spot_img
spot_img

ಪ್ರವಾಹದಲ್ಲಿ ಕೊಚ್ಚಿ ಹೋದ ಕುಟುಂಬ : ಪ್ರಕೃತಿಯ ಜೊತೆ ಚೆಲ್ಲಾಟವೇಕೆ ?

Must Read

- Advertisement -

ಜಲಪಾತ ವೀಕ್ಷಿಸಲು ಹೋಗಿದ್ದ ಮುಂಬೈ ಮೂಲದ ಕುಟುಂಬವೊಂದು ಪ್ರವಾಹದಲ್ಲಿ ಕೊಚ್ಚಿ ಹೋದ ದಾರುಣ ಘಟನೆಯ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದ್ದು ಪ್ರಕೃತಿಯ ಜೊತೆ ಚೆಲ್ಲಾಟವಾಡುವವರಿಗೆ ಯಾವಾಗ ಎಚ್ಚರಿಕೆ ಮೂಡುವುದೋ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಮಹಾರಾಷ್ಟ್ರದ ಪುಣೆ ಸಮೀಪದ ಲೋನಾವಾಲಾದ ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದ ಕುಟುಂಬವೊಂದು ಜಲಪಾತದ ವೀಕ್ಷಣೆಗೆ ಹೋಗಿದ್ದು ನದಿಯ ತೀರದಲ್ಲಿ ನಿಂತು ನೋಡಬೇಕಾಗಿದ್ದು ನದಿಯ ಮಧ್ಯೆ ಹೋಗಿದ್ದೇಕೆ ಎಂಬುದು ಪ್ರಶ್ನೆಯಾಗಿದೆ. .

ಕುಟುಂಬದ ಎಂಟು ಜನರು ( ಅವರಲ್ಲಿ ಇಬ್ಬರು ಪುಟ್ಟ ಕಂದಮ್ಮಗಳು )  ನದಿಯ ನಡುಮಧ್ಯೆ ಸಿಲುಕಿದ್ದು ಅಲ್ಲಿಂದ ಪಾರಾಗಿ ಬರುವಷ್ಟರಲ್ಲಿ ಜಲಪಾತದ ನೀರಿನ ಹರಿವು ಹೆಚ್ಚಾಗಿದೆ ಅಲ್ಲಿದ್ದವರಿಗೆ ದಂಡೆಗೆ ಬರಲು ಅವಕಾಶವನ್ನೇ ಕೊಡದ ನದಿಯ ಪ್ರವಾಹ ನೋಡ ನೋಡುತ್ತಿದ್ದಂತೆಯೇ ಎಲ್ಲಾ ಜನರನ್ನೂ ಎಳೆದುಕೊಂಡು ಹೋಗಿದ್ದು ತೀರದಲ್ಲಿ ನಿಂತವರು ನಿಂತು ನೋಡುವುದಷ್ಟೇ ಸಾಧ್ಯವಾಯಿತು. ಇದೊಂದು ದಿಗ್ಭ್ರಮೆಗೊಳಿಸುವಂಥ ಘಟನೆ.

- Advertisement -

ಭಾನುವಾರ ಪುಣೆ ನಗರದ ಸೈಯದ್ ನಗರ ಮೂಲದ ಏಳು ಜನರ ಕುಟುಂಬವೊಂದು ರಜಾ ದಿನವಾಗಿದ್ದರಿಂದ ಮುಂಬೈಯಿಂದ 80 ಕಿ.ಮೀ ದೂರದಲ್ಲಿರುವ ಭೂಶಿ ಆಣೆಕಟ್ಟಿನ ಹಿನ್ನೀರಿನ ಲೋನಾವಾಲಾ ಜಲಪಾತ ಬಳಿ ಬಂದಿತ್ತು. ಈ ವೇಳೆ ನೀರಿನ ಪ್ರಮಾಣ ಕಡಿಮೆ ಇತ್ತು. ಕುಟುಂಬ ಸದಸ್ಯರು ನೀರಿನ ನಡುವೆ ಆಟವಾಡಲು ತೆರಳಿದ್ದಾರೆ. ದುರದೃಷ್ಟವಶಾತ್ ಈ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸರಿಯುತ್ತಿರುವ ಮಳೆಯಿಂದ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು ಪರಿಣಾಮ ಹಿನ್ನೀರಿನ ಮಟ್ಟ ಒಮ್ಮೆಲೇ ಏರಿಕೆಯಾಗಿದೆ. ಹಾಗಾಗಿ ಏಕಾಏಕಿ ಜಲಪಾತದ ಬಳಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಏಳು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಇಬ್ಬರು ಈಜಿ ದಡ ಸೇರಿ ಬಚಾವಾಗಿದ್ದು ಐವರು ನೀರುಪಾಲಾಗಿದ್ದರು. ಇದರಲ್ಲಿ ಮೂವರ ಮೃತದೇಹಗಳು ಭಾನುವಾರ ಪತ್ತೆಯಾಗಿದ್ದು ಇಬ್ಬರು ನಾಪತ್ತೆಯಾಗಿದ್ದರು. ಅವರ ಪತ್ತೆ ಕಾರ್ಯಾಚರಣೆ ಸೋಮವಾರ ನಡೆಸುವುದಾಗಿ ರಕ್ಷಣಾ ತಂಡ ತಿಳಿಸಿದೆ.

