spot_img
spot_img

ಕನ್ನಡದಿತಿಹಾಸದ ಒಂದು ನೆನಪು ಕನ್ನಡ ಉಳಿವಿಗೆ ಕ್ರಮ ಕೈಗೊಳ್ಳಬೇಕು

Must Read

- Advertisement -

ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎನ್ನುವ ಆದಿಕವಿ ಕನ್ನಡದ ಕವಿ ಪಂಪನ ನುಡಿಯಂತೆ, ಕಾವೇರಿಯಿಂದಮಾ ಗೋದಾವರಿಯವರೆಗೆ ಪಸರಿರ್ಪನಾಡೋಳ್ ಕನ್ನಡ ಎಂಬ ಕವಿವಾಣಿಯಲ್ಲಿಯೇ ಕನ್ನಡ ನೆಲ ,ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು ಅಂತ ತಿಳಿಯುತ್ತದೆ. ದಂಡೆತ್ತಿ ಬಂದ ಹರ್ಷವರ್ಧನನನ್ನು ಗೋದಾವರಿಯ ತಟದವರೆಗೆ ಬೆನ್ನತ್ತಿ ಬೆಂಡೆತ್ತಿ ಸೋಲಿಸಿದ ಪುಲಕೇಶಿಯ ವೀರತನದಲ್ಲಿ ಕನ್ನಡದ ಕಂಪು ಎದ್ದು ಸೂಸುತ್ತದೆ,ಕಂಚಿಯ ಪಲ್ಲವರನ್ನು ಕಣ್ಣಿಗೆ ಕಾಣದಂತೆ ಈ ನಾಡಿನಿಂದ ಹೊರಅಟ್ಟಿ ಕನ್ನಡದ ಕಹಳೆ ಊದಿದ ವೀರಮಯೂರ ವರ್ಮನ ತೋಳಿನ ಮಾಂಸಖಂಡದಲ್ಲಿ ಕನ್ನಡದ ತಾಕತ್ತು ಗೊತ್ತಾಗುತ್ತದೆ.ಗಂಗನಾಡಿನ ವೀರಬಲ್ಲಾಳ,ಕಲಿಚಾವುಂಡರಾಯನ ಪುರಾಣದಲ್ಲಿ ಕನ್ನಡದ ಕಂಪು ಹರಡಿದ್ದು ಓದಲೇ ಬೇಕಾದದ್ದು.ಹೊಯ್ಸಳ ದೊರೆ ವಿಷ್ಣುವರ್ಧನನ ಕೆಚ್ಚೆದೆಯ ಕಲಿತನದಲ್ಲಿ ಕಲ್ಲಲ್ಲೇ ಕಲೆ ಅರಳಿಸಿದ ಕಲ್ಲು ಕೂಡಾ ಕನ್ನಡದ ಮಹಿಮೆಯ ಸಾರಿದ ಪರಿ ಮರೆಯಲು ಆಗದು. ಹಿಂದೂಧರ್ಮದ ಉಳಿವಿಗೆ ಉದಯವಾದ ವಿಜಯನಗರದ ವೀರತನದ ಸುವರ್ಣಸಾಮ್ರಾಜ್ಯದ ನೆನಪು ಇತಿಹಾಸದ ಅಮರ ಅಕ್ಷರಗಳಲ್ಲಿ ಕನ್ನಡ ಅಮರವಾಗಿದೆ.

ವಿದೇಶಿಯಾತ್ರಿಕರು ಒರೆಗಲ್ಲಿಗೆ ಹಚ್ಚಿ ಜಗದತುಂಬ ಹರಡಿದ ಕನ್ನಡದ ಧ್ವಜ ಹಾರಾಡಿದ ಪರಿ ಮರೆಯಲಾಗದು. ಕೆಳದಿ ,ಕಿತ್ತೂರು,ಚಿತ್ರದುರ್ಗದ ಕಲಿಮಹಿಳೆಯರ ಕೆಚ್ಚೆದೆಯ ಖಡ್ಗದ ತುದಿಯಲ್ಲಿ ಝೇಂಕರಿಸಿದ ಕನ್ನಡ ಇಂದಿಗೆ ಸ್ಮರಣೀಯ.

