Homeಲೇಖನಪುಸ್ತಕ ಪರಿಚಯ

ಪುಸ್ತಕ ಪರಿಚಯ

ಪುಸ್ತಕದ ಹೆಸರು: ಇಂಗ್ಲೆಂಡಿನ ರಾಜ ರಾಣಿಯರ ಕಥೆಗಳು

ಲೇಖಕರು : ಆಗುಂಬೆ ಎಸ್. ನಟರಾಜ್

ಪುಟಗಳು : 352+16, ಬೆಲೆ 250/-

ಮುದ್ರಣ ವರ್ಷ : ಮೊದಲ ಮುದ್ರಣ 2019

ಪ್ರಕಾಶಕರು : ಎ.ಎಸ್. ಬಿ. ಟ್ರಸ್ಟ್ (ರಿ) 947, 1ನೇ ಮಹಡಿ, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-40

ಆಗುಂಬೆ ಎಸ್. ನಟರಾಜ್ ಅವರು ಆಗುಂಬೆಯವರು. ಕೆನರಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರು. ಇವರು ಇಲ್ಲಿಯ ವರೆಗೆ 35 ಕೃತಿಗಳನ್ನು ರಚಿಸಿದ್ದು ಹಲವು ಪುಸ್ತಕಗಳು ಎರಡು, ಮೂರು, ಐದು ಮುದ್ರಣಗಳನ್ನು ಕಂಡಿವೆ. ‘ಇಂಗ್ಲೆಂಡ್ ರಾಜ ರಾಣಿಯರ ಕಥೆ’ ಗಳಲ್ಲಿ 41 ಅಧ್ಯಾಯಗಳಲ್ಲಿ ಇದ್ದು ರಾಜ ರಾಣಿಯರ ಇತಿಹಾಸ ವಿಲಿಯಮ್ 1 2 3 4 ಹೆನ್ರಿ 6 ಸ್ಟೀಫನ್, ಅಂಜೌರ ರಾಜ್ಯಭಾರ, ಹೆನ್ರಿ ರಿಚರ್ಡ 2, ಜಾನ್ ಹೆನ್ರಿ 3, ಎಡ್ವರ್ಡ 1ರಿಂದ 7, ಮೂರನೆಯ ರಿಚರ್ಡ 4, ಎಡ್ವರ್ಡ 7, 8 ನೇ ಹೆನ್ರಿ, 6ನೇ ಎಡ್ವರ್ಡ ಒಂದನೆ ಮೇರಿ ಎಲಿಜಬೆತ್ ಜೇಮ್ಸ್ ಚಾಲ್ರ್ಸ್, ಆನ್ನೆ ಒಂದರಿಂದ ಐದನೇ ಜಾರ್ಜ ವಿಕ್ಟೋರಿಯಾ 8ನೇ ಎಡ್ವರ್ಡ ಎರಡನೇ ಎಲಿಜಿಬೆತ್ ಹೀಗೆ 41 ಭಾಗಮಾಡಿದ್ದಾರೆ. ಮುಖಪುಟ ಆಕರ್ಷಕವಾಗಿದ್ದು ನಾರಾಯಣ ಅವರು ಛಾಯಾಕ್ಷರ ಜೋಡಣೆಯನ್ನು ವರ್ಷಿಣಿ ಗ್ರಾಫಿಕ್ಸ್ ದವರು ಮಾಡಿದ್ದು 18 ಪುಟಗಳಲ್ಲಿ ರಾಜರಾಣಿಯರ ಉತ್ತಮ ಛಾಯಾ ಚಿತ್ರಗಳಿವೆ.

