ಕವನ: ಆಶಾಕಿರಣ

Must Read

ಆಶಾಕಿರಣ

ಅನ್ನ ಅರಿವೆಯ ಜೊತೆಗೆ
ಅರಿವಿನ ಅರಿವು ಮೂಡಿಸಿದವಳು

ಹೆಣ್ಣು ಮಕ್ಕಳ ಎದೆಯಲಿ
ಅಕ್ಷರದ ಬೀಜ ಬಿತ್ತಿ
ನಿಜ ಬದುಕಿನ ಅರ್ಥ ತಿಳಿಸಿದವಳು

ಕುರುಡು ಸಂಪ್ರದಾಯದ
ರೀತಿನೀತಿಗಳಿಗೆ ಕೊಕ್ಕು ಹಾಕಿ
ಹಕ್ಕಿಗಾಗಿ ಧ್ವನಿಯತ್ತಿದವಳು

ಶೋಷಿತ ಅಬಲೆಯರಿಗೆ
ಅವ್ವಳಾಗಿ ಮಡಿಲಲ್ಲಿ
ಆಶ್ರಯ ಕೊಟ್ಟವಳು

ಅವಮಾನ ಅಡೆತಡೆಗಳನೆಲ್ಲ
ಅಡಿಪಾಯಕೆ ಹಾಕಿ
ಅಕ್ಷರದ ದೇಗುಲವ ಕಟ್ಟಿದವಳು

ಜ್ಯೋತಿಗೆ ಬತ್ತಿಯಾಗಿ
ಸುಡುತ ನೋವನುಂಡರು
ಅಜ್ಞಾನ ತಿಮಿರವನೋಡಿಸಿದವಳು

ವ್ಯವಸ್ಥೆಯ ಜೊತೆ ಹೋರಾಡಿದ
ಸ್ತ್ರೀ ಕುಲಕೆ ಶಿಕ್ಷಣಕೊಡುವ ಪಣತೊಟ್ಟು ಗೆದ್ದವಳು

ಸಾವಿರದ ಶರಣು ನಿನಗೆ ಸಾವಿತ್ರಿ ಆಧುನಿಕ ಶಿಕ್ಷಣದ ಮೊದಲ ಗುರುಮಾತೆಯಾದವಳು

ನೀನಿಟ್ಟ ಬೆಳಕಿಂದು ಬೆರಗುಮಡಿಸುತಿದೆ
ಮನೆಮನೆಯಲಿ ದೀಪಗಳ ಸಾಲು ನಗುತಲಿದೆ

ಅಂಗಳದಿಂದ ಬಾನಂಗಳದವರೆಗೂ
ಬೆಳಕು ಚೆಲ್ಲುತಾ ನಡೆದಿದೆ ಭಾರತದ ಸ್ತ್ರೀ ಕುಲ

ಡಾ. ನಿರ್ಮಲಾ ಬಟ್ಟಲ ಬೆಳಗಾವಿ

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group