ಕನ್ನಡ ಭಾಷೆ ನಮ್ಮದೆಂದು ಹೇಳಲು ಹೆಮ್ಮೆ ಪಡಬೇಕು – ಭೇರ್ಯ ರಾಮಕುಮಾರ

Must Read

ಮೈಸೂರು – ಅಖಿಲ ಭಾರತೀಯ ಸಾಹಿತ್ಯ ಕನ್ನಡ ಸಮ್ಮೇಳನದ ಕನ್ನಡದ ಜ್ಯೋತಿ ರಥಯಾತ್ರೆ ಇಂದು ಬೆಳಿಗ್ಗೆ ಕೆ.ಆರ್.ನಗರಕ್ಕೆ ಆಗಮಿಸಿದಾಗ ಬಹಳ ವೈಭವಪೂರ್ಣ ಸ್ವಾಗತ ಕೋರಲಾಯಿತು.

ತಹಸೀಲ್ದಾರ್ ಸಂತೋಷ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಖಜಾಂಚಿಗಳಾದ ಜಿ.ಪ್ರಕಾಶ್, ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿಂಡಿಮ ಶಂಕರ್,ಹಿರಿಯ ಸಾಹಿತಿಗಳಾದ ಭೇರ್ಯ ರಾಮಕುಮಾರ್, ಹೆಗ್ಗಂದೂರು ಪ್ರಭಾಕರ್, ತಾಲ್ಲೂಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು,ಜನಪ್ರತಿನಿಧಿಗಳು,ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ರಥವು ತೋಪಮ್ಮ ದೇವಾಲಯದ ಬಳಿ ಬಂದಾಗ ಜಾನಪದ ಕಲಾ ಪ್ರಕಾರಗಳೊಡನೆ ಸ್ವಾಗತಿಸಲಾಯಿತು. ನಂತರ ಜಿಲ್ಲಾ ಸಹಕಾರ ಬ್ಯಾಂಕ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ರಥಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಲಾಯಿತು.

ಕನ್ನಡ ರಥಯಾತ್ರೆಯ ಸಂಚಾಲಕರಾದ ನಬಿಸಾಬ್  ಕುಷ್ಟಗಿ ಅವರು ಮಾತನಾಡಿ, ಡಾ.ಮಹೇಶ್ ಜೋಷಿ ಅವರ ನೇತೃತ್ವದಲ್ಲಿ  ಕನ್ನಡ ಸಾಹಿತ್ಯ ಪರಿಷತ್ ಅಭ್ಯುದಯದತ್ತ ಸಾಗಿದೆ.ಕನ್ನಡದ ಅಭ್ಯುದಯಕ್ಕೆ ಕ.ಸಾ.ಪ.ದ ಕೊಡುಗೆ ಅಪಾರ. ಎಲ್ಲರೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದು ಯಶಸ್ವಿಗೆ ಸಹಕರಿಸಬೇಕೆಂದು ಕರೆ ನೀಡಿದರು.

ತಹಸೀಲ್ದಾರ್ ಸಂತೋಷ್ ಅವರು ಮಾತನಾಡಿ ಕನ್ನಡ ನಾಡು, ನುಡಿಯ ಉಳಿವಿಗೆ ಎಲ್ಲರೂ ಕಟಿಬದ್ಧರಾಗಬೇಕೆಂದು ನುಡಿದರು.

ಹಿರಿಯ ಸಾಹಿತಿಗಳಾದ ಭೇರ್ಯ ರಾಮಕುಮಾರ್ ಅವರು ಮಾತನಾಡಿ, ಕನ್ನಡ ನಾಡು-ನುಡಿಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಲಿಪಿಗೆ ಐದುನೂರು ವರ್ಷಗಳ ಇತಿಹಾಸವಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು, ಮೂರು ರಾಷ್ಟ್ರಕವಿ  ಪ್ರಶಸ್ತಿಗಳು ದೊರೆತಿವೆ. ಇಂತಹ ಕನ್ನಡ ನಮ್ಮದೆಂದು ಹೇಳಿಕೊಳ್ಳಲು ಕನ್ನಡ ಹೆಮ್ಮೆ ಪಡಬೇಕು. ಒಬ್ಬ ಕನ್ನಡೇತರನಿಗಾದರೂ ಕನ್ನಡ ಕಲಿಸಬೇಕು.ಕನ್ನಡ ನಾಡು-ನುಡಿಗೆ ಕುತ್ತು ಬಂದಾಗ ಹೋರಾಟಕ್ಕೂ ಹಿಂಜರಿಯಬಾರದು ಎಂದು ಕರೆ ನೀಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿಂಡಿಮ ಶಂಕರ್ ಅವರು ಮಾತನಾಡಿ, ಡಾ.ಮಹೇಶ್ ಜೋಷಿ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು  ಕನ್ನಡ ನಾಡಿನ ಮನೆಮನೆ ಮುಟ್ಟಿದೆ. ಕನ್ನಡಿಗರ ಹೃದಯ ಗೆದ್ದಿದೆ ಎಂದು ನುಡಿದರು. 

ಇದೇ ಸಂದರ್ಭದಲ್ಲಿ ಕನ್ನಡ ರಥದ ಉಸ್ತುವಾರಿಗಳಾದ ನಬೀಸಾಬ್ ಕುಷ್ಟಗಿ ಹಾಗೂ ತಹಸೀಲ್ದಾರ್ ಸಂತೋಷ್ ಅವರನ್ನು ಸನ್ಮಾನಿಸಲಾಯಿತು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group