Homeಸುದ್ದಿಗಳುಧರ್ಮದ ಬದುಕು ಮುಕ್ತಿಗೆ ದಾರಿ; ಶ್ರೀ ಚನ್ನಮಲ್ಲೇಶ್ವರ ಸಾಮೀಜಿ

ಧರ್ಮದ ಬದುಕು ಮುಕ್ತಿಗೆ ದಾರಿ; ಶ್ರೀ ಚನ್ನಮಲ್ಲೇಶ್ವರ ಸಾಮೀಜಿ

ಸಿಂದಗಿ: ಇಂದಿನ ವಿದ್ಯುನ್ಮಾನ ಯುಗದಲ್ಲಿ ಮಾನವನು ಭಕ್ತಿಗಳನ್ನು ಮರೆಮಾಚಿ ಅಂಧಕಾರದಲ್ಲಿ ಮುಳುಗಿದ್ದಾನೆ. ಮಾನವನ ಬದುಕು ಧರ್ಮದಿಂದ ಸಾಗಿದರೆ ಮುಕ್ತಿ ದೊರೆಯಲು ಸಾಧ್ಯ ಎಂದು ಪರಮ ಪೂಜ್ಯ ಚನ್ನಮಲ್ಲೇಶ್ವರ ಸಾಮೀಜಿ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಶ್ರೀ ವೀರಭಧ್ರೇಶ್ವರ ಜಾತ್ರಾ ನಿಮಿತ್ತ ಹಮ್ಮಿಕೊಂಡ ತಿಂಥಣಿ ಮೌನೇಶ್ವರ ಮಹಾ ಪುರಾಣ ಕಾರ್ಯಕ್ರಮದ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಾನವನಾಗಿ ಹುಟ್ಟಿದ ಮೇಲೆ ಬದುಕು ಧರ್ಮ ಕಾರ್ಯಕ್ಕೆ ಮೀಸಲಾಗಿಟ್ಟು ಧರ್ಮದ ಕಾರ್ಯ ನಡೆಯುವಂಥ ಸಂದರ್ಭದಲ್ಲಿ ಶರಣರ ಜೀವನ ಅವರ ಬದುಕು ಆದರ್ಶವಾಗಿ ಇಟ್ಟು ಕೊಂಡು ಪುರಾಣ ಪ್ರವಚಗಳಲ್ಲಿ ಶ್ರವಣ ಭಾಗಿಗಳಾಗಿ ಸಂಸಾರದಲ್ಲಿ ಇದ್ದು ಪಾರಮಾರ್ಥ ಗೆಲ್ಲುವ ದಿಶೆಯಲ್ಲಿ ಸಾಗ ಬೇಕು ಮಾನವ ಜನ್ಮ ಪಡೆದ ಆತ್ಮಕ್ಕೆ ಮುಕ್ತಿ ದೊರಕಲು ಧರ್ಮದಿಂದ ನಡೆಯಬೇಕು ನುಡಿದಂತೆ ನಡೆ ಇದೆ ಜನ್ಮ ಕಡೆ ಎನ್ನುವ ತತ್ವದಡಿ ನಡೆದಾಗ ಶರಣರ ಸಂದೇಶಕ್ಕೆ ಒಂದು ಅರ್ಥ ಬರುತ್ತದೆ ಎಂದರು.

ಡಾ.ರಾಜಶೇಖರ ಪತ್ತಾರ ಡಾ.ಆರ್.ಬಿ.ಕುಲಕರ್ಣಿ, ಪ್ರಕಾಶ ಅಡಗಲ್ಲ, ಶರಣು ಕೋಳಕೂರ, ಬಸವರಾಜ ಕೊಪ್ಪಾ, ವಿದ್ಯಾಧರ ಮಳಗಿ ಗಡಗಿ, ಸಂತೋಷ ಭೋನಾಳ ಪ್ರಶಾಂತ ನೆಲ್ಲಗಿ, ಶ್ರವಣಕುಮಾರ ದಸ್ಮಾ, ಅಶೋಕ ಚಿಂತಿ, ನಿಂಗರಾಜ ಅಡಗಲ್ಲ, ಈರಣ್ಣ ಕೋರಿ, ಈರಣ್ಣ ಬಡಿಗೇರ ಸೇರಿದಂತೆ ಇತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group