ಸಿಂದಗಿ- ನಗರದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಿಂದಗಿ ಯಿಂದ ಕೊಡಂಗಲ್ ರಸ್ತೆ ಕುರಿತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಅಗಸ್ಟ್ ೨೪ರಂದು ಸಿಂದಗಿಗೆ ಆಗಮಿಸಿದ ಸಂದರ್ಭದಲ್ಲಿ ೨೫ ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಲಾಗಿದೆ ಇದನ್ನು ತಿಳಿದುಕೊಂಡ ಬಿಜೆಪಿಗರು ಈ ರಸ್ತೆಯ ಬಗ್ಗೆ ಪ್ರತಿಭಟನೆ ಮಾಡಿ ನಮ್ಮಿಂದಲೇ ಆಗಿದೆ ಎನ್ನುವದನ್ನು ಬಿಂಬಿಸಿಕೊಳ್ಳುವ ಚಾಳಿಗೆ ಬಂದು ನಿಂತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ತಿರುಗೇಟು ನೀಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ನಮ್ಮ ಶಾಸಕರ ಪ್ರಯತ್ನದಿಂದ ಆದಷ್ಟು ಬೇಗ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ, ಬಿಜೆಪಿ ಮಂಡಲದ ವತಿಯಿಂದ ರಸ್ತೆತಡೆ ಮಾಡಲು ಮುಂದಾದ ಬಿಜೆಪಿ ಮಂಡಲ ಅಧ್ಯಕ್ಷರೇ ನೀವು ಸುಮಾರು ವರ್ಷಗಳಿಂದ ತಾವು ಇದೆ ರಸ್ತೆಗೆ ಹಾದು ಹೋಗುತ್ತಿದ್ದಿರಿ ಆಗ ಈ ಗುಂಡಿಗಳು ಕಾಣಲ್ಲಿಲ್ಲವೇ ನೀವು ಈ ರಸ್ತೆ ಕಾರ್ಯ ಯಾಕೆ ಮಾಡಲಿಲ್ಲ ಬಿಜೆಪಿ ಸರ್ಕಾರ ಸುಮಾರು ೧೨ ವರ್ಷಗಳ ಕಾಲ ಅಧಿಕಾರ ಅವಧಿಯಲ್ಲಿ ಯಾಕೆ ಮಾಡಲಿಲ್ಲ, ಈ ರಸ್ತೆಗೆ ಸಂಬಂಧ ಪಟ್ಟ ಹಾಗೆ ಶಾಸಕರು ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಾ ಬಂದಿದ್ದಾರೆ, ಮುಂದೇಯು ಮಾಡುತ್ತಾರೆ ಎನ್ನುವ ಭರವಸೆ ನಮಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯ ಸಾಯಬಣ್ಣ ಪುರದಾಳ, ಮುಖಂಡ ಪ್ರವೀಣ ಕಟಿಗೊಂಡ ಇದ್ದರು.

