ಬೀದರ: ಮಹಾರಾಷ್ಟ್ರ ರಾಜ್ಯ ಮತ್ತು ಆಂಧ್ರಪ್ರದೇಶಕ್ಕೆ ಹೊಂದಿರುವ ಗಡಿ ಜಿಲ್ಲೆ ಬೀದರ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ಇಲಾಖೆ ಚುರುಕಾಗಿದ್ದು ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ ರೌಡಿ ಗಳಿಗೆ ಪೊಲೀಸ ಠಾಣೆ ಗೆ ಕರೆಸಿ ಎಚ್ಚರಿಕೆ ನೀಡಿದರು.
ಇನ್ನು ಮುಂದೆ ನೀವು ಯಾವುದೇ ಅಹಿತಕರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಕಂಡಲ್ಲಿ ನಿಮ್ಮನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಪುಡಿ ರೌಡಿಗಳಿಗೆ ನಡುಕ ಹುಟ್ಟಿಸಿದರು.
ಬೀದರ್ ಜಿಲ್ಲಾದ್ಯಂತ ಪ್ರತಿಯೊಂದು ಪೊಲೀಸ ಠಾಣೆಗೆ ಭೇಟಿ ನೀಡಿದ ವರಿಷ್ಠ ಪೋಲಿಸ್ ಅಧಿಕಾರಿ ಚೆನ್ನಬಸವಣ್ಣ ಲಂಗೋಟಿಯವರು ಈ ಸಂದರ್ಭದಲ್ಲಿ ಮಾತನಾಡುತ್ತ, ಬೀದರ್ ಜಿಲ್ಲೆ ಕರ್ನಾಟಕ ಕಿರೀಟ ಸೂಫಿ ಸಂತರ ನಾಡು, ಅಣ್ಣ ಬಸವಣ್ಣ ನಡೆದಾಡಿದ ನಾಡು ಬೀದರ. ಈ ಬೀದರ ನಲ್ಲಿ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಬೀದರ್ ನಲ್ಲಿ ಅಪರಾಧ ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಕಾನ್ಸ್ ಟೇಬಲ್, ಪಿಎಸ್ ಐ, ಸಿಪಿಐ ಎಸ್ ಪಿ ತನಕ ನಾವು ೧೭೩೨ ಸಿಬ್ಬಂದಿಗಳಿದ್ದು ಅಪರಾಧ ತಡೆಗಟ್ಟಲು ಬೀದರ ನಲ್ಲಿ ಇರುವ ರೌಡಿ ಗಳು ಮೇಲೆ ಹೆಚ್ಚು ಗಮನ ಹರಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಹಾಗೆ ನೋಡಿಕೊಂಡು ಹೋಗುತ್ತೇವೆ ಎಂದರು.
ಬೀದರ್ ನಲ್ಲಿ ಸದ್ಯದಲ್ಲಿಯೇ ಚುನಾವಣಾ ಕಾವು ಹೆಚ್ಚಾಗಲಿದ್ದು ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಪರಾಧ ಪ್ರಕರಣಗಳು ಜರುಗದಂತೆ ಪೊಲೀಸ್ ಇಲಾಖೆ ಸಂಪೂರ್ಣ ನಿಗಾ ವಹಿಸಿ ಸಜ್ಜಾಗಿದೆ ಎಂದು ವರಿಷ್ಠಾಧಿಕಾರಿಗಳು ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