- Advertisement -
ಬೀದರ – ಕೊರೋನಾ ಮುಕ್ತ ಜಿಲ್ಲೆ ಎಂದು ಹೆಸರು ಪಡೆದಿರುವ ಬೀದರ ಜಿಲ್ಲೆಯಲ್ಲಿ ಮತ್ತೆ ಕೊರೋನಾ ವಕ್ಕರಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಔರಾದ ತಾಲೂಕಿನಲ್ಲಿ ಬಂಜಾರಾ ಸಮಾಜದ ಸಮಾವೇಶ ನಡೆಸಿದ್ದು ಸಮಾವೇಶದಲ್ಲಿ ಯಾರೂ ಮಾಸ್ಕ್ ಧರಿಸಿರಲಿಲ್ಲ. ಸಾವಿರಾರು ಜನರು ಕೊರೋನಾ ವೈರಾಣುವಿನ ಭಯವೇ ಇಲ್ಲದೆ ಸಮಾವೇಶ ನಡೆಸಿದ್ದು ಈ ಹೆಮ್ಮಾರಿ ಮತ್ತೆ ವಕ್ಕರಿಸಬಹುದು ಎಂಬ ಭಯ ಜನರಲ್ಲಿ ಮನೆ ಮಾಡಿದೆ.
- Advertisement -
ಸಚಿವರು ಹೀಗೆ ಕೊರೋನಾ ನಿಯಮ ಉಲ್ಲಂಘಿಸಿ ಸಮಾವೇಶ ನಡೆಸಿದ್ದು ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