ಫ್ರಾನ್ಸ್ ನ ನಾರ್‍ಮಂಡೀ ಪ್ರದೇಶದ ರಾಜನಾಗಿದ್ದ ಒಂದನೇ ವಿಲಿಯಂನಿಂದ ಇಂಗ್ಲೆಂಡ್ ಆಡಳಿತ ಪ್ರಾರಂಭಗೊಂಡಿತು ಎಂದಿದ್ದಾರೆ ಇತಿಹಾಸಕಾರರು. ಇದು ಜರುಗಿದ್ದು ಕ್ರಿ.ಶ. 1066 ರಲ್ಲಿ. ಜರ್ಮನ್ ಬುಡಕಟ್ಟಿನಲ್ಲಿ ಏಳು ಕ್ರೂರ್ ಬುಡಕಟ್ಟುಗಳಿದ್ದವು ಅವುಗಳಲ್ಲಿ ಒಂದು “ಆಂಗ್ಲೈ” ಎಂದಾಗಿದೆ. ಈ ಬುಡಕಟ್ಟಿನ ಹೆಸರು ಕ್ರಮೇಣ ‘ಆಂಗಲ್ಸ್’ ಎಂದಾಯಿತು ಇವರು ಭೂ ಮಾತೆಯನ್ನು ದೈವವಾಗಿ ಪೂಜಿಸುತ್ತಿದ್ದರು. ಗುಲಾಮರನ್ನು ಸದೆಬಡೆದು ಕೊಳ, ನೀರಿನ ಹೊಂಡಗಳಲ್ಲಿ ಹೂಳುವ ಪದ್ದತಿ ಇರಿಸಿಕೊಂಡಿದ್ದರು. ಈ ಆಂಗ್ಲೈರು ಕ್ರಮೇಣ ಇಂಗ್ಲೀಷ್ ಜನಾಂಗದವರಾಗಿ ಮಾರ್ಪಾಡಾಗಿದ್ದು ಐತಿಹಾಸಿಕ ಸತ್ಯವಾಗಿದೆ.

ವಿಲಿಯಂ 1 (1065-87) ಒಬ್ಬ ಬಲಿಷ್ಠ ಮತ್ತು ನಿರ್ದಯಿ ಆಕ್ರಮಣಕಾರಿ ಎಂದು ಬಣ್ಣಿಸಿದ್ದಾರೆ. ಅಂದಿನ ಫ್ರಾನ್ಸ್ ದೇಶದಲ್ಲಿ ರಾಜ ಹೆನ್ರೀ ಅಂಜೌಪ್ರಾಂತ್ಯದ ಕೌಂಟ್ ಜೀಯೋಪ್ರೇ ಮತ್ತು ಫ್ಲಾಂಡರ್ಸನ್ ಕೌಂಟ್ ಬಾಲ್ದೈನ್ ನಾರ್ಮಿಂಡೀಯ ನೆರೆ ಹೊರೆಯ ಅಧಿಪತಿಗಳಾಗಿ ಅವನಿಗೆ ಪ್ರತಿ ಸ್ಪರ್ಧಿಗಳಾಗಿದ್ದರು ವಿಲಿಯಂ ಫ್ಲಾಂಡರ್ಸನ್ ಕೆಂಟನ್ ಸಂಬಂಧಿಯಾಗಿದ್ದ ಮತ್ತು ಅವನ ಸ್ನೇಹದಿಂದ ತನ್ನ ರಾಜ್ಯದ ಬಲವರ್ಧನೆ ಆಗುತ್ತದೆ ಎಂದು ನಂಬಿದ್ದ ಆದ್ದರಿಂದ ಅವನು ಕೌಂಟ್ ಬಾಲ್ಡ್ ವಿನ್ ನ ಮಗಳಾದ ರಾಜಕುಮಾರಿ ಮಟಿಲ್ಡಾಳನ್ನು ಲಗ್ನನಾಗಲು ಇಚ್ಚಿಸಿದ ಅವರ ವಿವಾಹಕ್ಕೆ ರೋಮನ್ ಪೋಪ್ ಸಮ್ಮತಿ ನೀಡದಿದ್ದರೂ ವಿಲಿಯಂ ಮಟ್ಟಿಲ್ಡಾನನ್ನು ಲಗ್ನವಾದ ಕನ್ಯೆ ಕೇವಲ ನಾಲ್ಕು ಅಡಿ ಹತ್ತು ಅಂಗುಲ ಎತ್ತರವಿದ್ದರೆ ವಿಲಿಯಮ್ ಐದು ಅಡಿ ಹತ್ತು ಅಂಗುಲ ಎತ್ತರವಿದ್ದು ಅದು ಏನಾಗಿದ್ದರೂ ವಿಲಿಯಂ ಮಾತ್ರ ಏಕ ಪತ್ನಿ ವೃತಹಿಡಿದು ಪತ್ನಿಗೆ ದ್ರೋಹ ಬಗೆಯದೆ 9 ಮಕ್ಕಳ ತಂದೆಯಾದ.