ರವಿಕೀರ್ತಿ,ಪಂಪ,ರನ್ನ,ಪೊನ್ನ,ಜನ್ನ,ಹರಿಹರ,ರಾಘವಾಂಕರ ನಲ್ ನುಡಿಯ ಅಮೃತದ ಸವಿಇಂದಿಗೂ ಸವಿಯುತ್ತಿರುವದು ಬಿಡಲಾಗದು.ಅಲ್ಲಮ,ಅಕ್ಕ,ಬಸವರಾದಿಯರ ವಚನದ ಪರಿ ಬದುಕಿನ ಮಾರ್ಗವಾಗಿದೆ,ಕನಕ,ಪುರಂದರ,ಶಿಶುನಾಳ ಶರೀಫರ ಕೀರ್ತನೆಗಳ ಕಂಪೆಮೆಗೆ ತಂಪು ನೀಡಿವೆ,ಮುದ್ದಣ ಪುತಿನ,ಕುವೆಂಪು,ಮಾಸ್ತಿ ವೆಂಕಟೇಶ ಅಯ್ಯಂಗಾರರು,ಶಿವರಾಮ ಕಾರಂತ,ವರಕವಿ ಬೇಂದ್ರೆ,ವಿ,ಕೃ,ಗೋಕಾಕರು,ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರರ ಕನ್ನಡವನ್ನು ಮೆರಸಿದ ಮುಕುಟ ಮಣಿಗಳಿವರು.ಚನ್ನವೀರ ಕಣವಿ,ಚಂಪಾ, ಇನ್ನು ಅನೇಕ ನವಯುಗದ ಕನ್ನಡ ಕವಿಮಣಿಗಳ ಸ್ಮರಣೆ ಅತ್ಯಗತ್ಯವಲ್ಲವೆ?

- Advertisement -

ಹೀಗೆ ಕನ್ನಡ ಕೋಗಿಲೆಗಳ ಕಂಚಕಂಠದಲಿ ಕಲಿಗಳ ಖಡ್ಗದಂಚಿನಲಿ ಮೆರದ ನಾಡು ಹರಿದು ಹಂಚಿಹೋಗಿತ್ತು. ನಾಡಗುಡಿಯ ಕಟ್ಟಿ ಕನ್ನಡದ ಗಂಟೆ ಕಟ್ಟಲು ಹಲವಾರು ಮಹನಿಯರು ಚಿಂತನೆಯ ಸಾಗರದಲ್ಲಿ ಸಾಗುತ್ತಿರುವಾಗ.ಹಂಪೆಯ ಇಂದಿನ ಹಂಪೆಯ ರೈಲನ್ನು ಹತ್ತಿ ಹೊರಟವರು ಈ ನಾಡಿನ ಕುಲಪುರೋಹಿತರಾದ ಹುಯಿಲುಗೋಳ ನಾರಾಯಣರಾಯರು ಹಾಳೂರು ಹಂಪೆಯ ನೋಡಿದ ಮನ ಮಮ್ಮಲ ಮರುಗಿ,ವಿಜಯನಗರದ ವೈಭವ ವರ್ಣನೆ ಓದಿದ ಕಣ್ಣುಗಳು ನಿಜ ಹಂಪೆಯ ಪರಿನೋಡಿ ನೊಂದುಕೊಂಡು ಅಲ್ಲಿಯೇ *ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು* ಎಂಬ ನಾಡಗೀತೆಯನ್ನು ಬರೆದರು.1890ರಲ್ಲಿ ದಾರವಾಡದಲ್ಲಿ ಎಲ್ಲ ಚಿಂತಕರೊಡಗೂಡಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿಕೊಂಡು ಹರಿದ ನಾಡ ನೆಲವನ್ನು ಒಂದುಗೂಡಿಸಲು ಪ್ರಾರಂಭಿಸಿದರು, 1905 ರಲ್ಲಿ ಬಂಗಾಳದ ವಂಗಭಂಗ ಚಳುವಳಿಯ ಪ್ರೇರಣೆಯಿಂದಾಗಿ ನಾರಾಯಣರಾಯರೂ ತಮ್ಮ ವಾಗ್ಬೂಷಣ ಪತ್ರಿಕೆಯ ಮುಖಾಂತರ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು,ಇದರ ಪರಿಣಾಮವಾಗಿ 1915 ರಲ್ಲಿ ಮೈಸೂರ ರಾಜ್ಯದಲ್ಲಿ ಸರ್ ಎಂ ವಿಶ್ವೇಶ್ವರಯ್ಯರ ನಾಯಕತ್ವದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಉದಯವಾಯಿತು,ಕನ್ನಡ ಗ್ರಂಥಗಳ ಪ್ರಕಟಣೆ,ಕನ್ನಡ ಶಬ್ಧಕೋಶದ ರಚನೆಗೆ ಮುಂದಾಯಿತು,ತದನಂತರ 1937ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ನಾಮದಿಂದ ಕನ್ನಡ ಸಾಹಿತ್ಯ ಪರಿಷತ್ತಾಗಿ ಬದಲಾಯಿಸಿ ಇಂದಿನ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಾಹಿತ್ಯ ಪರಿಷತ್ತು ಉದಯವಾಯಿತು.

