ಮುಧೋಳ- ಸಾಮಾಜಿಕ ಸ್ಥಿತಿಗತಿಗಳನ್ನು ಸುಧಾರಿಸಲು ವ್ಯಕ್ತಿ ಅಥವಾ ಸಂಸ್ಥೆಯು ಸಲ್ಲಿಸುವ ಕಾರ್ಯಕ್ಕೆ ಸಮಾಜ ಸೇವೆ ಎನ್ನುತ್ತೇವೆ. ಆ ಕಾರ್ಯವನ್ನು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮವು ಹಾಗೂ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನವು ಅಚ್ಚುಕಟ್ಟಾಗಿ ಸುಮಾರು ವರ್ಷಗಳಿಂದ ಮಾಡುತ್ತಾ ಬಂದಿದ್ದು ಈ ಕಾರ್ಯವು ಶ್ಲಾಘನೀಯ ಎಂದು ಸಮಾಜಸೇವಕ ಗ್ರಾಮ ಪಂಚಾಯಿತಿ ಸದಸ್ಯ ಶಂಕರಗೌಡ ಎಸ್ ಪಾಟೀಲ್ ಅಭಿಪ್ರಾಯಪಟ್ಟರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆದ ಕೃಷ್ಣಾವತಾರಿ ಅನ್ನದಾನೇಶ್ವರ ಅಪ್ಪಾಜಿಯವರ 75 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಮನುಷ್ಯನ ಆಲೋಚನೆಗಳು ಯಾವುದೇ ಲಾಭದ ಉದ್ದೇಶವಿಲ್ಲದೆ ಸಮಾಜದ ಹಿತಾಸಕ್ತಿ ಯಾರಿಗೆ ಹೆಚ್ಚು ಮಹತ್ವದ್ದಾಗಿದೆಯೋ ಅವರು ಸಾಮಾಜಿಕ ಸೇವೆ ನೀಡಲು ಮುಂದೆ ಬರುತ್ತಾರೆ ಅಂತಹ ಸೇವಾಕಾರ್ಯವು ತೆರೆಮರೆಯಲ್ಲಿ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ನಡೆಯುತ್ತಿರುವುದು ಗ್ರಾಮಕ್ಕೆ ಶೋಭೆಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಮಾತನಾಡಿ “ಭಕ್ತ ವತ್ಸಲ” ಭಕ್ತರ ಕಾರುಣ್ಯ ನಿಧಿಯಾದ ಅನ್ನದಾನೇಶ್ವರರು ನಂಬಿದ ಭಕ್ತರಿಗೆ ಕಾಮಧೇನುವಾಗಿದ್ದಾರೆ ಎಂದರು.
ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಎಲ್ ಶ್ಯಾಮಲಾ ಅವರು ಮಾತನಾಡಿ ನಮ್ಮ ದುಃಖ ದುಃಮ್ಮಾನಗಳನ್ನು ಪರಿಹರಿಸುವ ಸಮರ್ಥ ಸದ್ಗುರು ಅನ್ನದಾನೇಶ್ವರರು ಎಂದರು. ಪೂಜ್ಯರಾದ ಮಹಾಲಿಂಗಯ್ಯ ಸ್ವಾಮೀಜಿ ಹಿರೇಮಠ.ಸಿದ್ದಯ್ಯ ಸ್ವಾಮೀಜಿ ಹಿರೇಮಠ ಸಭೆಯ ಸಾನ್ನಿಧ್ಯ ವಹಿಸಿದ್ದರು. ಪವಾಡಪುರುಷಮಹಾಳಿಂಗೇಶ್ವರ ಪೂಜಾರಿಗಳು ಹಾಗೂ ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಿಹಿ ಹಂಚಲಾಯಿತು.
ಭಜನೆ, ನಾಮಜಪ, ಓಂಕಾರ ನಾಮಸ್ಮರಣೆ ನಿರಗ೯ಳವಾಗಿ ಜರುಗಿತು.ನಂತರ ಮಂಗಲದೊಂದಿಗೆ ಪ್ರಸಾದ ವಿತರಿಸಲಾಯಿತು. ಕಂದಾಯ ಅಧಿಕಾರಿ ಶ್ರೀಶೈಲ ಪಾಟೀಲ, ಸಾವಿತ್ರಿ ಹಿರೇಮಠ, ಚನ್ನಪ್ಪ ಕುಂಬಾರ, ಭೌರಮ್ಮ ಹಿರೇಮಠ, ಶೇವಂತೆವ್ವ, ಶಾರದಾ ಮುಂತಾದವರಿದ್ದರು. ಎಲ್ ಲಕ್ಷ್ಮೀಪ್ರಸಾದ ಸ್ವಾಗತಿಸಿ ವಂದಿಸಿದರು