ವಿಲಿಯಂ 11 (1087-1100) ಇವರು ನಿರ್ಭಯದಿಂದ ಆಡಳಿತ ಜರುಗಿಸಿದ ಇಂಗ್ಲೀಷ್ ಕಡಲ್ಗಾವಲನ್ನು ಯಾರ ಭಯ ಆತಂಕವಿಲ್ಲದೆ ತನ್ನ ಇಷ್ಟದ ಪ್ರಕಾರ ದಾಟಿ ನಾರ್ಮಂಡಿಯನ್ನು ಆಳಿ ಸಮರ್ಥ ಸಾಮ್ರಾಟನಾಗಿ ಮರೆಯತೊಡಗಿದ ಆದರೆ ದೈವ ಸಂಕಲ್ಪ ಬೇರೆ ಇತ್ತು.

ಒಮ್ಮೆ ಕಾಡಿನಲ್ಲಿ ಬೇಟೆಯಾಡುವಾಗ ಎಲ್ಲಿಂದಲೋ ಹೂಡಿ ಬಂದ ಬಾಣ ಅವರ ದೇಹವನ್ನು ಹೊಕ್ಕಿ ಅವನ ಪ್ರಾಣ ತೆಗೆಯಿತು. ಅವನು ದುರ್ಮರಣಕ್ಕೆ ಈಡಾದ 02/08/100 ಅವನ ಶವವನ್ನು ವಿಂಟಿಸ್ಟರ್ ಚರ್ಚನ ಮೂಲ ಗೋಪುರದ ಕೆಳಭಾಗದಲ್ಲಿ ಹೂಳಲಾಯಿತು. ಮೂರನೆವರ್ಷ ಗೋಪುರ ಕುಸಿದು ನೆಲಕ್ಕೆ ಉರುಳಿತು. ಚಾಣಾಕ್ಷ ಯುದ್ದ ನಿಪುಣ ಮತ್ತು ವಿಲಾಸಿಯಾಗಿದ್ದ ಅವನು ಬ್ರಹ್ಮಚಾರಿಯಾಗಿ ಮರಣ ಹೊಂದಿದ.
ಹೆನ್ರಿ 1 (ಕ್ರಿ.ಶ. 1100-35 ) 35 ವರ್ಷಗಳ ಕಾಲ ರಾಜ್ಯಭಾರ ಮಾಡಿದ ಹೆನ್ರಿ ಒಬ್ಬ ಪ್ರತಿಭಾವಂತ ಚಾಣಾಕ್ಷ, ಸಮಚಿತ್ತ, ಕ್ರಮಬದ್ಧ ರಾಜನಾಗಿದ್ದ ಎಂದು ವಿವರಿಸಿದ್ದಾರೆ.

ಇತಿಹಾಸಕಾರರು. ಅವನ 35 ವರ್ಷಗಳ ಅಧಿಕಾರದ ಅವಧಿಯಲ್ಲಿ ಇಂಗ್ಲೆಂಡಿನಲ್ಲಿ ಪ್ರಜೆಗಳು ಯಾವ ತರಹ ದಂಗೆ, ವಿರೋಧ ಎಸಗದಿದ್ದುದು ಅವನ ಚಾಣಾಕ್ಷತೆ ಮತ್ತು ಆಡಳಿತ ಕುಶಲತೆಗಳನ್ನು ಎತ್ತಿ ತೋರಿಸುತ್ತದೆ.

ಸ್ಟೀಫನ್ (ಆ1135-54) 22-12-1135 ರಲ್ಲಿ ಹೆನ್ರಿಯ ಮರಣದ ಸುದ್ದಿ ಅರಿತ ಕೂಡಲೆ ಇಂಗ್ಲೀಷ್ ಕಡಲಗಾಲುವೆ ದಾಟಿ ಇಂಗ್ಲೆಂಡ್‍ಗೆ ಕಾಲಿಟ್ಟ ಕಿರೀಟಧಾರಣೆ ಮಾಡಿಸಿಕೊಂಡು ರಾಜ್ಯದ ರಾಜನಾದ ಈ ಕಥೆಗಳಲ್ಲಿ ಧಾರಣೆ ಮಾಡಿಸಿಕೊಂಡು ರಾಜ್ಯದ ರಾಜನಾದ ಈ ಕಥೆಗಳಲ್ಲಿ ಅವರ ದುರಾಕ್ರಮಗಳು ಹತ್ಯೆಗಳು ಪಿತೂರಿಗಳು ರೂಪಕವಾಗಿವೆ.

