ಕವನ: ನಿರಾಶ್ರಿತರಿಗೆ ಕೈ ಜೋಡಿಸೋಣ..

Must Read

*ನಿರಾಶ್ರಿತರಿಗೆ ಕೈ ಜೋಡಿಸೋಣ..*

ಕೊರಗಬೇಡ,ಕರಗಬೇಡ
ದೇವರ ದೂಷಿಸಲೂ ಬೇಡ
ಪ್ರವಾಹ, ಭೂಕಂಪ, ರೋಗ-ರುಜಿನಗಳು
ನೆಂಟರಂತೆ,ಬಯಸದಿದ್ದರೂ ಬಂದೇ ಬರುವವು….

ಅಂದು ನಮ್ಮ ಅಜ್ಜ-ಅಜ್ಜಿಯರ ದಿನಗಳಲಿ
ರಾಕ್ಷಸನಾಗಿ ಕಾಡಿತ್ತು ಪ್ಲೇಗ್, ಸಿಡುಬು, ಕಾಲರಾ,
ನಮ್ಮಷ್ಟು ವಿಧ್ಯೆ ಕಲಿಯದಿದ್ದರೂ,ಬುದ್ದಿವಂತರು
ಊರ ತ್ಯಜಿಸಿ,ಹೊಲ-ಗದ್ದೆಗಳಲಿ ಗುಡಿಸಲು ಕಟ್ಟಿ,
ಸಾಮಾಜಿಕ ಅಂತರ ರೂಪಿಸಿ,ಜೀವ ಕಾಪಾಡಿಕೊಳ್ಳುತ್ತಿದ್ದರು ಅಂದಿನ ಜನ…..

ಕೃಷಿ ಯ ಸ್ವರ್ಗ ನೈಲ್ ನದಿಯ ಪ್ರವಾಹಕೆ
ಹರಪ್ಪ-ಮೊಹೆಂಜೊದಾರೊ ಸ್ಮಶಾನವಾದವು,
ಪುರಾತನ ನಾಗರೀಕತೆ ಮಣ್ಣುಪಾಲಾಗಿತ್ತು,
ಆದರೂ ಮಾನವ ಸಮಾಜ ಬದುಕುಳಿಯಲಿಲ್ಲವೇ !!!
ಚಂದ್ರನ ಮೇಲೇರಲಿಲ್ಲವೇ ?ಮಂಗಳನ ಮುಟ್ಟಲಿಲ್ಲವೇ ?

ವೈರಸ್ ರೋಗದ ಬಗ್ಗೆ ಚಿಂತೆ ಬೇಡ,
ಸಾಮಾಜಿಕ ಅಂತರ ಕಾಪಾಡೋಣ ,
ನಾಮಕರಣ,ವಿವಾಹ,ಗೃಹಪ್ರವೇಶಗಳ ಹೆಸರಲಿ
ಶ್ರೀಮಂತಿಕೆಯ ,ಆಡಂಬರದ ಪ್ರದರ್ಶನ ಬೇಡ !!
ಸರಳವಾಗಿ ಮಾಡೋಣ ; ಸುಖವಾಗಿ ಬದುಕೋಣ !!!!!

ಪ್ರವಾಹ,ಭೂಕಂಪಗಳಾದಾಗ ಸೆಲ್ಫಿ ಹುಚ್ಚು ತ್ಯಜಿಸೋಣ,
ಜಾತಿ-ಮತ- ಧರ್ಮಗಳ ತ್ಯಜಿಸೋಣ ,
ನೊಂದವರ ಕಾಪಾಡಲು ಅಹರ್ನಶಿ ಶ್ರಮಿಸೋಣ..
ನಿರಾಶ್ರತರಿಗೆ ಬದುಕು ಕಟ್ಟಲು ಕೈಜೋಡಿಸೋಣ..

ಪ್ರವಾಹ ಪೀಡಿತ ಪ್ರದೇಶಗಳ ಗುರ್ತಿಸೋಣ ,
ನೊಂದ ಜನರ ಕಾಪಾಡಲು ಅಧಿಕಾರಸ್ಥರ ಒತ್ತಾಯಿಸೋಣ,
ತಗ್ಗಿನ ಜನರಿಗೆ ಶಾಶ್ವತ ಸೌಲಭ್ಯ ಕಲ್ಪಿಸಲು ಸರ್ಕಾರಕೆ ಒತ್ತಡ ಹೇರೋಣ, ನಿರಾಶ್ರಿತರ ಕಾಪಾಡಲು ಎಲ್ಲರೂ ಕೈಜೋಡಿಸೋಣ…..

ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು,ಪತ್ರಕರ್ತರು
ಮೊ:94496 80583
63631 72368

Latest News

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...

More Articles Like This

error: Content is protected !!
Join WhatsApp Group