spot_img
spot_img

ಜಗದ ಉದ್ಧಾರಕ್ಕೆ ವೀರಭದ್ರೇಶ್ವರರು ಅವತರಿಸಿದರು : ಡಾ. ಮುರುಘರಾಜೇಂದ್ರ

Must Read

- Advertisement -

ಮೂಡಲಗಿ: ಹಿಂದೂ ಪರಂಪರೆಯಲ್ಲಿ ಪ್ರತಿ ದೇವರ ಅವತಾರದ ಹಿಂದೆ ಪೌರಾಣಿಕ ಕತೆಗಳಿವೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಭಾಗೋಜಿಕೊಪ್ಪ ಹಿರೇಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರದಂದು ನಡೆದ ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ ಎಂದರು.

ಶೈವರು ಮಾತ್ರವಲ್ಲದೇ ಎಲ್ಲ ಜಾತಿಜನಾಂಗದವರು ವೀರಭದ್ರನನ್ನು ಪೂಜಿಸಿದ ಇತಿಹಾಸವಿದೆ. ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳು ಕಾಣುತ್ತವೆ. ವೀರಗಾಸೆಯ ಮೂಲಕ ವೀರಭದ್ರನ ಚರಿತ್ರೆ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದೆ ಎಂದು ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ ಸಮ್ಮುಖ ವಹಿಸಿದ್ದರು. ವೀರಭದ್ರೇಶ್ವರ ಜಯಂತಿ ಆಚರಣೆ ಸಮಿತಿ ಪರವಾಗಿ ಕಾರ್ಯಕ್ರಮದಲ್ಲಿದ್ದ ಶ್ರೀಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.

ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿರುವ ವೀರಭದ್ರೇಶ್ವರರ ಗದ್ಗುಗೆಗೆ ರುದ್ರಾಭಿಷೇಕ ಮತ್ತು ಭಾವಚಿತ್ರಕ್ಕೆ ಮಹಾಪೂಜೆ, ಸುಮಂಗಲೆಯರಿಂದ ನೈವೇದ್ಯ ಸಮರ್ಪಣೆ, ದೀಪೋತ್ಸವ, ಪುರವಂತರಿಂದ ಒಡಪು ಹೇಳುವದು, ಮಹಾಮಂಗಲದೊಂದಿಗೆ ವೀರಭದ್ರೇಶ್ವರ ಜಯಂತ್ಯುತ್ಸವ ಸರಳವಾಗಿ ಜರುಗಿತು. ಬೆಟಗೇರಿ ಗಜಾನನ ಯುವಕ ಮಂಡಳಿಯವರ ವತಿಯಿಂದ ಮಹಾಪ್ರಸಾದ ಸೇವೆ ನಡೆಯಿತು.

ಹರ, ಗುರು, ಚರಮೂರ್ತಿಗಳು, ಗಣ್ಯರು, ವೀರಭದ್ರಸ್ವಾಮಿ ಪುರವಂತರು, ಭಕ್ತರು, ಮಹಿಳೆಯರು, ವೀರಭದ್ರೇಶ್ವರ ಜಯಂತ್ಯುತ್ಸವ ಸೇವಾ ಸಮಿತಿ, ಗಜಾನನ ಯುವಕ ಮಂಡಳಿ ಅಧ್ಯಕ್ಷರು, ಸದಸ್ಯರು, ಎಲ್ಲ ಸಮುದಾಯದ ಹಿರಿಯ ನಾಗರಿಕರು, ಗ್ರಾಮಸ್ಥರು ಇದ್ದರು.

- Advertisement -
- Advertisement -

Latest News

ಹುನಗುಂದದ ಜನ ಭಕ್ತಿವಂತರು – ಪ್ರಶಾಂತ ದೇವರು

ಹುನಗುಂದ :-ಧರ್ಮ ಮಾನವನ ಅವಿಭಾಜ್ಯ ಅಂಗ ಧರ್ಮ ಎಂದರೆ ಬದುಕಿನ ರೀತಿ ಮಾನವ ಕುಲ ಸುಖದಿಂದ ಇರಬೇಕಾದ ಧರ್ಮ ಬೇಕೇ ಬೇಕು ಧರ್ಮದಿಂದ ಮಾತ್ರ ಜಗತ್ತಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group