ಸಂಗಮ ಸಂಸ್ಥೆಯ ಸೇವೆಯು ನಿಸ್ವಾರ್ಥ ಸೇವೆಯಾಗಿದೆ- ಶಾಸಕ ಅಶೋಕ ಮನಗೂಳಿ

0
200

ಸಿಂದಗಿ: ಪ್ರತಿ ಮಹಿಳೆಗೂ ಒಂದು ಸ್ವಾವಲಂಬಿ ಬದುಕು ಕೊಡಬೇಕು ಮಹಿಳೆಗೆ ಸ್ವಾವಲಂಬಿ ಬದುಕು ಕೊಟ್ಟರೆ ಮಾತ್ರ ಸಮಾಜ ದೊಡ್ಡದಾಗಿ ಬೆಳೆಯುತ್ತದೆ ಎಂಬ ದೂರ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡುವ ಸಂಸ್ಥೆ ಈ ತಾಲೂಕಿನಲ್ಲಿ ಸಂಗಮ ಸಂಸ್ಥೆ ಮಾತ್ರ ಎಂದು ಶಾಸಕ ಅಶೋಕ ಎಮ್ ಮನಗೂಳಿ ಹೇಳಿದರು.

ಪಟ್ಟಣದ ಸಂಗಮ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ನೂತನ ಶಾಸಕ ಅಶೋಕ ಮನಗೂಳಿ ಇವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಸಮಾಜದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದೆ ಉಳಿದಿರುವವರನ್ನು ಗುರುತಿಸಿ ಅವರನ್ನು ಮೇಲೆತ್ತುವಂಥ ಕೆಲಸವನ್ನು ಸಂಗಮ ಸಂಸ್ಥೆ ಮಾಡುತ್ತದೆ.

ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಸ್ವಾರ್ಥಕ್ಕಾಗಿ ಬದುಕದೆ ಸಮಾಜಕ್ಕಾಗಿ ಬದುಕಬೇಕು ಏಕೆಂದರೆ ನಾವು ಈ ಸಮಾಜಕ್ಕೆ ಏನು ಕೊಡುಗೆ ಕೊಡುತ್ತೇವೆ ಎಂಬುದು ತುಂಬಾ ಮುಖ್ಯವಾಗಿದೆ ಇದರಲ್ಲಿ ಇರುವಂಥ ಸಂತೋಷ ಮತ್ತೊಂದರಲ್ಲಿ ಇಲ್ಲ ಅದೇ ರೀತಿಯಾಗಿ ಸಂಗಮ ಸಂಸ್ಥೆಯು ಸಿಂದಗಿಯಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಕೂಡಾ ಸೇವೆ ಸಲ್ಲಿಸುತ್ತಿದೆ ಈ ಸೇವೆಯು ನಿಸ್ವಾರ್ಥ ಸೇವೆಯಾಗಿದೆ ಎಂದರು.

ಸಂಗಮ ಸಂಸ್ಥೆಯ ನಿರ್ದೇಶಕ ಫಾಧರ್ ಆಲ್ವಿನ್ ಡಿಸೋಜ ಮಾತನಾಡಿ, ಜೂನ್ ತಿಂಗಳು  ಎಂದರೆ ಹೊಸತನ ಬಂದಂತೆ. ಜೂನ್ ತಿಂಗಳಲ್ಲಿ ವಿವಿಧ ಸಸಿಗಳನ್ನು ನೆಡುವುದರ ಮೂಲಕ ನಾವು ಇನ್ನಷ್ಟು ಪರಿಸರವನ್ನು ಬೆಳೆಸೋಣ ಅದೇ ರೀತಿಯಾಗಿ ಸಿಂದಗಿ ನಗರಕ್ಕೂ ಹೊಸದಾಗಿ ಆಯ್ಕೆ ಆಗಿರುವ ಶಾಸಕರಿಂದ ಸಿಂದಗಿ ಅಭಿವೃದ್ದಿ ಆಗುತ್ತದೆ ಎಂಬ ವಿಶ್ವಾಸ ನಮಗಿದೆ ಸರ್ಕಾರದಿಂದ ಯಾವುದೆ ಸೌಲಭ್ಯ ಬಂದರೂ ಅದರ ಕುರಿತು ಮಾಹಿತಿ ಕೊಡುತ್ತೇವೆ ಮತ್ತು ನಮ್ಮ ಸಂಸ್ಥೆಯಿಂದ ನಿಮಗೆ ಸದಾ ಸಹಕಾರ ಇರುತ್ತದೆ ಎಂದು ಹೇಳಿದರು,

ಸಂಗಮ ಸಂಸ್ಥೆಯ ಸಹನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊರ ಮಾತನಾಡಿ, 1972 ರಲ್ಲಿ ಪರಿಸರ ದಿನವನ್ನೇ ಪ್ರಮುಖ ಅಜೆಂಡಾವಾಗಿ ಇರಿಸಿಕೊಂಡು ಸ್ಟಾಕ್‍ಹೋಮ್‍ನಲ್ಲಿ ವಿಶ್ವ ಸಂಸ್ಥೆಯ ಮೊದಲ ಸಮ್ಮೇಳನ ನಡೆಯಿತು. ಆಗ ಜೀವಿಸುವ ಹಕ್ಕನ್ನು ಗುರುತಿಸಲಾಗಿದ್ದು ಮಾನವನ ಬದುಕಿಗೆ ಆರೋಗ್ಯಕರ ವಾತಾವರಣ ಮುಖ್ಯ ಎಂಬುದನ್ನು ಮನಗಾಣಲಾಯಿತು ಇದೊಂದು ಐತಿಹಾಸಿಕ ಸಮ್ಮೇಳನವಾಗಿದ್ದು ಇದರಲ್ಲಿ ಜಾಗತಿಕ ಪರಿಸರ ಉಳಸುವಿಕೆಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೆ ವಿಶ್ವ ಸಂಸ್ಥೆಯು ಪರಿಸರ ಕಾರ್ಯಕ್ರಮವನ್ನು ರೂಪಿಸಲಾಯಿತು. ಹೀಗಾಗಿ ಜೂನ್ 05 ರಿಂದ ವಿಶ್ವ ಪರಿಸರ ದಿನವೆಂದು ಆಚರಣೆ ಮಾಡಲು ನಿರ್ಧರಿಸಲಾಯಿತು. ಅಂದಿನಿಂದ ಇಂದಿನವರೆಗೂ ಜೂನ್ 05 ರಿಂದ ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಸಸಿಗಳ ವಿತರಣೆ ಮಾಡಲಾಯಿತು ಮತ್ತು ವಿವಿಧ ಪಿಂಚಣಿ ಆದೇಶ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. 

ವಿಜಯ ಬಂಟನೂರ ನಿರೂಪಿಸಿದರು, ಮಲಕಪ್ಪ ಹಲಗಿ ಸ್ವಾಗತಿಸಿದರು, ರಾಜೀವ ಕುರಿಮನಿ  ವಂದಿಸಿದರು ಹಾಗೂ ಶ್ರೀಮತಿ ತೇಜಶ್ವೀನಿ ಹಳ್ಳದಕೇರಿ ಇವರು ಸಂವಿಧಾನ ಪ್ರಸ್ತಾವನೆ ಓದಿದರು,