ಶರಣರ ಜನಪರ ನಿಲುವುಗಳು
ಹಾಸನದ ಸಾಹಿತ್ಯ ಸಾಂಸ್ಕೃತಿಕ ಸಂಘಟನೆ ಮನೆ ಮನೆ ಕವಿಗೋಷ್ಠಿ ವತಿಯಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ 318ನೇ ತಿಂಗಳ ಸಾಹಿತ್ಯ ಕಾಯ೯ಕ್ರಮದಲ್ಲಿ
ದಿನಾಂಕ:-02/06/2024, ಇಳಿಹೊತ್ತು 3:30ಕ್ಕೆ
ಭಾರತಿ ವಿದ್ಯಾಮಂದಿರ ಅರಳಿಕಟ್ಟೆ ವೃತ್ತದ ಸಮೀಪ, ಸಾಲಗಾಮೆ ರಸ್ತೆ, ಹಾಸನ ಇಲ್ಲಿ ಪುಸ್ತಕ ವಿಮರ್ಶೆ ಹಾಗೂ ಕವಿಗೋಷ್ಠಿ ನಡೆಯಲಿದೆ.
ಶ್ರೀಮತಿ ಸುಶೀಲಾ ಸೋಮಶೇಖರ್ ಅವರ
ಶರಣರ ಜೀವಪರ ನಿಲುವುಗಳು ಕೃತಿ ಕುರಿತು ಸಮುದ್ರವಳ್ಳಿ ವಾಸು ಯುವ ಸಾಹಿತಿಗಳು ಇವರು ಉಪನ್ಯಾಸ ನೀಡುವರು.
ನಂತರ ಆಗಮಿತ ಕವಿಗಳಿಂದ ಕವಿ ಗೋಷ್ಠಿ, ಗಾಯಕ ಗಾಯಕಿಯರಿಂದ ಗಾಯನ ಕಾರ್ಯಕ್ರಮ ಇರುವುದು.
ಕಾರ್ಯಕ್ರಮದ ಪ್ರಾಯೋಜಕರು ಶ್ರೀಮತಿ ನೀಲಾವತಿ ಕೆ.ಎನ್ ಕವಯತ್ರಿ ಹಾಗೂ ಶಿಕ್ಷಕಿ. ಹೆಚ್ಚಿನ ಸಂಖ್ಯೆಯಲ್ಲಿ
ಕವಿಗಳು, ಗಾಯಕರು, ಸಾಹಿತ್ಯಾಸಕ್ತರು ಭಾಗವಹಿಸಿ ಕಾಯ೯ಕ್ರಮ ಯಶಸ್ವಿಗೆ ಸಹಕರಿಸಬೇಕಾಗಿ ಮನೆ ಮನೆ ಕವಿ ಗೋಷ್ಠಿ ಸಂಚಾಲಕರು ಮತ್ತು ಸಾಹಿತಿ
ಗೊರೂರು ಅನಂತರಾಜು ಕೋರಿದ್ದಾರೆ.
ಸಂಪರ್ಕಕ್ಕಾಗಿ ಸಂಖ್ಯೆಗಳು
94494 62879
9449311298