Homeಸುದ್ದಿಗಳುನಿವೃತ್ತ ಆರೋಗ್ಯ ನೌಕರ ಬರ್ಬರ ಹತ್ಯೆ: ಮೂವರ ಆರೋಪಿಗಳು ಅರೆಸ್ಟ್

ನಿವೃತ್ತ ಆರೋಗ್ಯ ನೌಕರ ಬರ್ಬರ ಹತ್ಯೆ: ಮೂವರ ಆರೋಪಿಗಳು ಅರೆಸ್ಟ್

ಬೀದರ – ೬೧ ವರ್ಷದ ನಿವೃತ್ತ ನೌಕರರೊಬ್ಬರನ್ನು ಅಮಾನುಷವಾಗಿ ಹತ್ಯೆಗೈದ ಪ್ರಕರಣದಲ್ಲಿ ಬೀದರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ದುಷ್ಕರ್ಮಿಗಳು ಮೈಲೊರ ನಗರದ ೬೧ ವರ್ಷದ ನಿವೃತ್ತ ನೌಕರರೊಬ್ಬರನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿ,ಪ್ರಕರಣ ಮುಚ್ಚಿ ಹಾಕಲು ಕೈಕಾಲು ಕಟ್ಟಿ ಗೋಣಿ ಚೀಲದಲ್ಲಿ ಹಾಕಿ ಚರಂಡಿ ಯಲ್ಲಿ ಬಿಸಾಡಿದ್ದರು ಆದರೆ ಪೊಲೀಸರು ಚಾಣಾಕ್ಷತೆಯಿಂದ ದುಷ್ಕರ್ಮಿಗಳ ಹೆಡೆಮುರಿ ಕಟ್ಡಿದ್ದಾರೆ.

ನಗರದ ಹೊರವಲಯ ಶುಕ್ಲ ತೀರ್ಥ ದೇವಸ್ಥಾನದ ಪಕ್ಕದಲ್ಲಿ ಬೀದರ್ ಕೋಟೆ ಹಿಂದುಗಡೆ ಬೀದರ್ ನಗರದ ಪೋಲಿಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವರಿಷ್ಠ ಅಧಿಕಾರಿ ಡಿ ಎಲ್ ನಾಗೇಶ ಮತ್ತು ಡಿವೈಎಸಪಿ ಬಸವರಾಜ ಹಿರಾ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group