ದೇಶಭಕ್ತಿ ಗೀತೆ: ರಾಷ್ಟ್ರಾಭಿಮಾನ

Must Read

ರಾಷ್ಟ್ರಾಭಿಮಾನ

ಸ್ವಾಭಿಮಾನದ ರಾಷ್ಟ್ರ ನಮ್ಮದು
ಪ್ರಾಣ ಮೀಸಲು ಇಡುವೆವು
ಸ್ವಾಭಿಮಾನದ ಸಮರ ಗೈಯುತ
ವೀರ ಮರಣವ ಪಡೆವೆವು||

ಕಟ್ಟಿಕಂಕಣ ಬದ್ಧರಾಗುತ
ವೈರಿ ಪಡೆಯನು ಹಳಿವೆವು
ಕುಟ್ಟಿ ದೈತ್ಯರ ಶಿರವ ಛೇದಿಸಿ
ತಾಯಿ ಪಾದವ ತೊಳಿವೆವು||

ವೈರಿ ಶೇಷವ ಕಿತ್ತು ಹೊಸೆದು
ರಾಷ್ಟ್ರ ರಕ್ಷಿಸಿ ನಿಲ್ಲುವೆವು
ಸೈನ್ಯ ಪಡೆಯದು ಗುಂಡು ಹಾರಿಸಿ
ದಾಳಿಕೋರರ ಕೊಲ್ಲುವೆವು||

ಹಿಂದೂ ದೇಶವು ಎಂದೂ ಬಗ್ಗದು
ತಂತ್ರ ಕುತಂತ್ರ ಆಟಕೆ
ಮುಂದೆ ಗೋವು ಹಿಂದೆ ನೋವು
ಕೊಡುವ ಹಿತಶತೃ ಕಾಟಕೆ ||

ರಾಷ್ಟ್ರಭಿಮಾನ ನಾವು ತೋರುತ
ಯುದ್ಧ ರಂಗದಿ ಕಾಯುವೆವು
ದುಷ್ಟರಧಮನ ನಾವು ಮಾಡುತ
ವಿಜಯ ಕಹಳೆಯ ಊದುವೆವು ||

ಶ್ರೀ ಈರಪ್ಪ_ಬಿಜಲಿ

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group