ಸಿಂದಗಿ: ಮಾಜಿ ಶಾಸಕ ರಮೇಶ ಭೂಸನೂರ ಅವರ ತಳವಾರ ಸಮಾಜಕ್ಕೆ ಕೊಡುಗೆ ಶೂನ್ಯ. ಆದರೆ ತಳವಾರ ಸಮಾಜವನ್ನು ಹಾಲಿ ಶಾಸಕ ಅಶೋಕ ಮನಗೂಳಿ ಅವರು ಕಡೆಗಣಿಸುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವಾಲೀಕಾರ ಸ್ಪಷ್ಟಪಡಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ತಳವಾರ ಮಹಾಸಭಾ ವತಿಯಿಂದ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಸಗಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಳವಾರ ಸಮುದಾಯ ಭವನವನ್ನು ೩೦ಲಕ್ಷ ಅನುದಾನದಲ್ಲಿ ಕಾಮಗಾರಿ ಚಾಲ್ತಿಗೊಂಡಿದೆ. ಸಿಂದಗಿ ನಗರದಲ್ಲಿಯೂ ತಳವಾರ ಸಮಾಜಕ್ಕೆ ೨೦ ಗುಂಟೆ ಭೂಮಿ ನೀಡುವುದರ ಜೊತೆಗೆ ರೂ ೫೦ ಲಕ್ಷ ಅನುದಾನವನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೋಟರಗಸ್ತಿ ಮಾತನಾಡಿ, ತಳವಾರ ಸಮುದಾಯಕ್ಕೆ ಸಿಂದಗಿ, ಅಲಮೆಲ ತಾಲೂಕುಗಳಲ್ಲಿ ಸುಮಾರು ೧೫ ನಾಮನಿರ್ದೇಶನ ಮಾಡಿದ್ದಾರೆ. ಸಮಾಜದ ಯಾರೆ ಹೋದರು ಅವರನ್ನು ಸಮಾನತೆಯಿಂದ ಕಾಣುವದರ ಜೊತೆಗೆ ಸರಕಾರಿ ಸೌಲಭ್ಯಗಳನ್ನು ನೀಡುವುದರಲ್ಲಿ ಮೊದಲಿಗರು ಶಾಸಕರು ಎಂದು ಹೇಳಿದರೆ ತಪ್ಪಾಗದು ಬೋರಗಿ ಒಂದೇ ಗ್ರಾಮಕ್ಕೆ ೮ ಕೊಳವೆ ಬಾವಿಗಳ ಸೌಲಭ್ಯ ದೊರಕಿಸಿಕೊಟ್ಟಿದ್ದಾರೆ ಹಿಂದಿನ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಪ್ರಚೂರು ಪಡಿಸಲಿ ಎಂದು ಸವಾಲೆಸೆದರು.
ಪುರಸಭೆ ಸದಸ್ಯ ಬಸವರಾಜ ಯರನಾಳ ಮಾತನಾಡಿ, ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ದೊರಕಿರುವುದು ಸಂವಿಧಾನಾತ್ಮಕವಾಗಿಯೇ ಹೊರತು ಬಿಜೆಪಿ ಅವರ ಕೃಪಾ ಕಟಾಕ್ಷದಿಂದಲ್ಲ. ಬಿಜೆಪಿಯವರು ಇದನ್ನು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದನ್ನು ಮೊದಲು ನಿಲ್ಲಿಸಬೇಕು. ಶಾಸಕರ ಸಾಧನೆ ಏನು ಎಂದು ಪ್ರಶ್ನಿಸುವ ನೀವು ಮಾಡಿದ ೧೨ವರ್ಷಗಳ ಸಾಧನೆಗಳಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಅಶೋಕ ಮನಗೂಳಿ ಅವರು ಕೇವಲ ಎರಡುವರೆ ವರ್ಷಗಳಲ್ಲಿ ಮಾಡಿದ್ದಾರೆ. ಇನ್ನೂ ಎರಡುವರೆ ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಪರ ಕಾರ್ಯಗಳಾಗಲಿವೆ. ಅಭಿವೃದ್ಧಿಯನ್ನು ಪ್ರಶಂಸಿಸಬೇಕೆ ಹೊರತು ವಿರೋಧ ಪಕ್ಷವೆಂಬ ಒಂದೆ ಕಾರಣಕ್ಕೆ ಎಲ್ಲವನ್ನು ದ್ವೇಷಿಸುವುದು ಎಷ್ಟು ಸರಿ. ಎಲ್ಲ ಸಮಾಜಗಳೊಟ್ಟಿಗೆ ತಳವಾರ ಸಮಾಜದೊಂದಿಗೂ ಅನ್ನೋನ್ಯತೆಯಿಂದಿರುವ ಶಾಸಕರ ಮೇಲೆ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿ ಪಕ್ಷದ ತಳವಾರ ಸಮಾಜದ ಮುಖಂಡರ ನಿಲುವು ಸರಿಯಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಸಮಿತಿ ತಾಲೂಕು ಉಪಾದ್ಯಕ್ಷ ಚಂದ್ರಕಾAತ ಬೂದಿಹಾಳ ಭೋಗಪ್ಪ ನರಗೋದಿ, ಮಡಿವಾಳಪ್ಪ ನಾಯ್ಕೋಡಿ, ಮಾತನಾಡಿದರು.
ಈ ವೇಳೆ ದವಲಪ್ಪ ಸೊನ್ನ, ಅನೀಲ ಉಡಚಣ, ಸಿದ್ದು ಮಾರದ, ಸಂಜೀವಕುಮಾರ ತಳವಾರ, ಪರಶುರಾಮ ನಾಯ್ಕಡಿ, ಸುರೇಶ ನಾಯ್ಕೋಡಿ, ವಿಜಯಕುಮಾರ ಯಾಳವಾರ, ಲಕ್ಕಪ್ಪ ಮೂಲಿ, ಅನೀಲ ಕಡಕೋಳ ಇದ್ದರು.

