ಶೈಲ ಪುತ್ರಿ
ನವ ಅವತಾರಿಣಿ ಭಜಿಸುವೆ ಮಾತೆ.
ಮೊದಲಿಗಳಾಗಿ ಮನ ಮನೆ ಬೆಳಗಲು,
ಭ್ರಾಹ್ಮಿ ಮುಹೂರ್ತದಿ ಮನೆ ಮನ.
ಶುಚಿಸಿ ಪೂಜಿಸುವೆ ನಿನ್ನನು ಮಾತೆ!!
ನವ ಅವತಾರದಿ ಮೊದಲಿಗಳಾಗಿ.
ಕಿತ್ತಲಿ ವರ್ಣಧಾರಿಣಿ ಶೈಲಜಾಂಬೆಯ ರೂಪಿಣಿ,
ಪರಶಿವನೊಲುಮೆಗೆ ತಪಗೈದಿರಲು.
ಸಪ್ತ ಋಷಿಗಳ ಪರೀಕ್ಷೆಗೆ ಉತ್ತರ ನೀಡಲು!!
ಸಂಕಲ್ಪ ಸಿದ್ದಿಗೆ ದೃಢತೆಯ ಭಕ್ತಿಗೆ,
ಪರ್ವತದಂತೆ ಗಟ್ಟಿಯಾಗಿ ನಿಂತಿಹೆ ತಾಯಿ,
ವೃಷಭವಾಹಿನಿ ತ್ರೀಶೂಲ ಧಾರಿಣಿ,ಕಮಲ ಪಾಣಿನಿ,
ಹುಗ್ಗಿ ಪ್ರೀಯಣಿ. ನಮ್ಮನು ಕಾಯಿ!!
ಮೂಡಣ ಬೆಳಗುವ ಮೊದಲಿಗೆ.
ನಿನ್ನಯ ನಾಮವ ಭಜಿಸುತ ಬರುವೆ,
ಸಂಪತ್ತು ಸೌಭಾಗ್ಯ ನಾಡಿಗೆ ನೀಡು.
ಓ ಜಗದಂಬೆಯೆ ಸಕಲರ ಮನದಲಿ ನೀ ನೆಲೆಸಂಬೆ!!
ಎರಡನೇಯ ದಿವಸದಲ್ಲಿ ಮಾತೆ ಜಗನ್ಮಾತೆಯ ಅವತಾರ.
ಶ್ವೇತಾಂಭರಿ
ಧರೆಯ ಪೊರೆಯೆ ಮಹಾ ಮಾಯೆ,
ಬಾಲ ಬ್ರಹ್ಮಚಾರಿಣಿಯೆ.
ಶ್ವೇತದಾರೆ ಬಾಲ ತ್ರಿಪುರ ರಾಣಿ,
ನಮ್ಮ ಪೊರೆಯೆ ನಮೋ ನಮಃ!!
ಜಪಮಾಲೆ ಕಮಂಡದಾರಿಣಿ,
ಧೂಪ ದೀಪ ಅರ್ಪಿತೆ.
ಮಲ್ಲೆ ಮಾಲೆ ಮೊಗ್ಗೆ ಹೂವು,
ಕೊರಳ ಭೂಷಿತೆ ನಮೋ, ನಮಃ!!
ಸಕ್ಕರೆ ಪಾಯಸ ಅರ್ಪಿಸಿ ಭಜಿಸಿ,
ಭಕ್ತರ ಕಷ್ಟವನಾಲಿಸುವ.
ಮಂಗಳಾಂಗಿಯೆ ಬಾಲರೂಪಿಣಿಯೆ,
ಸರ್ವರ ರಕ್ಷಿಪೆ ನಮೋ ನಮಃ!!
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಶಿಕ್ಷಕರು