.ವಿ ಯರಗಟ್ಟಿ, ಸಿಆರ್‍ಪಿ ಎಸ್.ಎನ್ ದಬಾಡಿ, ಶಿಕ್ಷಕರ ಸಂಘಟನೆಯ ರವಿ ಹೊಸಟ್ಟಿ, ಎಲ್.ಎಮ್ ಬಡಕಲ್, ಪಿ.ಬಿ ಕುಲಕರ್ಣಿ, ಎಸ್.ಎ ಕುರನಗಿ ಹಾಗೂ ತಿರ್ಪುಗಾರರು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

Latest News

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮ

ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಆವರಣದಲ್ಲಿ 77ನೇ ಗಣರಾಜ್ಯೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೇಲ್ಮನವಿ ನ್ಯಾಯಪೀಠದ ಸದಸ್ಯರು ಹಾಗೂ ಗೌರವಾನ್ವಿತ ಜಿಲ್ಲಾ...

More Articles Like This

error: Content is protected !!
Join WhatsApp Group