ರಾಣಿ ಎಲಿಜಿಬೆತ್ ಸಿಂಹಾಸನವೇರಿದಾಗ, ರಾಜ್ಯದ ಬೊಕ್ಕಸ ಬರಿದಾಗಿತ್ತು ಬೊಕ್ಕಸವನ್ನು ತುಂಬವ ಕಾರ್ಯವನ್ನು ಬುದ್ದಿವಂತಿಕೆಯಿಂದ ಮಾಡಿದಳು. ಪ್ರಜೆಗಳ ಮೇಲೆ ನೇರವಾಗಿ ಕರಭಾರ ಹೊರಿಸದೆ ಆಮದು ರಪ್ತು ವ್ಯಾಪಾರದ ಮೇಲೆ ಕರ ಹೇರಿ ಬೊಕ್ಕಸ ತುಂಬಿದಳು ಸರಕಾರಿ ಜಮೀನು ಚರ್ಚಗಳಿಂದ ಪಡೆದ ವರಮಾನ ಮತ್ತು ಧನಿಕರಿಂದ ಸಾಲ ಪಡೆದು ಬೊಕ್ಕಸ ತುಂಬಿಸಿದಳು ತಂದೆ ಸಹೋದರ ಮತ್ತು ಸಹೋದರಿಯರು ಮಾಡಿದ್ದ ಸಾಲವನ್ನು ತೀರಿಸಿದಳು. ಇದರಿಂದ ಅವಳ ಪ್ರತಿಷ್ಟೆ ಕುದುರಿತು ಹೊರ ದೇಶಗಳಿಂದ ಸುಲಭವಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಸಮರ್ಥಳಾದಳು ಹಣಕಾಸಿನ
ವ್ಯವಹಾರದಲ್ಲಿ ಚತುರಳಾಗಿ ವೃಥಾ ಖರ್ಚು ಮಾಡದಿದ್ದರೂ ತನ್ನ ಉಡುಗೆ ತೊಡೆಗೆಗಳ ಬಗ್ಗೆ ಮತ್ತು ತನ್ನ ಆತ್ಮೀಯರಿಗೆ ಉದಾರವಾಗಿ ದಾನ ಧರ್ಮ ಮಾಡುವದರಲ್ಲಿ ಹಿಂದೆ ಬೀಳಲಿಲ್ಲ
ರಾಣಿ ಎಲಿಜೆಬೆತ್ ವೈಯಕ್ತಿಕ ಪ್ರೇಮ ಬಹಳ ಕುತೂಹಲವಾಗಿ ಸಾಗಿ ಓದಿಸಿಕೊಂಡು ಹೋಗುತ್ತದೆ. ಪ್ರಜೆಗಳನ್ನು ಅಪಾರವಾಗಿ ಪ್ರೀತಿಸಿದಳು ಮತ್ತು ಅವಳನ್ನು ಅದೇ ರೀತಿ ಅವರು ಪ್ರೀತಿಸಿದರು ಈ ಪ್ರೀತಿಗೆ ಕಾರಣ ಅವಳು ತೋರಿದ ರಾಷ್ಟ್ರ ಶ್ರದ್ಧೆ ರಾಷ್ಟಾಭಿಮಾನ ರಾಷ್ಟ್ರ ಭಕ್ತಿಗಳಾಗಿದ್ದವು. ಕರ್ತವ್ಯನಿಷ್ಠೆ ರಾಜ್ಯಭಾರದಲ್ಲಿ ತೋರಿಸಿದ ಕಾಳಜಿ ಅವಳನ್ನು ಮಹಾ ರಾಣಿ ಎಂದು ಕರೆಯವ ಹಾಗೆ ಮಾಡಿದ್ದವು ರಾಣಿ ಎಲಿಜಬೆತ್ ಳ ಆಳ್ವಿಕೆಯ ಕಾಲವನ್ನು ಒಂದು ಯುಗವೆಂದು ಕರೆದರು.

