ವಿಪ್ ಉಲ್ಲಂಘನೆ ದೂರು; ತಳ್ಳಿ ಹಾಕಿದ ಕೋರ್ಟ್

0
425

ಸಿಂದಗಿ; ಸಿಂದಗಿಯ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಹಾಸೀಂಪೀರ ಆಳಂದ, ಶ್ರೀಶೈಲ ಬೀರಗೊಂಡ, ಪ್ರತಿಭಾ ಕಲ್ಲೂರ, ತಹಸೀನಬಾನು ಮುಲ್ಲಾ 4 ಜನ ಸದಸ್ಯರು ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಪಕ್ಷೇತರ ವ್ಯಕ್ತಿಗೆ ಮತ ಚಲಾಯಿಸಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಜುಲೈ 22- 2020 ರಂದು 4 ಜನರ ಸದಸ್ಯತ್ವವನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದರು ಆ ಆದೇಶವನ್ನು ಡಿ. 8 ರಂದು ಕಲಬುರ್ಗಿ ಹೈಕೋರ್ಟ ದ್ವಿ ಸದಸ್ಯ ಪೀಠ ತಳ್ಳಿ ಹಾಕಿ ಸದಸ್ಯರಾಗಿ ಮುಂದುವರೆಯುವಂತೆ ತೀರ್ಪು ನೀಡಿದೆ ಎಂದು ಪುರಸಭೆ ಸದಸ್ಯ ಹಾಸೀಂಪೀರ ಆಳಂದ ತಿಳಿಸಿದ್ದಾರೆ.

ನಾಲ್ಕು ಜನ ಸದಸ್ಯರು ಕಾಂಗ್ರೆಸ್ ಪಕ್ಷದ ಟಿಕೇಟ್ ಪಡೆದು ಆಯ್ಕೆಗೊಂಡು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಪಕ್ಷಾಂತರ ಕಾಯ್ದೆ 1987 ಪ್ರಕರಣ 3(1)(ಬಿ) ಉಲ್ಲಂಘನೆ ಮಾಡಲಾಗಿದೆ ಎನ್ನುವ ದೂರಿನಡಿ 1987ರ ನಿಯಮ 4(2)(|||)ರಡಿಯಲ್ಲಿ ವಿಚಾರಣೆ ಮಾಡಿ ಪಕ್ಷಾಂತರ ಕಾಯ್ದೆ 1987 ಕಲಂ 3(ಬಿ) ರಡಿ ವಿಪ್‍ ಉಲ್ಲಂಘಿಸಿದ ಸದಸ್ಯರ ಸದಸ್ಯತ್ವವನ್ನು ಕಲಂ 4(2)(|||)ರಡಿ 4 ಜನರ ಪುರಸಭೆ ಸದಸ್ಯತ್ವವನ್ನು ಪತ್ರಿಕಾ ವರದಿಗನುಗುಣವಾಗಿ ಜಿಲ್ಲಾಧಿಕಾರಿಗಳು ಅನರ್ಹಗೊಳಿಸಿ ಆದೇಶ ನೀಡಿದ್ದರು.

ಆದರೆ ಕಲಬುರ್ಗಿ ಹೈಕೋರ್ಟ ದ್ವಿ ಸದಸ್ಯಪೀಠ ಪತ್ರಿಕಾ ವರದಿಯು ಸಾಕ್ಷಿಯಾಗುವುದಿಲ್ಲ. ಅಲ್ಲದೆ ಸಾಕ್ಷಿ ಪುರಾವೆಗಳು ಸರಿಯಾಗಿ ಕ್ರೂಢೀಕರಣವಾಗಿಲ್ಲದರ ಕಾರಣ ಪುರಸಭೆ ಸದಸ್ಯರನ್ನು ಅನರ್ಹಗೊಳಿಸಿದ ಆದೇಶವನ್ನು ತಳ್ಳಿ ಹಾಕಿ ಆದೇಶ ಹೊರಡಿಸಿದೆ.