spot_img
spot_img

ಬೆಳಗಾವಿ ತಲುಪಿದ ಲಸಿಕೆ; ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಲಸಿಕಾ ಕೇಂದ್ರ

Must Read

spot_img
- Advertisement -

ಇದೇ ಜನವರಿ ೧೬ ರಿಂದ ಹಂಚಿಕೆಯಾಗಲಿರುವ ಪುಣೆಯ ಸೀರಂ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವ ಕೊರೋನಾ ಲಸಿಕೆ ಪೆಟ್ಟುಗೆಗಳು ಕೊಗನೊಳ್ಳಿ ಚೆಕ್ ಪೋಸ್ಟ ಮೂಲಕ ನಗರದ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋಗೆ ಆಗಮಿಸಿದವು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಲಸಿಕೆಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡು, ಸರ್ಕಾರದ ಸೂಚನೆಯಂತೆ ಆಯಾ ಜಿಲ್ಲೆಗಳಿಗೆ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ಕೂಡ ನೀಡಿದರು.

ಬೆಳಗಾವಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳಲ್ಲಿ ವಿತರಿಸಲು ನೀಡಲಾಗಿರುವ ಒಟ್ಟಾರೆ 1.47 ಲಕ್ಷ ಲಸಿಕೆಗಳನ್ನು ಬೆಳಗಾವಿಯಲ್ಲಿ ಸಂಗ್ರಹಿಸಲಾಗಿದೆ. ಒಟ್ಟು 13 ಬಾಕ್ಸ್ ಗಳಲ್ಲಿ ಬಂದಿರುವ ಲಸಿಕೆಗಳ ಪೈಕಿ ಕೆಲವು ಬಾಕ್ಸ್ ಗಳನ್ನು ಬಾಗಲಕೋಟೆಯಲ್ಲಿರುವ ಪ್ರಾದೇಶಿಕ ಲಸಿಕಾ ಘಟಕಕ್ಕೆ ಕಳಿಸಲಾಗುತ್ತಿದ್ದು, ಪೂರ್ವ ನಿಗದಿಯಂತೆ ಜ.16 ರಿಂದ ಲಸಿಕಾ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಆರ್.ಸಿ.ಎಚ್. ಡಾ.ಆರ್.ಐ.ಗಡಾದ ತಿಳಿಸಿದ್ದಾರೆ.

- Advertisement -

ಬೆಳಗಾವಿ ಘಟಕದ ಮೂಲಕ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹಾಗೂ ಬಾಗಲಕೋಟೆಯ ಪ್ರಾದೇಶಿಕ ಘಟಕದ ಮೂಲಕ ಬಾಗಲಕೋಟೆ, ವಿಜಯಪುರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಲಸಿಕೆ ವಿತರಣೆ ನಡೆಯಲಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಳಗಾವಿ ಜಿಲ್ಲೆಯಲ್ಲಿ ಜನವರಿ 16 ರಂದು ಹನ್ನೆರಡು ಕಡೆಗಳಲ್ಲಿ ಕೋವಿಡ್ ಲಸಿಕಾ ಕಾರ್ಯಕ್ಕೆ ಚಾಲನೆ ದೊರೆಯಲಿದೆ.

- Advertisement -

ಅಥಣಿ , ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಖಾನಾಪುರ, ರಾಯಬಾಗ , ರಾಮದುರ್ಗ, ಸವದತ್ತಿ, ಹುಕ್ಕೇರಿ, ಕೊಣ್ಣೂರು, ವಂಟಮೂರಿ ಇವುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಬೆಳಗಾವಿಯ ಬಿಮ್ಸ್ ಜಿಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group