ಹೈದರಾಬಾದ್ ಕರ್ನಾಟಕ,ಮೈಸೂರು ಕರ್ನಾಟಕ,ಬಾಂಬೈ ಕರ್ನಾಟಕ,ಮದ್ರಾಸ್ ಕರ್ನಾಟಕ,ಕೊಡಗು ಕರ್ನಾಟಕ,ಹಲವಾರು ಭಾಗಗಳಾಗಿ ಹರಿದ ನಾಡನ್ನು ಸ್ವಾತಂತ್ರಾನಂತರ ಭಾಷಾವಾರು ಪ್ರಾಂತಗಳ ವಿಂಗಡನೆಯ ಅಡಿಯಲ್ಲಿ 1953 ಕ್ಕಿಂತ ಮುಂಚೆ ಮೈಸೂರು ಕರ್ನಾಟಕ ಎಂಬ ಹೆಸರಿನಿಂದ ಹೊಸರಾಜ್ಯ ಉದಯ ವಾಯಿತು, ನಂತರ ಈ ನೆಲದ ಉತ್ತರ ಕರ್ನಾಟಕದ ಹಲವಾರು ಮಹನೀಯರ ಮನವಿ, ಹೋರಾಟದ ಫಲವಾಗಿ ಈ ನಾಡಿನ ಮಣ್ಣಿನ ಗುಣವಾದ ಕರಿಮಣ್ಣಿನಾಧಾರದ ಮೇಲಾಗಿ,ಕರುನಾಡು,ಕಮ್ಮಿತ್ತು ನಾಡು,ಕರ್ನಾಟಕವೆಂದು ನಾಮಕರಣಕ್ಕೆ ಅಣಿಯಾಗಿ 1953 ನವ್ಹಂಬರ್ ಒಂದರಂದು ನಾಮಕರಣಗೊಂಡಿತು,ತದನಂತರ 1973ನವ್ಹಂಬರ ಒಂದರಂದು ಕರ್ನಾಟಕ ಎಂದು ಹೊಸನಾಮದೊಂದಿಗೆ ಈ ನಾಡು ಉದಯವಾಯಿತು,ಅಂದಿನಿಂದ ಇಂದಿನವರೆಗೂ ನವ್ಹಂಬರ ಒಂದರಂದು ಅತ್ಯಂತ ವಿಜೃಂಭಣೆಯಿಂದ ಈ ನಾಡ ಹಬ್ಬ ಆಚರಣೆಯಲ್ಲಿ ಬಂದಿದೆ. ಕೆಂಪು ಮತ್ತು ಹಳದಿ ಬಣ್ಣದಿಂದ ಕೂಡಿದ ಈ ಧ್ವಜ ಈ ನಾಡಿನ ಶ್ರೇಷ್ಠತೆಯ ಸಂಕೇತವಾಗಿದೆ.

