ಕನ್ನಡವನ್ನು ಉಳಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದು – ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

Must Read

ಬೆಂಗಳೂರು – ಸಿರಿಗನ್ನಡ ಮಿತ್ರ ತಂಡದಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ನಶಿಸುತ್ತಿರುವ ಕನ್ನಡ ಉಳಿಸುವ ನಿಟ್ಟಿನಲ್ಲಿ ಪತ್ರಿಕೆಗಳ ಪಾತ್ರ ಹಿರಿದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಕನ್ನಡಿಗನೂ ಪ್ರತಿನಿತ್ಯ ಕನಿಷ್ಠ ಒಂದು ಕನ್ನಡ ಪತ್ರಿಕೆಯನ್ನು ಕೊಂಡು ಓದಬೇಕು. ಜ್ಞಾನ ಕಣಜವೆನಿಸಿದ ಪತ್ರಿಕೆಗಳು ಸಮಕಾಲೀನ ಆಗುಹೋಗುಗಳ ಜೊತೆಗೆ ಭಾಷಾಭಿವೃದ್ದಿಗೆ ಸಹಕಾರಿಯೆನಿಸಿವೆ. ಅಂತೆಯೆ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಅಪೂರ್ವ ವಸ್ತು ವಿಷಯ ವೈವಿಧ್ಯತೆ ಇರುವ ಶ್ರೀಮಂತ ಕನ್ನಡ ಸಾಹಿತ್ಯ ಯುವ ಪೀಳಿಗೆಗೆ ಪರಿಚಯವಾಗಬೇಕೆಂದು ತಿಳಿಸಿದರು.

ಸಮಾಜ ಸೇವಕ ಆರ್.ವರದರಾಜು ಕಾರ್ಯಕ್ರಮ ಉದ್ಘಾಟಿಸಿದರು, ಉಷಾ ರಾಧಾಕೃಷ್ಣ, ರು.ಬಸಪ್ಪ, ಮಂಜುನಾಥ ಶರ್ಮ, ಎಸ್.ಎಸ್.ಪಡಶೆಟ್ಟಿ, ವೆಂಕಟೇಶ ಆರ್.ದಾಸ್.,ಪಿ ಈಶ್ವರ್, ಅಂಬರೀಷ್, ವೆಂಕಟೇಶ್.ಎಂಎಸ್, ಅಜಿತ್ ನಿರಂಜನ್, ಕೋ.ಲ ರಂಗನಾಥ ರಾವ್, ಎಸ್.ಸತೀಶ್ ರೆಡ್ಡಿ, ನಮೋ ರಜತ್ ಗುರುಜಿ, ಶ್ರೀಧರ ರಾಯಸಂ ಮೊದಲಾದವರು ಭಾಗವಹಿಸಿದ್ದರು, ಡಬ್ಲ್ಯೂ .ಕೆ.ವೆಂಕಟೇಶ್ ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಕೌಡ್ಲೇ ನಾರಾಯಣ ಶೆಟ್ಟಿ ವಂದಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group