ಧ್ವನಿ ಸುರುಳಿ ಬಿಡುಗಡೆ

0
666

ಸವದತ್ತಿ: ಉತ್ತರ ಕರ್ನಾಟಕದ ಯುವ ಪ್ರತಿಭೆಗಳು ತಮ್ಮದೆ ಆದ ಹೊಸದಾದ ಪ್ರತಿಭೆಯೊಂದಿಗೆ ಒಂದಿಲ್ಲೊಂದು ಕ್ಷೇತ್ರದಲ್ಲಿ ಮಿಂಚುತ್ತಿದ್ದು, ಆ ಪ್ರತಿಭೆಗಳಿಗೆ ಇಂದು ಪ್ರೋತ್ಸಾಹ ಬಹುಮುಖ್ಯವಾಗಿದೆ.

ಸವದತ್ತಿಯ ಆದಿಶಕ್ತಿ ಶ್ರೀ ರೇಣುಕಾಮಾತೆಯ ಕ್ಷೇತ್ರದಲ್ಲಿರುವ ಯುವ ಪ್ರತಿಭೆ ಆರ್ಯಮನು ಪುಂಡಲೀಕ ಬಾಳೋಜಿ ತಾನೇ ಗೀತೆ ರಚಿಸಿ ಸಂಗೀತ ಹಾಗೂ ಧ್ವನಿ ನೀಡುವ ಮೂಲಕ ಈಗ ಮತ್ತೊಂದು ಧ್ವನಿಸುರಳಿಯನ್ನು ಬಿಡುಗಡೆ ಮಾಡಲು ಸಜ್ಜಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಮಂಗಳವಾರದಂದು ಆದಿಶಕ್ತಿ ಶ್ರೀ ಕ್ಷೇತ್ರ ಯಲ್ಲಮ್ಮನ ಸನ್ನಿಧಿಯಲ್ಲಿ ಮೆಸ್ಸಿಂಗ್ ವಿತ್ ಮೈ ಹೆಡ್ ಶೀರ್ಷಿಕೆ ಆಧಾರಿತ ಕನ್ನಡ ಆವೃತ್ತಿ ಹಾಡಿನ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಭೀ. ಬಾಳೋಜಿ ನಿರ್ಮಾಣದಲ್ಲಿ ಸುರೇಶ ಭೀ. ಬಾಳೋಜಿ ನಿರ್ದೇಶನದಲ್ಲಿ ಮಲ್ಲಿಕಾರ್ಜುನ ಬಿ, ಸ್ಟಿಪನ್ ಜೇಮ್ಸ್, ಪ್ರೇಮ್, ಯುಸುಫ್ ಚಿತ್ರೀಕರಿಸಿದ ಹಾಡಿಗೆ ರಾಕೇಶ ಮತ್ತು ಆಶೀಫ್ ಸಂಕಲನ ಮಾಡಿದ್ದಾರೆ. ಆರ್ಯಮನು ಹಾಗೂ ಕೀರ್ತಿ ನಟಿಸಿದ ಹಾಡಿಗೆ ಶುಭಾಂಗಿಣಿ ಮತ್ತು ಆರ್ಯಮನು ಧ್ವನಿ ನೀಡಿದ್ದಾರೆ. ಶೀಘ್ರದಲ್ಲಿ ಈ ಹಾಡಿನ ಟೀಸರ್ ಬಿಡುಗಡೆ ನಂತರ ಸಂಪೂರ್ಣ ಹಾಡು ಬಿಡುಗಡೆಗೊಳ್ಳಲಿದೆ.

ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಲ್ಲಮಪ್ರಭು ಪ್ರಭುನವರ, ಸುರೇಶ ಬಾಳೋಜಿ, ಭೀಮಪ್ಪ ಆರೇರ, ರೇಖಾ ಬಾಳೋಜಿ, ವಿನಾಯಕ ಘೋರ್ಪಡೆ, ಕೃಷ್ಣಾ ಪವಾರ, ವರ್ಷಾ ಬಾಳೋಜಿ, ಸುಪ್ರೀಯಾ ಬಾಳೋಜಿ ಉಪಸ್ಥಿತರಿದ್ದರು.