ನನಸಾಯಿತು ಹಿಂದೂಗಳ ೫೦೦ ವರ್ಷಗಳ ಕನಸು; ಅಯೋಧ್ಯಾ ಮಂದಿರದಲ್ಲಿ ವಿರಾಜಮಾನನಾದ ರಾಮಲಲ್ಲಾ

Must Read

ಅಯೋಧ್ಯೆ – ಸುಮಾರು ೫೦೦ ವರ್ಷಗಳ ಹಿಂದೆ ಮತಾಂಧರ ದಾಳಿಗೆ ಒಳಗಾಗಿ ಹಾನಿಗೊಳಗಾಗಿದ್ದ ಅಯೋಧ್ಯೆಯ ಶ್ರೀ ರಾಮನ ಜನ್ಮಸ್ಥಾನ ಮಂದಿರದ ಪುನರ್ ನಿರ್ಮಾಣದ ಹಿಂದೂಗಳ ಕನಸು ಇಂದು ನನಸಾಯಿತು.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಕಲ ವಿಧಿ ವಿಧಾನಗಳ ಮೂಲಕ ಅಯೋಧ್ಯೆಯ ಭವ್ಯ ಮಂದಿರದಲ್ಲಿ ವಿರಾಜಮಾನನಾದ ಶ್ರೀ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿಸಿದರು.

ಮೊದಲು ಇದ್ದ ರಾಮಮಂದಿರ ಕೆಡವಿ ಅದೇ ಜಾಗದಲ್ಲಿ ಮಸೀದಿ ಕಟ್ಟಿದ್ದ ಮತಾಂಧರ ವಿರುದ್ಧ ಸನಾತನಿಗಳು ಕಳೆದ ೫೦೦ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದರು. ಈ ಹೋರಾಟದಲ್ಲಿ ಸಾವಿರಾರು ರಾಮ ಭಕ್ತರು ಪ್ರಾಣ ಕಳೆದುಕೊಂಡಿದ್ದರು. ೧೯೯೨ ರಲ್ಲಿ ಬಾಬರಿ ಮಸೀದಿಯನ್ನು ಕೆಡವಿ ಹಾಕಿದರು. ಅಂದಿನಿಂದ ನ್ಯಾಯಾಲಯದ ಬಾಗಿಲು ತಟ್ಟಿದ್ದ ಈ ವಿವಾದ  ಕೊನೆಗೂ ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸಂಕಲ್ಪದಂತೆ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ೨೦೨೦ ರಲ್ಲಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿ ಜ.೨೨, ೨೦೨೦೪ ರಂದು ಶ್ರೀ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಇಡೀ ಭಾರತ ದೇಶವೇ ಕುತೂಹಲ ಭಕ್ತಿಯಿಂದ ಕಾಯುತ್ತಿದ್ದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಸಕಲ ವಿಧಿ ವಿಧಾನಗಳಿಂದ ಸರ್ವಶ್ರೇಷ್ಠ ಮುಹೂರ್ತದಲ್ಲಿ ನೆರವೇರಿದ್ದಕ್ಕೆ ಇಡೀ ಭಾರತ ದೇಶವಲ್ಲದೆ ವಿದೇಶಗಳ ರಾಮಭಕ್ತರೂ ಸಾಕ್ಷಿಯಾದರು !

ರಾಮ ಮಂದಿರದ ಗರ್ಭಗುಡಿಯಲ್ಲಿ ಮೋದಿಯವರ ಜೊತೆಗೆ ಆರ್ ಎಸ್ಎಸ್ ಮುಖಂಡ ಮೋಹನ ಭಾಗವತ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯಪಾಲೆ ಆನಂದಿ ಬೆನ್ ಪಟೇಲ,  ರಾಮ ಮಂದಿರ ಟ್ರಸ್ಟ್ ಅಧ್ಯಕ್ಷರು ಸೇರಿದಂತೆ ಅನೇಕ ಮಹಾನ್ ಪುರೋಹಿತ ಗಣ ಉಪಸ್ಥಿತರಿದ್ದರು.

ಮಂದಿರದ ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಇಡೀ ಅಯೋಧ್ಯೆಯೇ ಸರ್ವ ರೀತಿಯಿಂದ ಶೃಂಗಾರಗೊಂಡಿತ್ತು. ದೇಶದ ಸುಪ್ರಸಿದ್ಧ ಮಹಾಜನರು ಸೇರಿದ್ದರು. ಪುರೋಹಿತರು ನರೇಂದ್ರ ಮೋದಿ ಯವರಿಗೆ ಸರ್ವ ವಿಧಿವಿಧಾನಗಳ ಮಾರ್ಗದರ್ಶನ ಮಾಡಿದರು. ಮಂತ್ರೋಚ್ಛಾರ, ಪುಷ್ಪಾರ್ಚನೆಯೊಂದಿಗೆ ಭವ್ಯ ದಿವ್ಯವಾಗಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.

ವಿಜೃಂಭಣೆಯಿಂದ ಜರುಗಿದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು  ಕೋಟ್ಯಂತರ ಸಂಖ್ಯೆಯಲ್ಲಿ ರಾಮ ಭಕ್ತರು ಕಣ್ಮನ ತುಂಬಿಕೊಂಡರು.

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group