ಆಂಗ್ಲವ್ಯಾಮೋಹದಿಂದ.ಅನ್ಯ ಭಾಷಿಕರ ವಲಸೆಯಿಂದ ನಲುಗುತ್ತಿರುವ ಈ ತಾಯಿಯ ಸ್ಥಿತಿಯನ್ನು ನೋಡಿದಾಗ ಕರುಳು ಕಿತ್ತುಬರುವ ಸ್ಥಿತಿ ನಮ್ಮದಾಗಿದೆ,ಇಂದಿಗೂ ಕೂಡಾ ಕನ್ನಡಕ್ಕಾಗಿ ಕನ್ನಡ ನೆಲದಲ್ಲಿಯೇ ಹೋರಾಟಮಾಡಬೇಕಾದ ಸ್ಥಿತಿ ಕನ್ನಡಿಗರದಾಗಿದೆ,ತೆಲುಗು, ಮರಾಠಿಗರ ಪುಂಡಾಟಿಕೆ ಉತ್ತರದಲ್ಲಿ ಹೆಚ್ಚಾದರೆ,ದಕ್ಷಿಣದಲ್ಲಿ ತಮಿಳಿಗರ ಪ್ರಭಾವಳಿಯೆ ಎದ್ದು ಕಾಣುತ್ತದೆ.ಮತ್ತೊಂದೆಡೆ ಆಂಗ್ಲ ವ್ಯಾಮೋಹವು ಕನ್ನಡ ಶಾಲೆಗಳನ್ನು ಕನ್ನಡಿಗರ ಮನ ಮನದ ಬಾಗಿಲು ಮುಚ್ಚುವ ಸ್ಥಿತಿ ಬಂದೊದಗಿದೆ , ಇನ್ನು ಪ್ರತಿ ಹಳ್ಳಿಗಳಲ್ಲಿಯೂ ಪಾನಿಪೂರಿಗಳು ಲಗ್ಗೆ ಇಡುತ್ತಿದ್ದಾರೆ,ಕೆಲವೆ ವರ್ಷಗಳು ಕಳೆದರೆ ಈ ನಾಡು ಪರಕೀಯರಿಂದ ತುಂಬಿ ಕನ್ನಡ ಮಾಯವಾಗುವದರಲ್ಲಿ ಸಂಶಯವೇ ಇಲ್ಲ,ಇಂತಹ ಪರಿಸ್ಥಿತಿಯಲ್ಲಿ ಕನ್ನಡಿಗರಾದ ನಾವುಗಳು ಅತ್ಯಂತ ಜಾಗರೂಕತೆಯಿಂದ ಕೆಲವೊಂದು ನಿರ್ಣಯಗಳನ್ನು ನಿರ್ಧಾರಗಳನ್ನು ಕೈಗೊಳ್ಳಬೇಕಾದದ್ದು ಅವಶ್ಯವಾಗಿದೆ.

- Advertisement -
  • ಪ್ರತಿಯೊಬ್ಬರು ಕನ್ನಡ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕು,
  • ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಬೇಕು.
  • ಕನ್ನಡ ಬರುವವರ ಜೊತೆಗೆ ಮಾತ್ರ ವ್ಯವಹರಿಸಬೇಕು.
  • ಕನ್ನಡದಲ್ಲಿ ಓದಿದವರಿಗೆ ಮಾತ್ರ ಉದ್ಯೋಗ ಎನ್ನುವ ಕಾನೂನು ತರಬೇಕು.
  • ಕನ್ನಡ ತಂಟೆಗೆ ಬಂದವರಿಗೆ ತಕ್ಕ ಶಿಕ್ಷೆ ಯಾಗಬೇಕು.
  • ಕನ್ನಡ ನೆಲ ಜಲ ರಕ್ಷಣೆ ಮಾಡುವವರಿಗೆ ರಕ್ಷಣೆ ನೀಡಬೇಕು,
  • ಅಂಗಡಿಯ ಹಣೆಬರಹ ಕನ್ನಡದಲ್ಲಿ ಕಡ್ಡಾಯವಾಗಬೇಕು.
  • ಎಲ್ಲಾ ವಾಹನಗಳ ಅಂಕಿಗಳು ಕನ್ನಡದಲ್ಲಿ ಕಡ್ಡಾಯವಾಗಿ ಬರೆಯಿಸುವ ಕಾನೂನು ತರಬೇಕು
  • ಕನ್ನಡ ನೆಲದಲ್ಲಿಯ ಕಂಪನಿಗಳಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡಬೇಕು.

ಹೀಗೆ ಹತ್ತು ಹಲವಾರು ಕಾರ್ಯಕ್ರಮ ನಿರ್ಣಯಗಳನ್ನು ತೆಗೆದುಕೊಂಡರೆ ಕನ್ನಡ ಉಳಿದು ಬೆಳೆಯಬಹುದು.

ಯಲ್ಲಪ್ಪ ಮಲ್ಲಪ್ಪ ಹನಾ೯ಳಗಿ ಶಿಕ್ಷಕರು. ಕೊಪ್ಪಳ.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group