- Advertisement -
ನಿಮ್ಮ ಮನೆಗೆ ಬರುವ ಗ್ಯಾಸ್ ಸಿಲಿಂಡರ್ ಪಡೆಯಬೇಕಾದರೆ ಇನ್ನು ಮೇಲೆ ನೀವು ಸರ್ಕಾರದ ಈ ಹೊಸ ನಿಯಮವನ್ನು ಪಾಲಿಸಬೇಕಾಗುತ್ತದೆ. ನೀವು ಬುಕ್ ಮಾಡಿದಾಗ ನಿಮಗೊಂದು ಮೆಸೇಜು ಬರುತ್ತದೆ ಅದರಲ್ಲಿ ನೀವು ನಿಮ್ಮ ಸಿಲಿಂಡರ್ ಡೆಲಿವರಿ ಬಾಯ್ ಗೆ ಹೇಳಬೇಕಾದ ಓಟಿಪಿ ಇರುತ್ತದೆ ಅದನ್ನು ನೀವು ಹೇಳಿದಾಗ ಮಾತ್ರ ನಿಮಗೆ ಸಿಲಿಂಡರ್ ಸಿಗುತ್ತದೆ.
ಓಟಿಪಿ ಅಂದರೆ ಇನ್ ಟೈಮ್ ಪಾಸ್ ವರ್ಡ್ ಸಂಖ್ಯೆ ಅದನ್ನು ಡೆಲಿವರು ಬಾಯ್ ಗೆ ಹೇಳಲೇಬೇಕೆಂಬ ನಿಯಮವನ್ನು ಭದ್ರತೆಗಾಗಿ ಹಾಗೂ ಗ್ಯಾಸ್ ದುರುಪಯೋಗ ತಡೆಯಲು ತರಲಾಗಿದೆ ಎಂದು ಸರ್ಕಾರ ಹೇಳಿದೆ.
ಈ ನಿಯಮವು ನ.೧ ರಿಂದ ಮೊದಲು ನೂರು ಮಹಾನಗರಗಳಲ್ಲಿ ಜಾರಿಗೆ ಬರಲಿದೆ. ಆಯಲ್ ಮತ್ತು ಗ್ಯಾಸ್ ಕಂಪನಿಗಳು ಡಲಿವರಿ ಅಥೆಂಟಿಕೇಶನ್ ಕೋಡ್ ( DAC ) ನ್ನು ಗ್ರಾಹಕರ ಮೊಬೈಲ್ ಗೆ ಕಳಿಸುತ್ತವೆ. ಇದೇ ನಂಬರನ್ನು ಡೆಲಿವರಿ ಬಾಯ್ ಗೆ ಹೇಳಿದಾಗ ಮಾತ್ರ ಸಿಲಿಂಡರ್ ನಿಮಗೆ ಸಿಗುತ್ತದೆ ಎಂದು ಮೂಲಗಳು ಹೇಳಿವೆ