ನಿಜವಾಗಿ ಆಗುಂಬೆ ನಟರಾಜ್ ಅವರು ಅನ್ವೇಷಕರಾಗಿ ಬಹಳ ಶ್ರಮಪಟ್ಟು ವಿಷಯ ಸಂಗ್ರಹಿಸಿದ್ದು ಮೆಚ್ಚುತಕ್ಕದೇ ಅವರ ಎಲ್ಲ ರಾಜ ರಾಣಿಯರ ಕಥೆಗಳು ಓದಿಸಿಕೊಂಡು ಹೋಗುತ್ತವೆ ಇಂತಹ ಪುಸ್ತಕಗಳನ್ನು ವಿಶ್ವವಿದ್ಯಾಲಯದವರು ಗಮನಿಸಿ ಇತಿಹಾಸ ವಿಭಾಗಕ್ಕೆ ಪಠ್ಯಪುಸ್ತಕವಾಗಿ ಆಯ್ಕೆ ಮಾಡಬೇಕು ಹಾಗೂ ಕನ್ನಡಿಗರು ಇವುಗಳನ್ನು ಓದಿ ಇತಿಹಾಸ ತಿಳಿದುಕೊಳ್ಳಬೇಕು ಅವರ ಪ್ರಯಾಣ ಅದರ ಕಷ್ಟ ಕಾರ್ಪಣ್ಯಗಳು ಮತ್ತು ಆಳದ ಅಧ್ಯಯನ ಮತ್ತು ಚಿಕಿತ್ಸಾತ್ಮಕ ವಿಶ್ಲೇಷಣೆ ಮತ್ತು ವಿಮರ್ಶೆ ಕನ್ನಡ ಸಾಹಿತ್ಯ ಲೋಕದ ಮೇರು ಕೃತಿ ಇದಾಗಿದೆ.

ಎಲೆ ಮರೆಯ ಕಾಯಿಯಂತೆ ತಮ್ಮ ಲೋಕದಲ್ಲೇ ವಿಹರಿಸುತ್ತಿರುವವರು ತಮ್ಮ ವೈಯಕ್ತಿಕ ನೋವು ನಲಿವುಗಳನ್ನು ಬದಿಗಿಟ್ಟು ತಮ್ಮ ಸ್ವಂತ ಖರ್ಚಿನಲ್ಲಿ ಉತ್ಕೃಷ್ಟ ಮಟ್ಟದ ಸಾಹಿತ್ಯ ನೀಡಿದ್ದಾರೆ. ಇವರಿಗೆ ವಿಶ್ವವಿದ್ಯಾಲಯದರು ಗೌರವ ಡಾಕ್ಟರೇಟ್ ನೀಡುವುದಾಗಬೇಕು ಇವರ ಸಾಹಿತ್ಯ ಕೃಷ್ಟಿ ನಿರಂತರವಾಗಿರಲಿ ಕನ್ನಡ ಸಾಂಸ್ಕೃತಿಕ ಲೋಕ ಇನ್ನಷ್ಟು ಅವರ ಕೃತಿಗಳಿಂದ ಶ್ರೀಮಂತಗೊಳ್ಳಲಿ ಎಂದು ಎಂ. ಸುದರ್ಶನರಾಜ ಮುನ್ನುಡಿ ಬರೆದಿದ್ದಾರೆ.

ಇಂಗ್ಲೆಂಡನ್ನು ಆಕ್ರಮಿಸಿ ಆಳಿದ ಫ್ರೆಂಚ್ ರಾಜ್ ವಿಲಿಯಮ್ ನಿಂದ ಎರಡನೆ ಎಲಿಜಿಬೆತ್ ರಾಣಿಯವರಿಗಿನ ಕಥಾ ಪುಂಜವನ್ನು ಆಗುಂಬೆ ಎಸ್ ನಟರಾಜ ಅವರು ಈ ಪುಸ್ತಕದಲ್ಲಿ ಸವಿಸ್ತಾರವಾಗಿ ದಾಖಲಿಸಿದ್ದಾರೆ. ಇಂಗ್ಲೆಂಡಿನ ರಾಜರಾಣಿಯರು ಆಳಿ ತಮ್ಮ ಶೌರ್ಯ, ಪ್ರತಾಪ, ಕುಟಿಲತೆ, ಕ್ರೂರತೆ ರಾಜಕೀಯ ಕುಶಲತೆ, ಪರರಾಷ್ಟ್ರಗಳ ವಿರುದ್ದ ಜರುಗಿಸಿದ ಆಕ್ರಮಣಕಾರಿ ಯುದ್ದಗಳು, ದುರಾಕ್ರಮಣಗಳು, ಹತ್ಯೆಗಳು, ಪಿತೂರಿಗಳು ಮುಂತಾದ ಐತಿಹಾಸಿಕ ಸಂಗತಿಗಳು ರೋಚಕ ಹಾಗೂ ಮನರಂಜನೆಯಾಗಿವೆ. ಇವರ ಚರವಾಣಿ 9481423004

ಶ್ರೀ ಎಂ.ವೈ. ಮೆಣಸಿನಕಾಯಿ
ಬೆಳಗಾವಿ : 9449209570

RELATED ARTICLES

Most Popular

error: Content is protected !!
Join WhatsApp Group