ಅಣ್ಣನನ್ನು ಧಿಕ್ಕರಿಸಿ ತಮ್ಮ ಬಿಜೆಪಿ ಪಕ್ಷಕ್ಕೆ

Must Read

ಬೀದರ – ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನು ಭೇದಿಸಲು ಪಾಟೀಲ ಮನೆತನದ ಪ್ರಭಾವಿ ಯುವನಾಯಕನಾದ ಸಿದ್ದು ಪಾಟೀಲ ರನ್ನು ಬಿಜೆಪಿ ಪಕ್ಷಕ್ಕೆ ತರುವಲ್ಲಿ ಬೀದರ ಜಿಲ್ಲೆಯ ಬಿ ಜೆ ಪಿ ಯ ನಾಯಕರು ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೆ ಕರೆಯಲ್ಪಡುವ ಬೀದರ ಜಿಲ್ಲೆಯ ಹುಮನಾಬಾದ ವಿಧಾನ ಸಭಾ ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷದ ನಾಯಕರು ಪಾಟೀಲ್ ಮನೆತನದ ಯುವನಾಯಕ ರಾಜಶೇಖರ ಪಾಟೀಲರ ಗೆಲುವಿನ ರೂವಾರಿ ಎಂದು ಹೆಸರುವಾಸಿಯಾಗಿರುವ ಅವರ ಸಹೋದರ ಸಂಬಂಧಿಯಾದ ಸಿದ್ದಲಿಂಗಪ್ಪ ನಾಗಭೂಷಣ ಪಾಟೀಲ ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನೆಲೆಯನ್ನು ಇಲ್ಲದಂತೆ ಮಾಡುವ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಕಾಣುತಿದೆ ಎಂದು ಹೇಳಬಹುದು.

ತನ್ನ ಸಹೋದರ ರಾದ ಮಾಜಿ ಸಚಿವ ರಾಜಶೇಖರ ಪಾಟೀಲರ ಹೆಗಲಿಗೆ ಹೆಗಲು ಕೊಟ್ಟ ತನ್ನ ದೊಡ್ಡಪ್ಪ ರಾದ ಬಸವರಾಜ ಪಾಟೀಲರ ಗೆಲುವಿಗೆ ಪಾತ್ರರಾದ ಸಿದ್ದು ಪಾಟೀಲ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಕಾಲಿಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ನಡುಕ ಪ್ರಾರಂಭ ವಾಗಿದೆ ಎಂದು ಹೇಳಬಹುದು.

ಹುಮನಾಬಾದ ಕ್ಷೇತ್ರದಲ್ಲಿ ಬಹುತೇಕ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಮತದಾರರು ಹೆಚ್ಚಾಗಿದ್ದು ಇಲ್ಲಿಯ ವರೆಗೆ ಸಿದ್ದು ಪಾಟೀಲ ಅವರು ಹಿಂದುಳಿದ ವರ್ಗದ ಯುವಕರ ಕಣ್ಮಣಿ ಎಂದು ಭಾವಿಸಲಾಯಿತು. ಸಿದ್ದು ಪಾಟೀಲರು ಬಿಜೆಪಿ ಪಕ್ಷದ ಸೇರ್ಪಡೆ ಯಿಂದ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಮತದಾರರು ತಮ್ಮ ನಾಯಕರ ಕೈಹಿಡಿದು ಕಾಂಗ್ರೆಸ್ ಪಕ್ಷದಕ್ಕೆ ನೆಲೆಯಿಲ್ಲದಂತೆ ಮಾಡುವರೊ ಅಥವಾ ತಮ್ಮ ನಾಯಕರನ್ನು ಕೈಬಿಟ್ಟು ಕಾಂಗ್ರೆಸ್ ಪಕ್ಷವನೇ ಬಂಲಿಸುವರೋ ಕಾದು ನೋಡಬೇಕು.

ವರದಿ : ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group