ಸಿಂದಗಿ: ಶಿಕ್ಷಕರಾದವರಿಗೆ ಕಂಠ ಸ್ಪಷ್ಟವಾಗಿರಬೇಕು ಒಬ್ಬ ವಿದ್ಯಾರ್ಥಿ ಗುರುವನ್ನು ಮೀರಿಸುವ ದಿಸೆಯಲ್ಲಿ ವಿದ್ಯಾರ್ಜನೆ ಮಾಡಿ ಬೆಳೆಯಬೇಕು ಅಂದಾಗ ಮಾತ್ರ ಗುರುವಿಗೆ ಗೌರವ ಸಲ್ಲಿಸದಂತಾಗುತ್ತದೆ ಎಂದು ಸಾಹಿತಿ ರಾ.ಶಿ.ವಾಡೇದ ಹೇಳಿದರು.
ಪಟ್ಟಣದ ಎಮ್ ಎಸ್ ಗುರುಕುಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪ ಪೂ ಮಹಾವಿದ್ಯಾಲಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ 134ನೇ ಜನ್ಮ ದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಎಂದಿಗೂ ಆರದ ದೀಪ ಜ್ಞಾನಜ್ಯೋತಿಯನ್ನು ಬೆಳಗಿಸಿಕೊಂಡು ಮುನ್ನಡೆಯಬೇಕು. ಶ್ರಮದಿಂದಲೆ ಸಂಪತ್ತು ಗಳಿಸಲು ಸಾಧ್ಯ ಹಾಗೆಯೇ ಶ್ರಮದಿಂದಲೆ ಜ್ಞಾನವನ್ನು ಗಳಿಸಲು ಸಾಧ್ಯ ಹೀಗಾಗಿ ವಿದ್ಯಾರ್ಥಿಗಳು ಶ್ರಮ ಪಟ್ಟು ಓದಿ ಒಳ್ಳೆಯ ಜ್ಞಾನವನ್ನು ಪಡೆದು ಸಂಸ್ಥೆಗೆ ಕೀರ್ತಿಯನ್ನು ತರುವಂತವರಾಗಬೇಕು ಎಂದರು.
ಪ್ರಾಚಾರ್ಯ ರಾಜೇಶ ಭಿಂಗೆ ಮಾತನಾಡಿ, ಶಿಕ್ಷಕ ವೃತ್ತಿ ಜಗತ್ತಿನಲ್ಲಿಯೇ ಶ್ರೇಷ್ಠವಾದುದ್ದು ಹಾಗೂ ಶಿಕ್ಷಕ ವೃತ್ತಿಗೆ ಸಮಾನವಾದ ವೃತ್ತಿ ಮತ್ತೊಂದಿಲ್ಲ ಎಂದು ಹೇಳಿದರು. ಶಿಕ್ಷಕರು ಬ್ರಹ್ಮನ ಪ್ರತಿರೂಪ ಶಿಕ್ಷಕನು ತನ್ನ ಕರ್ತವ್ಯವನ್ನು ಮರೆತರೆ ಸಮಾಜ ನಶಿಸಿ ಹೋಗುತ್ತದೆ ಎಂದು ಕೋಠಾರಿ ಆಯೋಗದ ಶಿಫಾರಸಿನಂತೆ ಒಂದು ರಾಷ್ಟ್ರದ ಭವಿಷ್ಯವು ನಾಲ್ಕು ಗೋಡೆಗಳ ಮಧ್ಯದಲ್ಲಿ ನಿರ್ಮಾಣವಾಗುತ್ತದೆ ಶಿಕ್ಷಕರಲ್ಲಿ ಒಳ್ಳೆಯ ಚಾರಿತ್ರ್ಯವಿರಬೇಕು, ಸಂಯಮವಿರಬೇಕು ಹಾಗೂ ಶಿಕ್ಷಕರು ಸದಾ ಹಸನ್ಮುಖಿಯಾಗಿರಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮಾತನಾಡಿ, ಪಾಪರಹಿತಪಥ ಗುರುಪಥ ಎಂದು ಹೇಳುತ್ತಾ ಗುರುಗಳ ಸ್ಮರಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಯಲದ ಎಲ್ಲಾ ಉಪನ್ಯಾಸಕರು ಹಾಗು ಪ್ರೌಢ ಶಾಲೆಯ ಸಿಬ್ಬಂದಿ ವರ್ಗ ಬಂಧುಗಳು ಉಪಸ್ಥಿತರಿದ್ದರು.
ಉಪನ್ಯಾಸಕ ಆರ್.ಎಸ್.ಗಾಯಕವಾಡ ಸ್ವಾಗತಿಸಿದರು. ಎಸ್.ಸಿ ದುದ್ದಗಿ ನಿರೂಪಿಸಿದರು. ಉಪನ್ಯಾಸಕಿ ಎಸ್. ಎ. ಬಮ್ಮಣಿ ವಂದಿಸಿದರು.