ಎಲ್ಲೋ ಒಂದು ಕಡೆ ಸೆಲ್ಫಿಯ ಹುಚ್ಚು ಎಳೆಯ ಯುವಕ, ಯುವತಿಯರನ್ನು ಬಲಿ ತೆಗೆದುಕೊಳ್ಳುತ್ತದೆ, ಬೈಕ್ ನ ಅಪಾಯಕಾರಿ ವ್ಹೀಲಿಂಗ್ ಯಾರೋ ಒಬ್ಬರ ಕರುಳ ಕುಡಿಯನ್ನು ಬಲಿಪಡೆಯುತ್ತದೆ…. ಹೀಗೆ ಅನೇಕ ರೀತಿಯಲ್ಲಿ ವಿನಾಕಾರಣ ಸಾಹಸಕ್ಕೆ ಇಳಿದು ಯುವಕರು ಜೀವ ತೆರುತ್ತಿದ್ದು ಇದು ನಿಲ್ಲಬೇಕಾಗಿದೆ. ಮೇಲಿನ ಘಟನೆಯಲ್ಲಿ ವಯಸ್ಕರಿದ್ದರೂ ಈ ಘಟನೆ ನಡೆದಿದೆಯೆಂದರೆ ಪ್ರಕೃತಿಯ ಜೊತೆಗೆ ಯಾರೇ ಆದರೂ ಚೆಲ್ಲಾಟವಾಡುವುದು ಸರಿಯಲ್ಲ ಎಂಬ ಸಂದೇಶ ಸಿಗುತ್ತದೆ.

ಇದಕ್ಕೆ ಪರಿಹಾರವೆಂದರೆ ಯುವಸಮೂಹಕ್ಕೆ ಮನೆಯಲ್ಲಿಯೇ ಸರಿಯಾದ ತಿಳಿವಳಿಕೆ ಸಿಗಬೇಕು, ಮಳೆಗಾಲದಲ್ಲಿ ಪ್ರವಾಸಕ್ಕೆ ಹೊರಟು ನಿಂತ ಮಗ ಅಥವಾ ಮಗಳಿಗೆ ಪಾಲಕರು ಸರಿಯಾಗಿ ಬುದ್ಧಿ ಹೇಳಿ, ಯಾವುದೇ ಸಾಹಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಬೇಕು, ಪ್ರವಾಸಿ ತಾಣಗಳಲ್ಲಿ ಎಲ್ಲಾ ಕಡೆಯೂ ಅಪಾಯಕಾರಿ ತಾಣದ ಬಗ್ಗೆ ಎಚ್ಚರಿಕೆ ಬೋರ್ಡ್ ಹಾಕಬೇಕು, ರಸ್ತೆಯ ಮೇಲೆ ವ್ಹೀಲಿಂಗ್ ಮಾಡುವ ಯುವಕರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಆ ಶಿಕ್ಷೆಯ ಪ್ರಸಾರ ಎಲ್ಲಾ ಕಡೆ ಆಗಬೇಕು.

- Advertisement -

ಸಾಹಸದ ಹೆಸರಿನಲ್ಲಿ ಚಿಗುರುತ್ತಿರುವ ಕುಡಿಗಳು ಉದುರದಿರಲಿ ಎಂಬ ಕಳಕಳಿಯೊಂದಿಗೆ…..

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group